ನೀಲಪ್ಪ ತೆಗ್ಗಿ ಶಿಕ್ಷಕನ ಮಗನ ಹುಟ್ಟು ಹಬ್ಬದ ಪ್ರಯುಕ್ತ, ಬಸಾಪುರ ಶಾಲಾ ಎಲ್ಲಾ ಮಕ್ಕಳಿಗೆ ಸಿಹಿ ಊಟ ನೀಡಿದರು

Udayavani News
0
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಸಾಪುರ್ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ನೀಲಪ್ಪ ತೆಗ್ಗಿ ರಾಜ್ಯಮಟ್ಟದ ಉತ್ತಮ ಶಿಕ್ಷಕರು. ಇವರು ತಮ್ಮ ಮಗನ ಹುಟ್ಟು ಹಬ್ಬದ ಪ್ರಯುಕ್ತ, ಬಸಾಪುರ ಶಾಲಾ ಎಲ್ಲಾ ಮಕ್ಕಳಿಗೆ ಸಿಹಿ ಊಟ ನೀಡುವುದರ ಜೊತೆಗೆ, ಕಲಿಕಾ ಸಾಮಗ್ರಿಗಳನ್ನು ನೀಡಿರುತ್ತಾರೆ .

 ಶ್ರೀ ನೀಲಪ್ಪ ತಗ್ಗಿ ಶಿಕ್ಷಕರು ಈ ಮೊದಲು ಕೂಡ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಲ್ಲಿ ತಮ್ಮ ಮಕ್ಕಳ ಹುಟ್ಟುಹಬ್ಬಕ್ಕೆ ಆಗಿರಬಹುದು ಅಥವಾ ಅವರ ಮದುವೆಯ ವಾರ್ಷಿಕೋತ್ಸವಕ್ಕೆ ಆಗಿರಬಹುದು ತಮ್ಮ ಶಾಲಾ ಮಕ್ಕಳಿಗೆ ಸಿಹಿ ಊಟವನ್ನು ನೀಡುವುದರೊಂದಿಗೆ ಕಲಿಕಾ ಸಾಮಗ್ರಿಗಳನ್ನು ನೀಡಿತ್ತಾ ಬಂದಿರುತ್ತಾರೆ. 

ಈ ಕೆಲಸವು ಅತ್ಯಂತ ಅರ್ಥಪೂರ್ಣವಾಗಿರತಕ್ಕಂಥ ಕೆಲಸ ಆಗಿರುತ್ತದೆ. ಹುಟ್ಟುಹಬ್ಬ, ನಾಮಕರಣ ಇನ್ನಿತರೆ ಕಾರ್ಯಗಳಲ್ಲಿ ಅನವಶ್ಯಕವಾಗಿ ವೆಚ್ಚ ಮಾಡುವುದನ್ನು ಬಿಟ್ಟು ಪ್ರಜ್ಞಾವಂತರಾದ ನಾವುಗಳು ಹೀಗೆ ಶಾಲಾ ಮಕ್ಕಳಿಗೆ ಉಪಯೋಗವಾಗಬಹುದಾದ ಕಲಿಕಾ ಸಾಮಗ್ರಿಗಳಾಗಿರ ಬಹುದು, ಇನ್ನಿತರ ಶಾಲೆಗೆ ಬೇಕಾಗಿರುವ ಕಲಿಕಾ ಉಪಕರಣಗಳನ್ನು ನೀಡುವುದು ಎಲ್ಲರೂ ಮೆಚ್ಚುವ ಕೆಲಸವಾಗಿರುತ್ತದೆ.

ವರದಿಗಾರರು : ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)