ಅಪಘಾತ ಮುಕ್ತ ಸಂಚಾರ ವ್ಯವಸ್ಥೆ' ಹಾಗೂ ದ್ವಿಚಕ್ರ ವಾಹನಗಳಿಗೆ ಕಡಿವಾಣ - ಸಿಪಿಐ ರವಿ ಕುಮಾರ. ನಾಯ್ಕೋಡಿ.

Udayavani News
0
ಹುಣಸಗಿ ಪಟ್ಟಣದಲ್ಲಿ 'ಅಪಘಾತ ಮುಕ್ತ ಸಂಚಾರ ವ್ಯವಸ್ಥೆ'ಯನ್ನು ಮಾಡುವಲ್ಲಿ ಶೀಘ್ರದಲ್ಲಿಯೆ ಅತ್ಯಂತ ಕಟ್ಟುನಿಟ್ಟಾದ ಕಾನೂನು ಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ಹುಣಸಗಿ ಸಿ.ಪಿ.ಐ ರವಿ ಕುಮಾರ ನಾಯ್ಕೋಡಿ ಹೇಳಿದರು.

ಹುಣಸಗಿಯಲ್ಲಿನ ತಮ್ಮ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ಈ ಕುರಿತಂತೆ ಹುಣಸಗಿಯ ಸ್ಥಳೀಯ ಜನಪ್ರತಿನಿಧಿಗಳು, ವ್ಯಾಪಾರಸ್ಥರು ಸೇರಿದಂತೆ ಎಲ್ಲ ವರ್ಗದ ಜನರು ಅಗತ್ಯ ಸಹಕಾರ ನೀಡುವಂತೆ ತಿಳಿಸಿದರು.   ಇದರಿಂದ 'ರಸ್ತೆ ಅಪಘಾತ ಮುಕ್ತ' ಸ್ಥಿತಿ ನಿರ್ಮಾಣವಾಗಿ ಎಲ್ಲ ನಾಗರಿಕರಿಗೂ ತುಂಬ ಅನುಕೂಲವಾಗಲಿದೆ ಎಂದರು.

ಪಟ್ಟಣದಲ್ಲಿನ ಬಸ್ ನಿಲ್ದಾಣ, ಕಿತ್ತೂರು ಚನ್ನಮ್ಮ ವೃತ್ತ, ಬಸವೇಶ್ವರ ವೃತ್ತ ಹಲವು ಕಡೆಗಳಲ್ಲಿ

ದ್ವಿಚಕ್ರ ವಾಹನಗಳ ಯದ್ವಾ ತದ್ವಾ ಪಾರ್ಕಿಂಗ್‌ನಿಂದಾಗಿಯೆ ಅನೇಕ ಸಣ್ಣಪುಟ್ಟ ಮತ್ತು ಗಂಭೀರವಾದ ರಸ್ತೆ ಅಪಘಾತಗಳು ಸಂಭವಿಸಲು ಕಾರಣವಾಗಿದೆ. ಅಲ್ಲದೆ ಪಟ್ಟಣದ ಬಸವೇಶ್ವರ ವೃತ್ತದಿಂದ ನಾರಾಯಣಪುರ ಮುಖ್ಯ ಮಾರ್ಗದ ಕಾಮಗಾರಿಗಾಗಿ ರಸ್ತೆಯ ತೋಡುವಿಕೆಯಿಂದಾಗಿಯೂ ಜನರು ಭಾರಿ ಸಂಕಷ್ಟಮಯವಾದ ದುಸ್ಥಿತಿ ಎದುರಾಗಿದೆ

ఎంబ ಸಾರ್ವಜನಿಕರಿಂದ ಕೇಳಿ ಬರುತ್ತಿರುವ ಆರೋಪವನ್ನೂ ಕೂಡ ಗಂಭೀರವಾಗಿ ಪರಿಗಣಿಸಿದ್ದಾಗಿ ತಿಳಿಸಿದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚೆ ನಡೆಸುವುದಾಗಿಯೂ ಹೇಳಿದರು.

ಗುಂಡಲಗೇರಾ ವಜ್ಜಲ, ಕಾಮನಟಗಿ ಗ್ರಾಮಗಳ ಸಮೀಪದ ಅಲ್ಲದೆ ಹುಣಸಗಿ ಹತ್ತಿರದ ಇಸಾಂಪುರ, ಹಾಗೂ ಮುಖ್ಯ ರಸ್ತೆಯ ಹಲವು ಕಡೆಗಳಲ್ಲಿ ಸಂಚಾರಿ ವ್ಯವಸ್ಥೆಯ ಸಿಗ್ನಲ್‌ಗಳ ಫಲಕಗಳನ್ನು ಸಹ ಅಳವಡಿಸುವಲ್ಲಿಯೂ ಅಗತ್ಯ ಕ್ರಮ ಜರುಗಿಸುವುದಾಗಿ ಮತ್ತು ಪಟ್ಟಣದ ಕೆಲ ಸಂಚಾರಿ ದಟ್ಟಣೆ ಸ್ಥಳಗಳಲ್ಲಿ ಪೊಲೀಸ್ ಮಾಡುವುದಾಗಿಯೂ ಬಂದೋಬಸ್ತ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ತಿಳಿಸಿದರು.

ಈ ನಿಟ್ಟಿನಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಮತ್ತು ಮುಖ್ಯ ಅಧಿಕಾರಿಗಳು ಸೇರಿದಂತೆ ಇತರ ಸಿಬ್ಬಂದಿಗಳೊಂದಿಗೆ ಸಭೆಯನ್ನೂ ಕೂಡ ತ್ವರಿತದಲ್ಲಿ ಮಾಡುವುದಾಗಿ ತಿಳಿಸುತ್ತ, ಒಟ್ಟಾರೆ ಸಂಚಾರ ಸುಧಾರಣೆಗಾಗಿ ಯಾವುದೆ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಿಪಿಐ ರವಿ ನಾಲ್ನೋಡಿ ಹೇಳಿದರು.

ಈ ಸಂದರ್ಭದಲ್ಲಿ ಹುಣಸಗಿ ಪಿಎಸ್‌ಐ ಚಂದ್ರಶೇಖರ ನಾರಾಯಣಪುರ ಇದ್ದರು.

ವರದಿಗಾರ : ಶಿವು ರಾಠೋಡ

Post a Comment

0Comments

Post a Comment (0)