ನಾರಾಯಣಪುರ: ಬಸವಸಾಗರ ಜಲಾಶಯದ 25 ಕ್ರಸ್ಟಗೇಟ್ಗಳನ್ನು ತೆರದು 75,015 ಕ್ಯೂಸೆಕ್ಸ್ 69,015 ಎಂ.ಪಿ.ಸಿ.ಎಲ್. ಸಾವಿರ ಕ್ಯುಸೆಕ್ ನಷ್ಟು ನೀರನ್ನು ಕೃಷ್ಣಾ ನದಿ ಹರಿಬಿಡಲಾಗುತ್ತಿದೆ. ಗುರುವಾರ ಆಲಮಟ್ಟಿ ಶಾಸ್ತ್ರೀ ಸಾಗರದಿಂದ 75.000 ಸಾವಿರ ಕ್ಯುಸೆಕ್ ಪ್ರಮಾಣದಷ್ಟು ನೀರಿನ ಒಳಹರಿವು ಬರಿತ್ತಿದ್ದು, ಜಲಾಶಯಕ್ಕೆ ಬರುವ ಒಳಹರಿವು ಗಮನಿಸಿ ಕೃಷ್ಣಾ ನದಿಗೆ ನೀರು ಹರಿಬಿಡಲಾಗುತ್ತಿದೆ.
ಕೃಷ್ಣಾ ಪ್ರದೇಶದಲ್ಲಿ ಜಲಾನಯನ ನಿರಂತರ ಮಳೆಯಾಗುತ್ತಿರುವದರಿಂದ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದೆ ಪ್ರತಿ ಉಭಯ ಗಂಟೆಗೊಮ್ಮೆ ಜಲಾಶಯಗಳ ಅಧಿಕಾರಿಗಳು ನದಿಗೆ ನೀರು ಹರಿಸುವ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಒಂದೊಮ್ಮೆ ಒಳಹರಿವು ಹೆಚ್ಚಾದರೆ ಹೊರ ಹರಿವು ಹೆಚ್ಚಿಸಲಾಗುತ್ತದೆ ಒಳಹರಿವು ತಗ್ಗಿದರೆ ಹೊರ ಹರಿವು ಕಡಿಮೆ ಆಗುತ್ತದೆ. ಹಿಗಾಗಿ ನದಿತೀರದ ಗ್ರಾಮಗಳ ಜನರು ಎಚ್ಚರದಿಂದ ಇರಬೇಕು ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ವಿಜಯ ಅರಳಿಯವರು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಮಾಹಿತಿಯಂತೆ ಗರಿಷ್ಠ 492.25 -ರ ಎತ್ತರದಲ್ಲಿ 33.313 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇಂದು 490.47 ಮೀಟರಗೆ ನೀರು ಬಂದು ತಲುಪಿದ್ದು,
ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