ಲಿಂಗಸೂಗೂರು : ಜಯ ಕರ್ನಾಟಕ ರಕ್ಷಣಾ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷರಾದ. ಹನುಮಂತ ನಾಯಕ ಹಾಗೂ ಕರವೇ ಕಾರ್ಯ ಕರ್ತರು ಲಿಂಗಸೂಗುರು ಪುರಸಭೆ ವ್ಯಾಪ್ತಿಯ 23 ವಾರ್ಡಿಗಳಲ್ಲಿ ಮೂಲಭೂತ ಸಮಸ್ಯೆ ಪರಿಹರಿಸಲು ಪುರಸಭೆ ಅಧ್ಯಕ್ಷ ರಿಗೆ ಹಾಗೂ ಮುಖ್ಯಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಲಿಂಗಸೂಗೂರು ಪುರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ. ಪಟ್ಟಣದ ರಾಯಚೂರು, ಮುದಗಲ್, ಕಲಬುರಗಿ, ಬೆಂಗಳೂರು ಬೈಪಾಸ ರಸ್ತೆ, ಕರಡಕಲ್ ರಸ್ತೆ ಬದಿಗಳಲ್ಲೇ ಕಸದ ರಾಶಿ ರಾರಾಜಿಸುತ್ತಿದೆ. ಜಿಲ್ಲಾ ಪಂಚಾಯತಿ ಕಛೇರಿ ಎದುರದಲ್ಲೇ ಕಸ ರಾಶಿಯೇ ಕಾಣುತ್ತದೆ. ಮನೆ ಮನೆಯಿಂದ ಕಸ ಸಂಗ್ರಹಣೆಗಾಗಿ ಪುರಸಭೆಯಿಂದ ನಿಯೋಜಿಸಿರುವ ಆಟೊಗಳು 8-10 ದಿನಕ್ಕೊಮ್ಮೆ ಮನೆಗಳಿಗೆ ಹೋಗುತ್ತಿದ್ದರಿಂದ, ಹತ್ತು ದಿನಗಳವರೆಗೆ ಒಣ ಮತ್ತು ಹಸಿ ಕಸವನ್ನು ಮನೆಯಲ್ಲಿ ಇಟ್ಟುಕೊಳ್ಳಲಾಗದೇ ಅನಿವಾರ್ಯವಾಗಿ ಎಲ್ಲಿಂದರಲ್ಲಿ ಕಸ ಹಾಕುವಂತೆ ಆಗಿದೆ, ಅದು ಅಷ್ಟೇ ಕೊಳೆತು ದುರ್ವಾಸನೆ ಉಂಟಾಗುತ್ತಿದೆ. ಇದರಿಂದ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ. ಅಲ್ಲದೇ ರಸ್ತೆ ಬದಿಯಲ್ಲೇ ಕಸ ಹಾಕುತ್ತಿರುವುದರಿಂದ ತ್ಯಾಜ್ಯವೆಲ್ಲ ರಸ್ತೆಗೆ ಬರುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪುರಸಭೆ ಆಡಳಿತ ಮಂಡಳಿ ವಿಫಲವಾಗಿದೆ.
