ಕರ್ನಾಟಕ ರತ್ನ ಪುರಸ್ಕಾರಕ್ಕೆ ಭಾಜನರಾದ ಸಗರ_ನಾಡಿನ_ಸಾಹಿತ್ಯದ_ಚಿಗುರು_ಮಶಾಕ್ ಅಬ್ದುಲ್_ತಾಳಿಕೋಟಿ.

Udayavani News
0


ಬೆಂಗಳೂರ : ಸ್ಯಾಂಡಲ್ ಹುಡ್ ಖ್ಯಾತ ನಟಿ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತರು ಶ್ರೀಮತಿ ಎನ್.ಸಿ. ಪ್ರೇಮ ಅವರಿಂದ 
 *ಹೆಮ್ಮೆಯ ಕರ್ನಾಟಕ ರತ್ನ*
 ಪ್ರಶಸ್ತಿ ಗಣ್ಯ ವ್ಯಕ್ತಿಗಳು ಸಮ್ಮುಖದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ 
 ಸುವರ್ಣ ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆ ( ರಿ) ಬೆಂಗಳೂರು ಸಹಯೋಗದಲ್ಲಿ
 *ಡಾಕ್ಟರ್ ಹುಸೇನ್ ಸಾಬ್ ಎಫ್ ಕೆರೂರ* 
ಸುವರ್ಣ ಕರ್ನಾಟಕ ಕಾರ್ಮಿಕ ವೇದಿಕೆ ( ರಿ) ಬೆಂಗಳೂರು ಸುಮಾರು ವರ್ಷಗಳಿಂದ ಕರುನಾಡ ಸಾಧಕರನ್ನು ಗುರುತಿಸಿ.
 ಪ್ರೋತ್ಸಾಹಿಸುವ ಮೂಲಕ ನಾಡಿನಾದ್ಯಂತ ಸಾಧಕರನ್ನು ಗೌರವಿಸುವ ಮೂಲಕ ವಿಶಿಷ್ಟವಾಗಿ ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಮ್ಮ ಪ್ರಯತ್ನ ಗಳಿಗೆ ಸಂಘ ಸಂಸ್ಥೆಗಳು ಈ ರೀತಿ ಪ್ರೋತ್ಸಾಹ ನೀಡಿದಾಗ ಇನ್ನು ಹೆಚ್ಚಿನ ಕಲೆ ಸೇವೆ ಮಾಡಲು ಸ್ಪೂರ್ತಿಯಾಗುತ್ತೆ. ಆತ್ಮೀಯರು ಮತ್ತು ಹಿತೈಷಿಗಳ *ಶ್ರೀ ಡಾಕ್ಟರ್ ಹುಸೇನ್ ಸಾಬ್ ಎಫ್ ಕೆರೂರ* ಅವರ ಸಾರಥ್ಯದಲ್ಲಿ ಸಹಕಾರದಿಂದ ಹಲವು ಕಾರ್ಯಗಳು ಈಡೇರಿತಿದ್ದು, ನಮಗೆ ಪ್ರತ್ಯಕ್ಷ ಮತ್ತು ಪರೋಕ್ಷ ವಾಗಿ ಬೆಂಬಲ ನೀಡುತ್ತಿರುವ ಕರುನಾಡ ಕನ್ನಡಿಗರಿಗೆ ಹೃತ್ಪೂರ್ವಕ ವಂದನೆಗಳು ಧನ್ಯವಾದಗಳು
 ಬೆಂಗಳೂರು ಹಾಗೂ M M ಭಾರತ ಟಿ ವಿ ಬೆಂಗಳೂರು* 
ಸುಮಾರು ವರ್ಷಗಳಿಂದ ಈ ಸಂಸ್ಥೆ ಇವರ ಸಂಯೋಗದಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಅದ್ಧೂರಿ ಸಮಾರಂಭ ಪ್ರಯುಕ್ತ ಬೆಂಗಳೂರಿನ ಭಾರತ ಸ್ಕೌಟ್ ಅಂಡ್ ಗೈಡ್ಸ್ ಅಡಿಟೋರಿಯಂ ಮಹಾರಾಣಿ ಕಾಲೇಜ ಹತ್ತಿರ ಕೊಂಡೋಜಿ ಬಸಪ್ಪ ಸಭಾಭವನ ಬೆಂಗಳೂರು, ಬರವಣಿಗೆಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ನನ್ನನ್ನು ಗುರುತಿಸಿ
