ಮಕ್ಕಳಿಗೆ ಬೇಸಿಗೆ ರಜೆಗಳ ನಂತರ ಇಂದು ಶಾಲೆಗೆ ಬರುವ ಮುದ್ದು ಮಕ್ಕಳನ್ನು ಹೂಗುಚ್ಛ ಕೊಟ್ಟು ಬರಮಾಡಿಕೊಳ್ಳಲಾಯಿತು.
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ನಾಗಬೇನಾಳ ತಾಂಡಾದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತು ದೇಶ ಸೇವೆ ಮಾಡುತ್ತಿರುವ ಸೈನಿಕರಾದ ವೆಂಕಟೇಶ ಸೇವಪ್ಪ ನಾಯಕ್ , ಹಾಗೂ ರಾಜು. ಕೀರಪ್ಪ. ಚವಾಣ್. ಇವರಿಗೆ ಗೌರವ ಸನ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಪದ್ಮಾವತಿ ರವಿ ಲಮಾಣಿ, ನವೀನ ನಾಯಕ್ 2024 ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಅಂಕ ಪಡೆದಿದ್ದಕ್ಕಾಗಿ ಸನ್ಮಾನಿಸಲಾಯಿತು.
ಜೊತೆಗೆ ವೈಷ್ಣವಿ ಮಹಾದೇವಪ್ಪ ನಾಯಕ, (ಮುರಾರ್ಜಿ ದೇಸಾಯಿ,ನವೋದಯ,ಕಿತ್ತೂರು, ಸೈನಿಕ ಶಾಲೆ,ಆರ್ ಎಂ ಎಸ್ ಎ )ಎಲ್ಲಾ ಪರೀಕ್ಷೆಗಳಲ್ಲಿ ಆಯ್ಕೆಗೊಂಡು ಕೊನೆಗೆ ನವೋದಯ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಸನ್ಮಾನಿಸಲಾಯಿತು.
ಶಾಲೆಯ ಆದರ್ಶ ವಿದ್ಯಾರ್ಥಿ ರೋಷನ್ ಕುಮಾರ್ ಕೋಳೂರು ಇವನಿಗೂ ಸನ್ಮಾನಿಸಲಾಯಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಾನಂದ ಕೃಷ್ಣಪ್ಪ ನಾಯಕ್ ಮತ್ತು ಗ್ರಾಮ ಪಂಚಾಯತಿಯ ಸದಸ್ಯರಾದ ರಘು ಪವಾರ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಗುರುಗಳು ಶಿವಲೀಲಾ ಗಂಗನಗೌಡರ ಶಿಕ್ಷಕರು ಪಾಲಕರು ಶಿಕ್ಷಣ ಪ್ರೇಮಿಗಳಾದ ಮಹಾದೇವಪ್ಪ ನಾಯಕ ಶಿಕ್ಷಕರು ಗೋವಿಂದ ನಾಯಕ್ ವೆಂಕಟೇಶ್ ನಾಯಕ್ ಜಗದೇವ ನಾಯಕ್ ಇತರರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಪ್ರಿಯಾ ಯರನಾಳ ಗುರುಮಾತೆಯರು ಸ್ವಾಗತಿಸಿದರು. ವೀರೇಶ್ ನವಲಿ ಶಿಕ್ಷಕರು ನಿರೂಪಿಸಿದರು. ಅಕ್ಕಮಹಾದೇವಿ ಉಪನಾಳ ಗುರುಮಾತೆಯರು ವಂದಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಬಿಸಿಊಟ ಬಾಳೆಹಣ್ಣು ವಿತರಿಸಲಾಯಿತು.
ವರದಿಗಾರ : ಶಿವು ರಾಠೋಡ