UDAYAVANI NEWS
ಮೂಡುಬಿದರೆ, ಮಾರ್ಚ್ 08 : ಮೂಡುಬಿದರೆಯ ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಫೆಬ್ರವರಿ ತಿಂಗಳ ಸಹಾಯ ಹಸ್ತವನ್ನು ಕಾಸರಗೋಡು ಜಿಲ್ಲೆಯ ಮುಳಿಯಾರು ಗ್ರಾಮದ ಅಮೆಕ್ಕಾರು ನಿವಾಸಿ 19 ವರ್ಷದ ದುರ್ಗಾ ನಿಖಿಲ್ ಅವರಿಗೆ ಹಸ್ತಾಂತರಿಸಲಾಯಿತು.
ಕೂಲಿ ಕೆಲಸ ಮಾಡುವಾಗ ಆಯ ತಪ್ಪಿ ಬಿದ್ದು ಮೆದುಳು ಬಳ್ಳಿಗೆ ಪೆಟ್ಟಾದ ಅವರ ಚಿಕಿತ್ಸೆಗಾಗಿ ಆರದಿರಲಿ ಬದುಕು ಆರಾಧನಾ ತಂಡ ಸಹಾಯ ನೀಡಿತು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಸಂಸ್ಥೆಯ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಅಭಿಷೇಕ್ ಶೆಟ್ಟಿ ಐಕಳ, ಭಾಸ್ಕರ ದೇವಾಡಿಗ, ಸಂಜಯ್ ಶೆಟ್ಟಿ ಗಣೇಶ್ ಪೈ, ಡಾ.ನಾಗರಾಜ ಶೆಟ್ಟಿ ಅಂಬೂರಿ, ದೇವಿ ಪ್ರಸಾದ್,ದೀನ್ ರಾಜ್ ಕೆ, ಬಸವರಾಜ ಮಂತ್ರಿ, ಶ್ರೀನಿವಾಸ ಬಜಪೆ, ಪ್ರಸಾದ್ ನಾಯಕ್ ಉಡುಪಿ, ಧನಂಜಯ ಶೆಟ್ಟಿ, ಪ್ರವೀಣ್ ಶೆಟ್ಟಿ, ಲಿಲೇಶ್ ಶೆಟ್ಟಿಗಾರ್ ಪ್ರವೀಣ್ ಬಂಗೇರ, ನಿಲೇಶ್ ಕಟೀಲು, ರಂಗನಾಥ್ ರಾವ್ ಪಕ್ಷಿಕೆರೆ, ದಿನೇಶ್ ಸಿದ್ದಕಟ್ಟೆ, ದಿವಾಕರ ಪೂಜಾರಿ ಮುಂಬಯಿ, ಪ್ರಭಾಕರ ಮಂಗಳೂರು, ಸುಜಿತ್ , ಶ್ರೀಕಾಂತ್ ಭಟ್ ಉಪಸ್ಥಿತರಿದ್ದರು.