ಸಾಮರ ಇಸ್ಲಾಮಿಕ್ ಶಾಲೆ ನಕಲಿ ಶಾಲೆ ; ಕಾನೂನ ಶಾಲೆ : ಚಾಂದ ಪಾಷ ಗಂಭೀರ ಆರೋಪ

Udayavani News
0


ಬೆಂಗಳೂರು ಡಿ 27 :: ಸಾಮ‌ರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಶಾಲೆ(ನಿರ್ವಹಣೆ: "ದಿ ಅಲ್- ಜಾಮೀಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ") ರವರು ಭಾರತ ವಿರೋಧಿ ಚಟುವಟಿಕೆಗಳಾದ, ತೆರಿಗೆ ವಂಚನೆ, ನಕಲಿ ದಾಖಲೆ ಸೃಷ್ಟಿ, ಅಪರಾಧ ವಂಚನೆ, ಸಾರ್ವಜನಿಕ ಸೊಸೈಟಿ ಹೆಸರಿನಲ್ಲಿ ನಂಬಿಕೆಯ ಉಲ್ಲಂಘನೆ ಮಾಡುತ್ತಿದ್ದು, ಹಾಗೂ ನೋಂದಣಿಯಾಗದಿರುವ ಎಜುಕೇಷನ್ ಸೊಸೈಟಿಯಾದ "ಅಲ್-ಜಾಮಿಯಾ ಮೊಹಮ್ಮದೀಯಾ ಎಜುಕೇಷನ್ ಸೊಸೈಟಿ ಮುಂಬೈ” ಮತ್ತು “ಜಾಮಿಯಾ ಮೊಹಮ್ಮದೀಯಾ ಎಜುಕೇಷನ್ ಸೊಸೈಟಿ ಮುಂಬೈ" ಎಂದು ಮೋಸಗೊಳಿಸುತ್ತಿದ್ದಾರೆ ಎಂದು ಬಪ್ರೆಸ್ ಕ್ಲಬ್ ನಲ್ಲಿ  ನಡೆಯಿತು.


ಈ ಶಾಲೆಯವರು ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಶಾಲೆ(ನಿರ್ವಹಣೆ: "ದಿ ಅಲ್- ಜಾಮೀಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ") ಎಂಬ ನಾಮಫಲಕ ಅಳವಡಿಸಿದ್ದು ಜೊತೆಗೆ “ಜಾಮೀಯಾ ಮೊಹಮ್ಮದೀಯಾ ಮನ್ಸೂರ(ಒಡೆತನ: ಅಲ್- ಜಾಮೀಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ") ಮತ್ತು ಸಾಮರ್ ಅಂತರಾಷ್ಟ್ರೀಯ ಶಾಲೆ(ನಿರ್ವಹಣೆ: “ಜಾಮೀಯ ಮೊಹಮ್ಮದೀಯ ಏಜುಕೇಷನ್ ಸೊಸೈಟಿ ಮುಂಬೈ") ಎಂದು ನಾಮಫಲಕ ಅಳವಡಿಸಿದ್ದು, ಈ ಶಾಲೆಯನ್ನು ಯಾವ ಎಜುಕೇಷನ್ ಸೊಸೈಟಿ ನಡೆಸುತ್ತಿದೆ ಎಂದು ಅನುಮಾನವಿದ್ದು, ಇವರು ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಮೋಸಗೊಳಿಸುತ್ತಿದ್ದಾರೆ ಎಂದು ಸಂಶಯವಿರುತ್ತದೆ.


ಭೂಮಿ ಒಡೆತನವಿಲ್ಲದ ಶಾಲೆ ಮತ್ತು ಸಂಸ್ಥೆಗೆ ಹಾಗು ನ್ಯಾಯಾಲಯದಲ್ಲಿ ದಾವೆಗಳನ್ನು ಬಾಕಿ ಉಳಿಸಿಕೊಂಡಿರುವ ಹಾಗೂ ವಿವಾದಿತ ಹೊಂದಿರುವ ಶಾಲೆಗೆ ಮತ್ತು ಸಂಸ್ಥೆಗೆ ಮಾನ್ಯತೆ ಮತ್ತು ಮಾನ್ಯತೆ ನವೀಕರಣ ನೀಡುವುದು ಸರಿಯೇ? ಹಾಗೂ ವಿವಾದಿತ ಹಿನ್ನೆಲೆ ಹೊಂದಿರುವ ಶಾಲೆಗಳಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವೆ? ಹಾಗೂ ಇಂತಹ ವಿವಾದಿತ ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಹಾಗೂ ಉತ್ತಮ ಭವಿಷ್ಯ ಸಾಧ್ಯವೆ? ಎಂದು ಸರ್ಕಾರಕ್ಕೆ ಎಚ್ಚರಿಕೆ ಮನವಿ ನೀಡಿದರು

Post a Comment

0Comments

Post a Comment (0)