ಕವಿತಾಳ | ಹಣ ದುರ್ಬಳಕೆ: ಪಿಡಿಒ ಅಮಾನತು

Udayavani News
0
ಕವಿತಾಳ (ರಾಯಚೂರು ಜಿಲ್ಲೆ): ಹಣ ದುರ್ಬಳಕೆ ಆರೋಪದಡಿ ಅಮೀನಗಡ ಗ್ರಾಮ ಪಂಚಾಯಿತಿಯ ಪ್ರಭಾರ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಮಪ್ಪ ನಡಗೇರಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಪಾಂಡ್ವೆ ಅಮಾನತು ಮಾಡಿದ್ದಾರೆ.

ಸಿಬ್ಬಂದಿ ವೇತನ ಮತ್ತು ರಸ್ತೆ ದುರಸ್ತಿಗೆ ಹಣ ಪಾವತಿ ಮಾಡುವುದಾಗಿ ಹೇಳಿ ತನ್ನ ಡಿಜಿಟಲ್‌ ಸಹಿ ಪಡೆದು ₹5 ಲಕ್ಷ ಡ್ರಾ ಮಾಡಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ' ಎಂದು ಅಧ್ಯಕ್ಷೆ ಬಸಲಿಂಗಮ್ಮ ದೂರು ನೀಡಿದ್ದರು.

ಈ ಹಿಂದೆ ಹಾಲಾಪುರ ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆಯೂ ರಾಮಪ್ಪ ಅವರ ವಿರುದ್ಧ ಸಾರ್ವಜನಿಕರಿಂದ ದೂರು ಬಂದಿದ್ದವು. ಆ ದೂರುಗಳಿಗೂ ಸಮರ್ಪಕ ಉತ್ತರ ನೀಡದ ಕಾರಣ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲಾ ವರದಿಗಾರರು :  ಶಿವು ರಾಠೋಡ

Post a Comment

0Comments

Post a Comment (0)