ಹಫೀಜ್ ಮುಹಮ್ಮದ್ ಅಲಿ ಅಲ್ ಹುಸೇನಿಗೆ ಅದ್ಧುರಿ ಸ್ವಾಗತ.

Udayavani News
0

ಕಲಬುರ್ಗಿ: ವಕ್ಫ್ ಬೋರ್ಡ್ ಸದಸ್ಯರಾಗಿ ನೂತನ್ ವಾಗಿ ಆಯ್ಕೆಯದ ಕೆಬಿಎನ್ ದರ್ಗಾದ ಸಜ್ಜಾದೆ ನಶೀನ ಹಫೀಜ ಸಯ್ಯದ ಮುಹಮ್ಮದ್ ಅಲಿ ಅಲ್ ಹುಸ್ಸೇನಿಯವರನ್ನು ಗುಲ್ಬರ್ಗಾದಲ್ಲಿ ಬಹಳ ಅದ್ಧುರಿಯಾಗಿ ಸ್ವಾಗತಿಸಲಾಯಿತು. ನಗರದ ಹುಮ್ನಾಬಾದ್ ರಿಂಗ್ ರೋಡನಲ್ಲಿ ಹೂವುಗಳಿಂದ ತುಂಬಿದ ಜೇಸಿಬಿಗಳಿಂದ ಅಲಿ ಹುಸೇನಿರಿಗೆ ಪುಷ್ಪಾರ್ಪಣೆ ನಡೆಯಿತು. ಅಲ್ಲದೇ 600 ಕೆಜಿ ಹಾಗೂ 50 ಮೀಟರ ಉದ್ದದ ಮಾಲಾರ್ಪಣೆಗೆ ನೆರೆದ ಸಮೂಹ ಸಾಕ್ಷಿಯಾಯಿತು. 

ಹೂ ಮಳೆಯ ನಂತರ ಕಪನೂರ ಏರಿಯಾದ ಬಾಬಾಸಾಹೇಬ ಅಂಬೇಡ್ಕರ ಮೂರ್ತಿಗೆ ಅಲಿ ಅಲ ಹುಸ್ಸೇನಿ ಮಾಲಾರ್ಪಣೆ ಮಾಡಿದರು. 

ಪುಂಜಾ ಗ್ರೂಪ್ ಆಫ್ ಇಂಡಸ್ಟ್ರಿ
(ಕರಿಗಾರ ಕುಟುಂಬ), ದರ್ಗಾ ಹಜರತ್ ಬೈ ಬಿ ಕುಂಜಾ ಮಸಾಬಿ ದರ್ಗಾ, ಅಯಾಜ್ ಖಾನ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ನಯೀಮ್ ಖಾನ ಸೇರಿದಂತೆ ಅನೇಕ ಜನ ಅವರಿಗೆ ರೋಡ ಶೋ ರ್ಯಾಲಿಯಲ್ಲಿಯೇ ಸನ್ಮಾನ ಮಾಡಿ ಅಭಿನಂದಿಸಿದರು. ರೋಡ ಶೋ ಉದ್ದಕ್ಕೂ "ಅಲಿ ಹಮಾರಿ ಜಾನ್ ಹೈ, ಗುಲ್ಬರ್ಗಾ ಕಿ ಶಾನ ಹೈ " ಎಂಬ ಜೈಕಾರ ಕೇಳಿ ಬಂತು.
ಹಫೀಜ ಮುಹಮ್ಮದ ಅಲಿ ಅಲ್ ಹುಸ್ಸೇನಿ ಇವರು ಜನರನ್ನು ಉದ್ದೇಶಿಸಿ ಮಾತನಾಡಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸದರು. 


ಸಹಸ್ರಾರು ಜನರು ಪಾಲ್ಗೊಂಡಿದ್ದ ಈ ರ್ಯಾಲಿ ಕಮಲಾಪುರದಿಂದ ಪ್ರಾರಂಭವಾಗಿ ಕಪ್ನೂರ್,
ಹುಮನಾಬಾದ್ ಸರ್ಕಲ್, ನಾಗೇಶ್ವರ ಶಾಲೆ, ಮುಸ್ಲಿಂ ಚೌಕ್, ಮಕ್ಬಾರಾ ಮಸೀದಿ, ಜಲಾಲವಾಡಿ, ಕೆಬಿಎನ್ ದರ್ಗಾ. ದರ್ಗಾ ತಲುಪಿದ ನಂತರ ಖಾಜಾ ಬಂದಾನವಾಜರ ಆಶೀರ್ವಾದ ಪಡೆದ ಅಲಿ ಅಲ್ ಹುಸ್ಸೇನಿ ದೇವಡಿ ತೆರಳಿದರು. ದೇವಡಿಯಲ್ಲಿ ಭಕ್ತರು ಅನುಯಾಯಿಗಳು ಸನ್ಮಾನ ಮಾಡಿದರು. ಶಾಂತಿಯುತವಾಗಿ ನಡೆದ ರ್ಯಾಲಿಯಲ್ಲಿ ಪೊಲೀಸ್ ಬಿಗಿ ಬಂದು ಬಸ್ತ ಮಾಡಲಾಗಿತ್ತು.

ವರದಿಗಾರರು :ಶಿವು ರಾಠೋಡ್ ಕಲಬುರ್ಗಿ

Post a Comment

0Comments

Post a Comment (0)