79ನೇ ಸ್ವಾತಂತ್ರೋತ್ಸವದ ಭಾರತೀಯ ತಿಲಕವೇ ಸಿಂಧೂರ: ರಾಜುಗೌಡ.
ಹಿರಿಯ ನೇತಾರರ ಸ್ಮರಣೆಯೊಂದಿಗೆ ರಾಷ್ಟ್ರೀಯ ಮನೋಭಾವ, ರಾಷ್ಟ್ರಭಕ್ತಿ, ರಾಷ್ಟ್ರ ಧ್ವಜ ದೇಶಾಭಿಮಾನದೊಂದಿಗೆ ಬದುಕಿ ಬದುಕಿಸಲು ಮುಂದಾಗಿ ಎಂದು ಸ್ಥಳೀಯ ಆರ್.ಟಿ.ಜೆ.ಆಂಗ್ಲ ಮಾಧ್ಯಮ ಶಾಲೆಯಲ್ಲಿ 79ನೇ ಸ್ವಾತಂತ್ರೋತ್ಸವದಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಸಚಿವ ನರಸಿಂಹನಾಯಕ(ರಾಜುಗೌಡ) ಧ್ವಜಾರೋಹಣ ನೆರವೇರಿಸಿ ಮಾತನಾಡಿದರು
ಮಹಲಿನ ಮಠದ ಶ್ರೀ ವೃಷಬೇಂದ್ರ ಮಹಾಸ್ವಾಮಿಜೀ ಸಾನಿಧ್ಯದಲ್ಲಿ, ನೀಲಕಂಠಸ್ವಾಮಿ ಮಠ, ರಾಜಾ ಜಿತೇಂದ್ರನಾಯಕ ಜಾಹಗೀರದಾರ, ರಾಜಾ ವೆಂಕಟಪ್ಪನಾಯಕ ಜಾಹಗೀರದಾರ, ಸಂಸ್ಥೆಯ ಕಾರ್ಯಧ್ಯಕ್ಷ ಹಣಮಂತನಾಯಕ(ಬಬಲುಗೌಡ), ಪ್ರ.ಗು. ಶ್ರೀನಿವಾಸ ಮಡ್ಡಿ, ಶಾಮಸುಂದರ ಜೋಷಿ, ವಿ.ಎಸ್.ಹಾವೇರಿ, ಐ.ಆರ್.ಘಾಟೆ, ದೇವು ಗೋಪಾಳಿ ಇತರರಿದ್ದರು. ವಿದ್ಯಾರ್ಥಿಗಳಿಂದ ಮನರಂಜನಾತ್ಮಕ ಕಾರ್ಯಕ್ರಮಗಳು ನಡೆದವು. ವೈಷ್ಣವಿ/ಟಿಪ್ಪು ಮಸ್ತಾನ್ ನಿರೂಪಿಸಿದರು, ಅಭಿಷೇಕ/ಹರ್ಷವರ್ದನ್ ಸ್ವಾಗತಿಸಿದರು, ಸಾಕ್ಷಿ ಸಜ್ಜನ ವಂದಿಸಿದರು.