ಯಡ್ರಾಮಿ ತಾಲೂಕಿನ 16 ಗ್ರಾಮ್ ಪಂಚಾಯತ್ ವ್ಯಾಪ್ತಿಯಲ್ಲಿ ಅಂಗವಿಕಲರ ಅನುದಾನ ದುರ್ಬಳಿಕೆಯಾಗಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಪಂಚಾಯತಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿಯಾದ ಡಾ ಮಲ್ಲಿಕಾರ್ಜುನ್ ನಾಯ್ಕೋಡಿ ಗಂವ್ಹಾರ ಅವರು ತಿಳಿಸಿದರು.
ಇದಕ್ಕೆ ಸಂಬಂಧಪಟ್ಟ ಮೇಲಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದರೆ ಅಥವಾ ನಿರ್ಲಕ್ಷ ವಹಿಸಿದರೆ ಸಂಘದ ಕಾರ್ಯಕರ್ತರೊಂದಿಗೆ ಪಂಚಾಯತ್ ಬಚಾವೋ ಭ್ರಷ್ಟಾಚಾರಿ ಹಟಾವೊ ಘೋಷಣೆಯೊಂದಿಗೆ ಜಿಲ್ಲಾ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ನ್ಯಾಯ ಸಿಗುವವರೆಗು ಉಗ್ರ ಹೋರಾಟ ಮಾಡಲಾಗುವುದು.
ಯಾಕೆಂದರೆ ಪಂಚಾಯತ್ ಅಭಿಯಂತರು ಅಥವಾ ಅಧಿಕಾರಿಗಳು ಪರ್ಸೆಂಟೇಜ್ ಲೆಕ್ಕದಲ್ಲಿ ಕಮಿಷನ್ ತೆಗೆದುಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಆದಷ್ಟು ಶೀಘ್ರದಲ್ಲಿ ಈ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಶಾಸ್ತಿಯನ್ನೆ ಮಾಡಲಿದ್ದೆವೆ .
ಈಗಾಗಲೇ ಕೆಲವು ಪಿಡಿಒಗಳನ್ನು ಮನೆಗೆ ಕಳಿಸಿದ್ದೇವೆ ಆದಷ್ಟು ಶೀಘ್ರದಲ್ಲಿ ಇನ್ನಷ್ಟು ಭ್ರಷ್ಟರನ್ನು ಭೇಟಿಯಾಡಲಿದ್ದೆವೆ ಎಂದು ಡಾ ಮಲ್ಲಿಕಾರ್ಜುನ್ ನಾಯ್ಕೋಡಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.