ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಗುಡುಗಿದ್ದಾರೆ. ಬೆಳಗಾವಿಯಲ್ಲಿ (Belagavi) ಮರಾಠಿ (Marathi) ಪುಂಡ ಯುವಕರಿಂದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ (KSRTC Bus Conductor) ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದ್ದಾರೆ.
ಈಗಲೇ ಗಂಟುಮೂಟೆ ತೆಗೆದುಕೊಂಡು ಮಹಾರಾಷ್ಟ್ರಕ್ಕೆ (Maharashtra) ಹೋಗಮ್ಮ ಅಂತ ಆಕ್ರೋಶದ ಮಾತುಗಳನ್ನಾಡಿದ್ದಾರೆ.
ಈಗಲೇ ಹೋಗಮ್ಮ ಗಂಟು ಮೂಟೆ ತೆಗೆದುಕೊಂಡು
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗೋದಾಗಿ ತೀರ್ಮಾನ ಆದರೆ ಮೊದಲು ನಾನು ಹೋಗುತ್ತೇನೆ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದರು. ಈಗಲೇ ಹೋಗಮ್ಮ ಗಂಟು ಮೂಟೆ ತೆಗೆದುಕೊಂಡು ಅಂತ ವಾಟಾಳ್ ಗುಡುಗಿದ್ದಾರೆ.
ಮರಾಠಿಗಳು ತೊಲಗಿ ಎಂದು ಎಚ್ಚರಿಕೆ
ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡ್ತೇನೆ. ಬೆಳಗಾವಿಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ಕೊಡಬೇಕು, ಯಾವುದೇ ಕಾರಣಕ್ಕೂ ಗಲಾಟೆಯಾಗಬಾರದು. ಮಾರಾಠಿಗಳು ತೊಲಗಿ ಎಂದು ಎಚ್ಚರಿಕೆ ಕೊಡಬೇಕಾಗುತ್ತೆ ಅಂತ ವಾಟಾಳ್ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಮರಾಠಿ ಏಜೆಂಟ್ ಎಂದ ವಾಟಾಳ್
ಡಿಸಿ ಎಸ್ಪಿ ಭದ್ರ ಇಲ್ಲ, ಕಾಂಗ್ರೆಸ್‌ನವರು ಮರಾಠಿ ಏಜೆಂಟ್, ಬಿಜೆಪಿಯವರು ಸಂಪೂರ್ಣ ಮರಾಠಿ ಬೆಂಬಲಿಗರಾಗಿದ್ದಾರೆ. ಮರಾಠಿಯವರು ಬೆಳಗಾವಿಯಲ್ಲಿದ್ರೆ ಇರಲಿ. ಹೋಗ್ತಾರೆ ಎಂದಾದರೆ ಈಗಲೇ ಮಹಾರಾಷ್ಟ್ರಕ್ಕೆ ಹೋಗಲಿ. ಮಹಾರಾಷ್ಟ್ರದಲ್ಲಿ ಸಿಂಧೆ, ಉದ್ದವ್ ಠಾಕ್ರೆ ರಾಜಕೀಯಕ್ಕಾಗಿ ಬೆಳಗಾವಿ ಬಳಸಿಕೊಳ್ತಿದ್ದಾರೆ ಅಂತ ವಿಧಾನಸೌಧದಲ್ಲಿ ವಾಟಾಳ್ ನಾಗರಾಜ್ ಗುಡುಗಿದ್ದಾರೆ.
ಇದು ಕೆಂಪೇಗೌಡರಿಗೆ ಮಾಡುವ ಅಪಮಾನ
ಗ್ರೇಟರ್ ಬೆಂಗಳೂರು ಇದು ಬೆಂಗಳೂರು ಜನರಿಗೆ ಮಾಡುವ ದ್ರೋಹ. ಮೋಸ ಅನ್ಯಾಯ, ಕೆಂಪೇಗೌಡರಿಗೆ ಮಾಡೋ ಅವಮಾನ ಅಂತ ವಾಟಾಳ್ ಹೇಳಿದ್ದಾರೆ. ಐದಾರು ಜನ ಮೇಯರ್ ಯಾಕೆ ಬೇಕು ನಿಮಗೆ? ಮೇಯರ್ ನಗರದ ಮುಖ್ಯಸ್ಥರಾಗಿರುತ್ತಾರೆ ಅಂತ ಹೇಳಿದ್ರು.
ಮೊದಲು ರಸ್ತೆ ರಿಪೇರಿ ಮಾಡಿ, ಆಮೇಲೆ ಗ್ರೇಟರ್ ಬೆಂಗಳೂರು ಮಾಡಿ
ಮೊದಲಿಗೆ ರಸ್ತೆ ರಿಪೇರಿ ಮಾಡಿ, ಕುಡಿಯುವ ನೀರು, ವಿದ್ಯುತ್ ಸರಿಪಡಿಸಿ ಎಂದರೆ ಇದನ್ನೆಲ್ಲ ಬಿಟ್ಟು ಗ್ರೇಟರ್ ಬೆಂಗಳೂರು ಮಾಡ್ತಾರಂತೆ. ಚುನಾವಣೆ ಮಾಡಿದ್ರೆ ಸೋಲುವ ಭೀತಿಯಲ್ಲಿ ಹೀಗೆ ಮಾಡ್ತಿದ್ದಾರೆ. ಗ್ರೇಟರ್ ಬೆಂಗಳೂರಿಗೆ ಅನುಮತಿ ಕೊಡೊ ರೀತಿ ವರದಿಯನ್ನ ಜಂಟಿ ಸಮಿತಿ ಕೊಟ್ಟಿದೆ. ಯಾವ ಜನರನ್ನ ಇವರು ಕೇಳಿದ್ದಾರೆ? ಡಿಕೆ ಶಿವಕುಮಾರ್ ಬೆಂಗಳೂರು ಭಗವಂತ ಬಂದರೂ ಸರಿಪಡಿಸಲಾಗಲ್ಲ ಎಂದರು. ಈ ಮಾತನ್ನ ಯಾವ ಕಾರಣಕ್ಕೂ ಸಚಿವರು ಹೇಳಬಾರದಿತ್ತು ಅಂತ ಡಿಕೆಶಿ ವಿರುದ್ಧವೂ ವಾಟಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಬ್ಬರೇ ಮೇಯರ್, ಒಬ್ಬರೇ ಕಮಿಷನರ್
ಈವರು ಹೇಳಿದ ಹಾಗೆ ಕೇಳುವಂತಹ ಗ್ರೇಟರ್ ಬೆಂಗಳೂರು ತರೋದಕ್ಕೆ ಹೋಗಿದ್ದಾರೆ. ಹೀಗಾದರೆ ತಮಿಳರು ಮೇಯರ್ ಆಗ್ತಾರೆ, ತೆಲುಗು ಮೇಯರ್ ಆಗ್ತಾರೆ. ಸಮಸ್ಯೆ ಬಗಹರಿಸಿ, ಅಧಿಕಾರಿಗಳನ್ನ ಹೆಚ್ಚಿಸಿ. ಬೇಕಿದ್ರೆ ಉಪ ಮೇಯರ್ ಹೆಚ್ಚಿಸಿ. ಒಬ್ಬನೇ ಮೇಯರ್ ಇರಬೇಕು, ಒಬ್ಬರೇ ಕಮಿಷನರ್ ಇರಬೇಕು ಅಂತ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.