ನಾರಾಯಣಪುರ ಅಣೆಕಟ್ಟೆ ನಿಂದ 1,10,000 ಕ್ಯೂಸೆಕ್ ನೀರು ಬಿಡುವ ಸಾಧ್ಯತೆ ಇರೋದರಿಂದ ಸುತ್ತು ಮುತ್ತಲು ಎಚ್ಚರ

Udayavani News
0
ನಾರಾಯಣಪುರ : ಅಣೆಕಟ್ಟಿನ ಪ್ರಸ್ತುತ ನೀರಿನ ಸಂಗ್ರಹವು 80.27% ಇರುತ್ತದೆ .ಕೃಷ್ಣಾ ನದಿಗೆ ಹೊರಹರಿವು 84,445 ಕ್ಯೂಸೆಕ್ ಇರುವದರಿಂದ.

ಅಣೆಕಟ್ಟಿನ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಆಲಮಟ್ಟಿ ಅಣೆಕಟ್ಟೆಯ ಹೊರಹರಿವು ಪರಿಗಣಿಸಲಾಗಿ ನಾರಾಯಣಪುರ ಅಣೆಕಟ್ಟೆ ಗೆ ಸುಮಾರು 1,10,000 ಕ್ಯೂಸೆಕ್ ಒಳಹರಿವು ಬರುವ ಸಾಧ್ಯತೆ ಇದ್ದು ,ಮದ್ಯಾಹ್ನ. 3.00 ಗಂಟೆ ನಂತರ , ಪ್ರಸ್ತುತ ಇರುವ ಹೊರಹರಿವನ್ನು 84,445 ಕ್ಯೂಸೆಕ್ ರಿಂದ 1,10,000 ಕ್ಯೂಸೆಕ್ ಗೆ ಹಂತ ಹಂತವಾಗಿ ಹೆಚ್ಚಿಸಲಾಗುವುದು & ಒಳಹರಿವಿನ ಅನುಸಾರ ನದಿಗೆ ಬಿಡುತ್ತಿರುವ ಹೊರಹರಿವನ್ನು ಕ್ರಮೇಣ ಹೆಚ್ಚಿಸಲಾಗುವುದು/ಕಡಿಮೆ ಮಾಡಲಾಗುವುದು.

ಆದರಿಂದ ನಾರಾಯಣಪುರ ಅಣೆಕಟ್ಟಿನ ಕೆಳಭಾಗದಲ್ಲಿರುವ ನದಿ ಪಾತ್ರದ ಜನರು ಹಾಗೂ ಜಾನುವಾರು ಜಾಗ್ರತೆಯಿಂದ ಇರಲು ಎಚ್ಚರಿಕೆಯಿಂದಿರಲು ತಿಳಿಸಿದ್ದಾರೆ.

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)