ಪಟ್ಟಣದ ಸುಣಗಾರದಲ್ಲಿ, ಗೌಳಿಪುರ, ಸಂತೆಬಜಾರ್, ಜನತಾಕಾಲೋನಿ ಸೇರಿದಂತೆ ಆನೇಕ ಬಡಾವಣೆಗಳಲ್ಲಿನ ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಪರಿಣಾಮ ನೀರು ಅಲ್ಲೇ ಮಡುಗಟ್ಟಿ, ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಅನೇಕ ರೋಗಗಳು ಹರಡುವ ಭೀತಿ ಜನತೆಯಲ್ಲಿ ಉಂಟಾಗಿದೆ. ಚರಂಡಿ ತುಂಬಿದ್ದರಿಂದ ಮಳೆಬಂದಾಗ ನೀರು ರಸ್ತೆಗೆ ಹರಿದು ವಾಹನ ಸವಾರರು ಪರದಾಡುವಂತಾಗಿದೆ. ಇತ್ತೀಚಿಗೆ ಸುರಿದ ಮಳೆಗೆ ಪಟ್ಟಣ ಸೇರಿ ಕರಡಕಲ್, ಕಸಬಾಲಿಂಗಸುಗೂರು, ಹುಲಿಗುಡ್ಡ ಗ್ರಾಮಗಳಲ್ಲಿ ಕೆಲವು ರಸ್ತೆಗಳಲ್ಲಿ ತೆಗ್ಗು ದಿನ್ನಿ ಬಿದ್ದು ಹಾಳಾಗಿದ್ದು ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಮೂರು ಮತ್ತು ನಾಲ್ಕು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಎರಡು ದಿನಗಳಲ್ಲಿ ನೀರು ಕೆಟ್ಟ ವಾಸನೆ ಬರುತ್ತಿವೆ ನೀರು ಕುಡಿಯೋಕೆ ಅಡುಗೆ ಮಾಡೋಕೆ ಹಾಗೂ ಉಪಯೋಗಿಸಲು ಬಾರದಂತೆ ಆಗುತ್ತಿವೆ ನೀರನ್ನು ಶುದ್ದೀಕರಣ ಮಾಡಿ ಎರಡು ದಿನಕ್ಕೊಮ್ಮೆ ಸರಬರಾಜು ಮಾಡಲು ಮುಂದಾಗಬೇಕು.
ಪಟ್ಟಣದ ಬಸ್ ನಿಲ್ದಾಣದ ವೃತ್ತದಿಂದ ಪಶು ಆಸ್ಪತ್ರೆವರೆಗೆ ಡಿವೈಡರ್ ಗೆ ಹಾಕಲಾಗಿರುವ ಬೀದಿ ದೀಪಗಳಲ್ಲಿ ಕೆಲವು ಉರಿಯುತ್ತಿಲ್ಲ ಇದರಿಂದ ಕತ್ತಲು ಆವರಿಸಿ ರಾತ್ರಿ ವೇಳೆ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈಗಾಗಿ ಹೊಸದಾಗಿ ವಿದ್ಯುತ್ ದೀಪಗಳ ಅಳವಡಿಸಲು ಕ್ರಮ ಜರಗಿಸಬೇಕು.
ಪುರಸಭೆ ವ್ಯಾಪ್ತಿಯ
ಎಲ್ಲಾ ಸಮಸ್ಯೆಗಳಿಗೆ ಅತಿ ಶೀಘ್ರಗತಿಯಲ್ಲಿ ಸ್ಪಂದಿಸಿ ಸ್ವಚ್ಛತೆ ಜೊತೆ ಜನತೆ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಇಲ್ಲವಾದಲ್ಲಿ ಪುರಸಭೆ ಕಛೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯ ಕಾರ್ಯ ಕರ್ತರಾದ ಪ್ರವೀಣ್ ಕುಮಾರ ಪ್ರಕಾಶ ಕುರಿ ನಿಂಗಪ್ಪ ಶರಣ ಗೌಡ ರಾಯಪ್ಪ ನಾಯಕ ಗಗನ ನಾಯಕ ಮಹಿನುದ್ದಿನ ಉಲ್ಲೇಶ್ ನಾಯಕ ಮಲ್ಲೇಶ ಶಿವರಾಜ ಅಮರೇಗೌಡ ರವಿ ನಾಯಕ ಹುಸೇನ ಸಾಬ ಭೀಮಣ್ಣ ಅಂತೋನಿ ಶಿವರೆಡ್ಡಿ ಲಕ್ಷ್ಮಣ ಪೋಳ ವಿಜಯ ಠಾಕೋರ್ ಇದ್ದರು.