ಯಾದಗಿರಿ : ಮೂಲತಹ ಬ.ಬಾಗೇವಾಡಿ ತಾಲೂಕಿನ ಕಾಮನಕೇರಿ ಗ್ರಾಮದವರಾದ ಇವರು 13ನೇ ವಯಸ್ಸಿಗೆ ನಾರಾಯಣಪೂರ ಜಲಾಶಯ ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡವರು ನಂತರ 1984ರಲ್ಲಿ ಲಿಂಗಸೂರಿನ ರೋಡಲಬಂಡಾ ಕ್ಯಾಂಪನಲ್ಲಿ ಹೋಟೆಲ ಪ್ರಾರಂಭಿಸಿ ಹಲವಾರು ಜನರಿಗೆ ಉದ್ಯೋಗ ನೀಡಿ ಸಾಹುಕಾರ ಸಂಗಣ್ಣ ಎಂದೇ ಖ್ಯಾತಿ ಪಡೆದವರು.
ಸಹಾಯ ಕೇಳಿ ಬಂದವರಿಗೆ ಸಾದ ಕೊಡುಗೈ ದಾನಿಗಳಾಗಿದ ಸಂಗಣ್ಣ ಸಾಹುಕಾರ:
ರೋಡಲಬಂಡಾ ಕ್ಯಾಂಪಿನ ಸುತ್ತಮುತ್ತಲಿನ ಜನರು ಯಾವುದೇ ರೀತಿಯ ಹಣ ಸಹಾಯ ಕೇಳಿ ಬಂದರೆ ಅಂತಹ ಜನರಿಗೆ ಹಿಂದೂ ಮುಂದೆ ನೋಡದೆ ಸಹಾಯಕ್ಕೆ ಮುಂದಾಗುತ್ತಿದ್ದರು. ಸಂಗಣ್ಣ ಸಾಹುಕಾರ ಜನಸೇವೆಗೆ ಸದಾ ಮುಂದಾಗುತ್ತಿದ್ದರು ಎಂದು ಕ್ಯಾಂಪಿನ ಸುತ್ತಮುತ್ತ ಜನರು ಹೇಳುತ್ತಾರೆ.
ಮೃತರರಿಗೆ ಮೂರು ಜನ ಹೆಣ್ಣು ಮಕ್ಕಳು ಮೂರು ಜನ ಗಂಡು ಮಕ್ಕಳಿದು ಹೋರಾಟಗಾರ ಹಾಗೂ ಪತ್ರಕರ್ತ ಅಮರೇಶಣ್ಣ ಕಾಮನಕೇರಿಯವರ ತಂದೆಯವರಾಗಿದ್ದಾರೆ. ಇವರ ತಂದೆಯ ಅಣ್ಣ ತಮ್ಮಂದಿರು 6 ಜನ ಒಬ್ಬ ಸೋದರ ಅತ್ತೆ ಇದ್ದು 600ಕ್ಕೂ ಅಧಿಕ ರಕ್ತ ಸಂಬಂಧಿಗಳು ಅಪಾರ ಬಂದು ಬಳಗದವರಿದ್ದಾರೆ. ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 12 ಗಂಟೆಗೆ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.