ಶೋಷಿತ ವರ್ಗಗಳ ಪರವಾಗಿ ಶ್ರೀ ಮಠವಿದೆ ಶ್ರೀ ಮಠಕ್ಕೆ ನಮ್ಮ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು :ಆಹಾರ ಸಚಿವ ಕೆಹೆಚ್. ಮುನಿಯಪ್ಪ.

Udayavani News
0
ರಾಮನಗರ (ಪಾಲನಹಳ್ಳಿ) ಮಾ 1 : ಶ್ರೀ ಶನೇಶ್ಚರಸ್ವಾಮಿ ಕ್ಷೇತ್ರದ ಜಾತ್ರ ಮಹೋತ್ಸವ ಹಾಗೂ ಶಿವರಾತ್ರಿ ಜಾತ್ರ ಉತ್ಸವ, ಮಹಾ ರುದ್ರಯಾಗ ಸಮಾರಂಭದಲ್ಲಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಭಾಗವಹಿಸಿದರು.

ನಂತರ ಮಾತನಾಡಿದ ಸಚಿವರು ಪಾಲನಹಳ್ಳಿ ಮಠದಲ್ಲಿ 4 ದಿನಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಶ್ರೀ ಮಠವು ಉಪ ಮುಖ್ಯಮಂತ್ರಿ ಹಾಗೂ ನಮಗೆ ರಜತ ಕಿರೀಟವನ್ನು ತೊಡಿಸುವುದರ ಮೂಲಕ ಗೌರವವನ್ನು ಸಲ್ಲಿಸಿರುವುದು ಸಂತಸ ತಂದಿದೆ ಎಂದರು.

ಶ್ರೀ ಮಠವು ಶೋಷಿತ ವರ್ಗಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲಾ ಧರ್ಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಈ ಮಠಕ್ಕೆ ನಮ್ಮ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸಹಕಾರವನ್ನು ಕಲ್ಲಿಸಲು ಸಿದ್ದರಿದ್ದೇವೆ ಎಂದರು.

ಶ್ರೀ ಮಠವು ಚಿಕ್ಕದಾಗಿ ಪ್ರಾರಂಭವಾಗಿದ್ದು ಈಗ ಬಹಳ ದೊಡ್ಡ ಮಠವಾಗಿ ಹಬ್ಬಿದೆ ಈ ರಾಜ್ಯದಲ್ಲಿ ಸುಮಾರು 10 ಶೋಷಿತ ವರ್ಗಗಳ ಮಠಗಳಿದ್ದು ಎಲ್ಲಾ ಮಠಗಳೂ ಶಿಕ್ಷಣ ದಾಸೋಹ ದೊಂದಿಗೆ ಸರ್ವಧರ್ಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ನಮ್ಮ ಸರ್ಕಾರ ಈ ಮಠದೊಂದಿಗೆ ಸದಾ ಅವರೊಂದಿಗಿದೆ ಎಂದರು. 
ಕಾರ್ಯಕ್ರಮದಲ್ಲಿ ಉಪಮುಖ್ಯ ಮಂತ್ರಿ ಡಿಕೆ .ಶಿವಕುಮಾರ್ ,ಶಾಸಕ ರಾದ ಶ್ರೀನಿವಾಸ್, ಪಾಲನಹಳ್ಳಿ ಮಠದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸಿದ್ಧರಾಜು ಸ್ವಾಮೀಜಿಗಳು, ಶ್ರೀ ರೇಣುಕಾಶಿವಾಚರ್ಯ ಸ್ವಾಮಿಗಳು,ಶ್ರೀ ಮಾದಾರ ಚನ್ನಯ್ಯ ಸ್ವಾಮಿಗಳು,ಶ್ರೀ ಶಿವಾಚಾರ್ಯ ಸ್ವಾಮಿಗಳು, ಶ್ರೀ ರಾಜಶೇಖರ ಸ್ವಾಮಿಗಳು,ಶ್ರೀ ಶ್ರೀ ಪಾಪಣ್ಣ ಸ್ವಾಮೀಜಿಗಳು ವಿವಿಧ ಮಠಗಳ ಸ್ವಾಮೀಜಿಗಳು,ಚಿತ್ರನಟ ದ್ರುವ ಸರ್ಜಾ ಉಪಸ್ಥಿತರಿದ್ದರು.

Post a Comment

0Comments

Post a Comment (0)