ಕಾಮಗಾರಿ ಪೂರ್ಣಗೊಳಿಸಿದ ಹಣ ನೀಡದ ಸರ್ಕಾರ : ಗುತ್ತಿದಾರರ ಸಂಘ ಆರೋಪ

Udayavani News
0
ಕುಟುಂಬ ಸಮೇತ ಆತ್ಮಹತ್ಯೆ ಮುಂದಾಗ ಬೇಕಾಗುತ್ತದೆ ಗುತ್ತಿಗೆದಾರ ಸಂಘ ಎಚ್ಚರಿಕೆ

ಕುಣಿಗಲ್: ತಾಲೂಕು ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ಬಾಕಿ 450 ಕೋಟಿ ಹಣ ಬಿಡುಗಡೆ ಆಗದೆ ಸಂಕಷ್ಟದಲ್ಲಿರುವ ಗುತ್ತಿಗೆದಾರರು ಕುಟುಂಬ ಸಮೇತರಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಗುತ್ತಿಗೆದಾರರು ಬಂದಿದ್ದಾರೆ ಎಂದು ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆಲ್ಕೆರೆ ನಾರಾಯಣ್ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕಳೆದ ಎರಡು ವರ್ಷಗಳಿಂದ ತಾಲೂಕಿನಲ್ಲಿ ಇರುವ ವಿವಿಧ ಇಲಾಖೆಗಳಿಂದ ಸುಮಾರು 450 ಕೋಟಿ ರೂಗಳು ಬರಬೇಕಾಗಿದ್ದು ಸಾಲ ಶುಲ ಮಾಡಿ ಗುತ್ತಿಗೆದಾರರು ಕಾಮಗಾರಿ ಮುಗಿಸಿ ತಿಂಗಳುಗಳೆ ಕಳೆದರೂ ಹಣ ಬಿಡುಗಡೆ ಆಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ ವಿವಿಧ ಬ್ಯಾಂಕುಗಳಿಂದ ಬಡ್ಡಿ ಸಮೇತ ಹಣಕ್ಕಾಗಿ ಪೀಡಿಸಲಾಗುತ್ತಿದೆ ನಾವು ಗುತ್ತಿಗೆದಾರರು ಹಣ ಕಟ್ಟಲಾಗದೆ ಬ್ಯಾಂಕುಗಳ ಹಾಗೂ ಇತರೆ ಕೈ ಸಾಲ ಮಾಡಿದ್ದು ಕಿರುಕುಳಕ್ಕೆ ಬೇಸತ್ತು ಕುಟುಂಬ ಸಮೇತರಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಮೂಡಿದೆ ಸರ್ಕಾರ ದಯಮರಣವನ್ನಾದರೂ ಕಲ್ಪಿಸಲಿ ಎಂದು ಕಿಡಿ ಕಾರಿದ ಅವರು ಇತ್ತೀಚಿಗೆ ಪ್ಯಾಕೇಜ್ ಟೆಂಡ‌ರ್ ಕರಿಲಾಗುತ್ತಿದ್ದು ಇದರಿಂದ ಸಣ್ಣ ಗುತ್ತಿಗೆದಾರರಿಗೆ ತೊಂದರೆ ಆಗುತ್ತದೆ ಸಣ್ಣ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಸರ್ಕಾರದಲ್ಲಿ ಎಷ್ಟು ಹಣ ಇರುತ್ತದೆ ಅಷ್ಟಕ್ಕೆ ಮಾತ್ರ ಟೆಂಡ‌ರ್ ಕರೆಯಬೇಕು ಅದನ್ನು ಬಿಟ್ಟು ಅತಿಯಾಗಿ ಮಾಡುತ್ತಿರುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು

ನಾವು ಪಡೆದಿರುವ ಸಾಲಗಳಿಗೆ ಬ್ಯಾಂಕುಗಳು ಬಡ್ಡಿ ಹಾಕದಂತೆ ಹಾಗೂ ಸಮಯ ನೀಡುವಂತಾದರೂ ಸರ್ಕಾರ ಮಾಡಲಿ ಇಲ್ಲ ಶೀಘ್ರವಾಗಿ ಬಾಕಿ ಇರುವ ಬಿಲ್ಲುಗಳನ್ನು ಪಾವತಿಸಲಿ ಎಂದು ಎಚ್ಚರಿಕೆ ನೀಡಿದ ಅವರು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ತಾಲೂಕಿನ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಬರಬೇಕಾದ ಬಾಕಿ ಹಣ ಇಂತಿದ್ದು ಕಾವೇರಿ ನೀರಾವರಿ ನಿಗಮದಿಂದ 150 ಕೋಟಿ ಬಾಕಿ, ಸಣ್ಣ ನೀರಾವರಿ ನಿಗಮದಿಂದ 6ಕೋಟಿ, ಲೋಕೋಪಯೋಗಿ ಇಲಾಖೆಯಿಂದ 200 ಕೋಟಿ ಬಾಕಿ, ಜಿಲ್ಲಾ ಪಂಚಾಯತ್ ಇಂದ 6 ಕೋಟಿ, ಜೆ.ಜೆ.ಎಂ. ನಿಂದ 50ಕೋಟಿ, ಹೀಗೆ ಸುಮಾರು 450 ಕೋಟಿ ರೂಗಳು ಈ ತಾಲೂಕಿನ ಗುತ್ತಿಗೆದಾರರಿಗೆ ಬರಬೇಕಾಗಿದೆ ಇದಕ್ಕಾಗಿ ಅಧಿಕಾರಿಗಳು ರಾಜ್ಯ ಸರ್ಕಾರ ಕೂಡಲೇ ಮನಸ್ಸು ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು .

ಹಿರಿಯ ಗುತ್ತಿಗೆದಾರ ಜೆಸಿಪಿ ರಾಜಣ್ಣ ಮಾತನಾಡುತ್ತಾ ಇದು ಸರ್ಕಾರದ ಪ್ರಶ್ನೆ ಅಲ್ಲ ಗುತ್ತಿಗೆದಾರರ ಅಳಿವು ಉಳಿವಿನ

ಪ್ರಶ್ನೆ, ಗುತ್ತಿಗೆದಾರರು ಕಾಮಗಾರಿಗಳನ್ನು ಮುಗಿಸಿದ್ದರು ಸಹ ಹಣ ಬಿಡುಗಡೆ ಆಗದಿರುವುದು ವಿಪರ್ಯಾಸ, ಸಾಲ ಶೂಲ ಮಾಡಿಕೊಂಡು ಎಷ್ಟು ಅಂತ ಕಾಮಗಾರಿಗಳನ್ನು ಮಾಡಲಾಗುತ್ತದೆ, ಕೂಡಲೇ ಇಲ್ಲಿನ ಶಾಸಕರಾದ ರಂಗನಾಥ್ ಅವರು ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಮಂತ್ರಿಗಳು ಗುತ್ತಿಗೆದಾರರ ಸಂಕಷ್ಟವನ್ನು ಅರಿತು ಕೂಡಲೇ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಗುತ್ತಿಗೆದಾರರ ಹಾಗೂ ತಾ.ಪಂ. ಮಾಜಿ ಸದಸ್ಯ ಎಸ್.ಆರ್. ಚಿಕ್ಕಣ್ಣ ಮಾತನಾಡಿ ಇವತ್ತಿನ ಸ್ಥಿತಿಯಲ್ಲಿ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ನಮಗೆಲ್ಲರಿಗೂ ದಯಾಮರಣವನ್ನು ನೀಡಲಿ ನಾವೆಲ್ಲರೂ ಪರಿವಾರ ಸಮೇತ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತೇವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರರಾದ ಎಸ್.ಆರ್. ಚಿಕ್ಕಣ್ಣ, ಕೃಷ್ಣಗೌಡ, ರುಕುಮಾಂದ, ನಾಗರಾಜು, ಮಂಜಯ್ಯ, ಶಿವಣ್ಣ, ಲಕ್ಷ್ಮಿಕಾಂತ, ಪುಟ್ಟಣ್ಣ ಶ್ರೀಕಂಠಯ್ಯ ಮುಂತಾದ ಗುತ್ತಿಗೆದಾರರು ಉಪಸ್ಥಿತರಿದ್ದರು.

Post a Comment

0Comments

Post a Comment (0)