
ಹುಣಸಗಿ : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕ ಯಾದಗಿರಿ ಮತ್ತು ಹುಣಸಗಿ ಪಟ್ಟಣದ ಮುಖಂಡರು ಮತ್ತು ಜಿಲ್ಲೆಯ ಎಲ್ಲಾ ಸೇನಾಪಡೆಯ ಅಧಿಕೃತ ಮಾಜಿ ಸೈನಿಕರು 1971ರ ಯುದ್ಧದಲ್ಲಿ ಭಾಗವಹಿಸಿದ,ಹಾಗೂ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಸೈನಿಕರು ಸೇರಿದಂತೆ ಜಿಲ್ಲೆಯ ಮಾಜಿಸೈನಿಕರು ಹಾಗೂ ಹುಣಸಗಿ ತಾಲೂಕಿನ ಮುಖಂಡರು,ಗ್ರಾಮಸ್ಥರು,ವಿದ್ಯಾರ್ಥಿಗಳು,ವಿಧ್ಯಾನಿಯರುಶಿಕ್ಷಕರು,ಹುಣಸಗಿ ಪಟ್ಟಣದ ಎಲ್ಲಾ ಜನ ಸಾಮಾನ್ಯರು ಅಕ್ಕ ತಂಗಿಯರು, ಹಮ್ಮಿಕೊಂಡಿರುವ ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವ ನ್ನೂ ಅದ್ದೂರಿಯಾಗಿ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ನರಸಿಂಹ ನಾಯಕ ರಾಜುಗೌಡರು. ಮಾಜಿ ಸಚಿವರು,ಹಾಗೂ ಮಾಜಿ ಶಾಸಕರು ಸುರಪುರ ಮತ್ತು ಶ್ರೀಗಳು (ಗುಳಬಾಳ) ಹಾಗೂ ಶ್ರೀಗಳು (ಬಾಲಶೆಟ್ಟಿಹಾಲ್) ರವರೆಲ್ಲೂ ಸೇರಿ ದೇಶಕ್ಕಾಗಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಹಾಗೂ ವಿಜಯೋತ್ಸವವನ್ನು ಬಹಳ ಅದ್ಧೂರಿಯಾಗಿ ಜರುಗಿತು.
ಈ ವಿಜಯೋತ್ಸವದಲ್ಲಿ ಪಾಲ್ಗೊಂಡಂತಹ ಹುಣಸಗಿ ತಾಲೂಕಿನ ಎಲ್ಲಾ ಮುಖಂಡರುಗಳಿಗೆ ಮತ್ತು ಜನಸಾಮಾನ್ಯರು ಗಳಿಗೆ ವಿದ್ಯಾರ್ಥಿಗಳು ಶಿಕ್ಷಕರು ಪತ್ರಕರ್ತರು ದೇಶಭಕ್ತರು ಪಾಲ್ಗೊಂಡಿದರು.
ವರದಿಗಾರ : ಶಿವು ರಾಠೋಡ