 *ಹೆಮ್ಮೆಯ ಕರ್ನಾಟಕ ರತ್ನ ಪ್ರಶಸ್ತಿ*
 ನೀಡಿ ಗೌರವಿಸಲಾಯಿತು
 ಸಂಸ್ಥಾಪಕ ರಾಜ್ಯಾಧ್ಯಕ್ಷರು ಡಾ: ಹುಸೇನ ಕೆರೂರ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಪ್ರೇಮಾ, ಅನೇಕ ಚಿತ್ರ ನಿರ್ಮಾಪಕರು,ಅನೇಕ ಸ್ವಾಮೀಜಿಗಳು,ಮತ್ತು ಗಣ್ಯ ಮಾನ್ಯರು ಉಪಸ್ಥಿತರಿದ್ದರು.
                                               ಸಗರ ನಾಡಿನ ಹಲವಾರು ಕವಿಗಳಲ್ಲಿ ಇವರು ಕೂಡ ಒಬ್ಬ ಯುವ ಉತ್ಸಹಿ ಕವಿಗಳಾಗಿದ್ದು, ಕವನ ಓದುವುದು, ಬರಿಯುವುದು ಅದರ ಜೊತೆಗೆ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕವಿಯಾಗಬೇಕಾದ್ರೆ ಅದು ಒಂದು ದಿನದ ಕಾರ್ಯವಲ್ಲ, ಬದಲಿಗೆ ನಿರಂತರವಾದ ಅಧ್ಯಯನ ಅವಶ್ಯಕವಾಗಿರುತ್ತದೆ..                                                                                                                                                                                                      
                                                                                                       ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದ ತಂದೆ ಅಬ್ದುಲ್ ಸಾಬ್ ತಾಯಿ, ಕಾಸಿಂಬಿಯವರ ಉದರದಲ್ಲಿ ಜನಿಸಿ ಬಂದ ಮುಗ್ದ ಮನಸಿನ ಯುವ ಸಾಹಿತಿ ಮಶಾಕ್ ಅಬ್ದುಲ್ ತಾಳಿಕೋಟಿ ಎಂದು ಹೇಳಬಹುದು, ಅವರ ನಡೆದು ಬಂದ ಕಷ್ಟದ ಜೀವನ ಹೇಳತ್ತಿರದು, ಒಂದು ಕಡೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಒಂದು ಕಡೆಯಾದ್ರೆ ತಂದೆ ತಾಯಿಗಳು ಮಗನನ್ನು ಕಷ್ಟದ ಸಮಯದಲ್ಲಿ ಓದಿಸಿದ್ದು, ಮೇಲಾಗಿ ತಮ್ಮ ಸೋದರ ಮಾವ ದಿವಂಗತ ಶ್ರೀ ಜಂಗ್ಲಿಸಾಬ್ ಅವರಾದಿ ಅವರ ಆಶ್ರಯದಲ್ಲಿ ಬೆಳೆದು ಬಂದಿದ್ದು, ಈ ಸಾಧನೆ ಮಾಡಲು ಪ್ರೇರಣೆಯಾಯಿತು ಎನ್ನುತ್ತಾರೆ ಮಶಾಕರು, ಈಗ ಆ ತಂದೆ ತಾಯಿಗಳ ಹಾಗೂ ತಮ್ಮ ಸೋದರ ಮಾವನವರ ಋಣವನ್ನು ತಿರಿಸುವುದರ ಮೂಲಕ ತಮ್ಮ ಸೋದರ ಮಾವನವರ ನೆನಪು ಮಾಡಿಕೊಂಡರು, ಮಶಾಕರು ಓದಿದ್ದು ಕಲಬುರ್ಗಿಯ ಜಿಲ್ಲೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೋಮ ಮುಗಿಸಿದರು. ಒಂದನೇ ತರಗತಿಯಿಂದ ನಾಲ್ಕನೇ ತರಗತಿವರೆಗೆ ಯಾವುದೇ ಶಾಲೆಯನ್ನು ಓದದೇ ತನ್ನ ಅಚ್ಚುಮೆಚ್ಚಿನ ಗುರುಗಳಾದ ಶ್ರೀಸಂಗಯ್ಯ ಬಾಚಿಹಾಳ ಶಿಕ್ಷಕರ ಅವರ ನೆರವಿನಿಂದ, ಕರ್ನಾಟಕದ ಸರ್ಕಾರವು ಬೇಸಿಗೆ ರಜೆಯಲ್ಲಿ ಶಾಲೆ ಬಿಟ್ಟ ಮಕ್ಕಳಿಗೆ ಚಿಣ್ಣರ ಅಂಗಳ ಮೂಲಕ ನೇರವಾಗಿ 5 ನೇ ತರಗತಿಗೆ ಸೇರಿಕೊಂಡು ಮುಂದೆ ಚೆನ್ನಾಗಿ ಓದಿ ಅದರ ಜೊತೆ ಜೊತೆಗೆ ತನ್ನ ಬಾಲ್ಯದಲ್ಲಿ ಶಿಕ್ಷಣದ ಮೂಲಕ ಸಾಹಿತ್ಯ ಅಭಿರುಚಿಯನ್ನು ಬೆಳೆಸಿಕೊಂಡು ಅದು ಅಲ್ಲದೆ ಏಕಪಾತ್ರ ಅಭಿನಯ, ನಾಟಕ, ಬೈಲಾಟಗಳಲ್ಲಿ, ಖಳನಾಯಕ ಪಾತ್ರದಲ್ಲಿ ಮಿಂಚಿ ನಟನೆಯಲ್ಲಿ ಆಸಕ್ತಿ ಹೊಂದಿ, ಚಿಕ್ಕ ವಯಸ್ಸಿನಲ್ಲಿ ಮನರಂಜನೆಯಲ್ಲಿ ತೊಡಗಿಸಿಕೊಂಡು, ಈಗ ಸಾಹಿತ್ಯ ಕ್ಷೇತ್ರದಲ್ಲಿ ಮುನ್ನುಗುತ್ತಿರುವ ಮಶಾಕರವರ ಸಾಹಿತ್ಯ ಅಭಿರುಚಿ ಮೆಚ್ಚುವಂತಹದು, ಒಂದು ಕಡೆ ಬಡತನ ಇನ್ನೊಂದು ಕಡೆ ತಮ್ಮ ಜೀವನ ರೂಪಿಸಿಕೊಳ್ಳಲು ದೂರದ ಊರಾದ ಕೋಲಾರದಲ್ಲಿ ಅಂತರಾಷ್ಟ್ರೀಯ ಹೋಂಡಾ ಸ್ಕೂಟರ್ ನರಸಾಪುರ ಕೈಗಾರಿಕೆ ಘಟಕದಲ್ಲಿ MNC (Multi National company) ಯಲ್ಲಿ ದಿನದ 9 ತಾಸುಗಳ ಕಾರ್ಯ ನಿರ್ವಹಿಸುತ್ತಿವುದರ ಮೂಲಕ ತನ್ನ ಕುಟುಂಬಕ್ಕೆ ಆಸರೆಯಾಗಿ ಅದರ ಜೊತೆ ಜೊತೆಗೆ ತಮ್ಮ ಬಿಡುವಿನ ಸಮಯದಲ್ಲಿ ಬರವಣಿಗೆ ಮತ್ತು ಸಾಹಿತ್ಯ ಅಭಿರುಚಿಯನ್ನು ಬೆಳೆಸಿಕೊಂಡು ಕವನ, ಲೇಖನ ಚುಟುಕು ಇನ್ನಿತರ ಸಾಹಿತ್ಯವನ್ನು ಬರೆಯುವುದರ ಮೂಲಕ ತನ್ನದೇಯಾದ ಛಾಪುನು ಮೂಡಿಸಿದ್ದಾರೆ. ಅದು ಅಲ್ಲದೆ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿರುವ ಸ್ಥಳಕ್ಕೆ ಹೋಗಿ, ಅಲ್ಲಿ ತಾವು ರಸಿಸಿದ ಕವನವನ್ನು ವಾಚನ ಮಾಡಿ ಸೈ ಎನ್ನಿಸಿಕೊಂಡು, ಅದು ಅಲ್ಲದೆ ಆನ್ಲೈನ್ ಸ್ಪರ್ಧೆಗಳಲ್ಲಿ ಕವಿತೆ ವಾಚನ ಮಾಡಿ ಹಲವಾರು ಸಾಹಿತ್ಯ ಆಸಕ್ತರಿಂದ ಶಹಬಾಷ್ ಗಿರಿ ಪಡೆದು ಗಣ್ಯಮಾನ್ಯರಿಂದ ಮೆಚ್ಚುಗೆಯನ್ನು ಗಳಿಸಿ ಹಲವಾರು ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ. ಮುಸ್ಲಿಂರಾದರು ಕನ್ನಡದ ಬಗ್ಗೆ ಇವರಲ್ಲಿರುವ ಅಭಿಮಾನ ಕಂಡು ಬಹಳಷ್ಟು ಮಂದಿ ಹರ್ಷ ವ್ಯಕ್ತಪಡಿಸಿದ್ದಾರೆ, ಬಹಳ ಸರಳವಾಗಿ, ಸ್ಪಷ್ಟವಾಗಿ, ಹರಳು ಹುರಿದಂತೆ ಪಟ ಪಟನೆ ಮಾತನಾಡುವ ಇವರಲ್ಲಿರುವ ಮಾತಿನ ಶೈಲಿ, ಸರಳತನ ಎಂತವರನ್ನು ಹುಬ್ಬೆರುವಂತೆ ಮಾಡುತ್ತದೆ..
                                                                               ಕರ್ನಾಟಕದ ತುಂಬಾ ಚಿರಪರಿಚಿತರಾಗಿರುವ ಯುವ ಕವಿಗಳು, ಹವ್ಯಾಸಿ ಬರಹಗಾರರು, ತಮ್ಮ ಬಿಡುವಿನ ಸಮಯದಲ್ಲಿ ಹಳೆಯ ಕಾಲದ ನಾಣ್ಯಗಳನ್ನು ಸಂಗ್ರಹಿಸುವುದು ಇವರ ಹವ್ಯಾಸಗಳಾಗಿವೆ, ಶಾಲೆಯ ದಿನಗಳ ಆವರಣದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿಂತನೆ, ಪ್ರತಿಭಾ ಪರಿಷತ್ತಿನಲ್ಲಿ ಕನ್ನಡದಲ್ಲಿ ರಾಜ್ಯಕ್ಕೆ ಹತ್ತನೇಯ ಸ್ಥಾನ ಪಡೆದು ಅಷ್ಟೇ ಅಲ್ಲದೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಇಷ್ಟೇ ಅಲ್ಲದೆ ಪ್ರತಿಭಾ ಕಾರಂಜಿಯಲ್ಲಿ ಕೂಡ ಉತ್ತಮ ಗುಣ ಮಟ್ಟದ ಭಾಷಣಕಾರರಾಗಿ ಸಣ್ಣ ಪುಟ್ಟ ಸಾಧನೆಗಳನ್ನು ಮಾಡಿರುತ್ತಾರೆ. ಈಗಾಗಲೇ ಇವರಿಂದ ಮೊದಲ ತಮ್ಮ ಚೊಚ್ಚಲ ಕೃತಿ "ಕನ್ನಡ ಕವನ, ಹಿತವಾದ ಮಾತುಗಳು" ನಲುಮೇಯ ಓದುಗರ ಕೈ ಸೇರಿವೆ, ಚೊಚ್ಚಲ ಕೃತಿಗೆ ನಾಡಿನ ಹೆಮ್ಮೆಯ ಹೆಸರಾಂತ ನಟರು, ಕಲಾವಿದರು, ನಿರೂಪಕರು, ವಿವಿಧ ಕನ್ನಡ ಪರ ಸಂಘಟನೆಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎರಡನೇ ಕೃತಿ "ಕರೊನ ಪಾಠ, ಮನೆಯ ವೈದ್ಯ ನೋಟ"ಎಂಬ ಪುಸ್ತಕ ಲೋಕಾರ್ಪಣೆಗೆ ಸಿದ್ದಗೊಂಡಿದೆ. ಕರುನಾಡಿನ ಕನ್ನಡ ಪರ ಪ್ರಮುಖ ಸಂಘಟನೆಗಳು. ರಾಜ್ಯ ಅಧ್ಯಕ್ಷರುಗಳು ಇವರು ಬರೆದಿರುವ ಕರೊನ ಪಾಠ ಮನೆಯ ವೈದ್ಯ ನೋಟ ಪುಸ್ತಕಕ್ಕೆ ಶುಭ ಹಾರೈಕೆಗಳನ್ನು ವಿಡಿಯೋ ಮೂಲಕ ತಿಳಿಸಿ ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.                                                                                                                                      
 
   ಮುಸ್ಲಿಂರಾದರು ಕನ್ನಡದ ಬಗ್ಗೆ ಅಪಾರವಾದ ಸಾಹಿತ್ಯ ಅಭಿರುಚಿಯನ್ನು ಅಳವಡಿಸಿಕೊಂಡು ಕನ್ನಡನಾಡಿನ ತುಂಬಾ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೆಯಾದ ಬರವಣಿಗೆ ಮೂಲಕ ಛಾಪು ಮೂಡಿಸಿ ಹರಳು ಹುರಿದಂತೆ ಮಾತನಾಡುವ ಮುಗ್ದ ಸ್ವಭಾವದ ವ್ಯಕ್ತಿ. ಶಿಸ್ತನು ಮೈಗೂಡಿಸಿಕೊಂಡು ಜೀವನದ ಕಷ್ಟ ಸುಖಗಳ ಜೊತೆ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಮುನ್ನುಗುತ್ತಿರುವ ಮಶಾಕ್ ಅಬ್ದುಲ್ ತಾಳಿಕೋಟಿರವರ ಕವಿತೆಗಳಲ್ಲಿ ಸರಳತನ ಜೊತೆಗೆ ಸಹಜತೆ ಎದ್ದು ಕಾಣುತ್ತದೆ. ಪ್ರತಿಯೊಬ್ಬ ಸಮಾಜದವರು ನೋಡುವ ನೋಟವಿದೆ, ಕಣ್ಣಿಗೆ ಕಂಡದ್ದನ್ನು ಬರೆಯುವ ಮನಸ್ಸಿದೆ. ಇವರ ಕಾವ್ಯ ಓದುತ್ತಿದ್ದರೆ ಇನ್ನಷ್ಟು ಓದಬೇಕ್ಕೆನ್ನುವ ಹಂಬಲವಿರುತ್ತದೆ.

ಅಷ್ಟು ಸೊಗಸಾಗಿ, ಚೆಂದಾಗಿ ಅಚ್ಚು ಕಟ್ಟಾಗಿ ಸಾಹಿತ್ಯವನ್ನು ಬರೆದಿದ್ದಾರೆ, ಇನ್ನು ಸಾಹಿತ್ಯ ಕ್ಷೇತ್ರದಲ್ಲಿ ಉತ್ತುಂಗದ ಶಿಖರಕ್ಕೆ ಏರಲಿ ಎಂದು ಆ ಭಗವಂತನಲ್ಲಿ ಕೇಳಿಕೊಳ್ಳುವೆ..

ವರದಿಗಾರರು : ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)