ಗ್ರಾಪಂ ಸದಸ್ಯರ ಒಕ್ಕೂಟದಿಂದ, ನಮ್ಮ ನಡೆ ಗ್ರಾಮ ಪಂಚಾಯಿತಿ ಸದಸ್ಯರು ಗಳ ಕಡೆ ಆಂದೋಲನ
September 08, 2022
0
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು,ಕಕ್ಕುಪ್ಪಿ ಗ್ರಾಮ ಪಂಚಾಯಿತಿ, ಬಣವಿಕಲ್ಲು, ಗ್ರಾಮ ಪಂಚಾಯಿತಿ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಕಕ್ಕುಪ್ಪಿ ಗ್ರಾಮ ಪಂಚಾಯಿತಿ ಯಲ್ಲಿ, ಕರ್ನಾಟಕ ಗ್ರಾಪಂ ಸದಸ್ಯರ ಒಕ್ಕೂಟದಿಂದ, ಗ್ರಾಪಂ ಸದಸ್ಯರ ಗ್ರಾಮ ಪಂಚಾಯ್ತಿ ಮಟ್ಟದ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆ ಅಧ್ಯಕ್ಷ ಶರಣಪ್ಪ ಮುದ್ಗಲ್ ನೇತೃತ್ವದಲ್ಲಿ, ಕಕುಪ್ಪಿ ಗ್ರಾಪಂ ಅಧ್ಯಕ್ಷ ಏಕಾಂತ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಭಾಗ್ಯ ಶ್ರೀಮತಿ, ವಿಜಯ ಪ್ರಧಾನಕಾರ್ಯದರ್ಶಿ ಸದಸ್ಯರು, ಸಿದ್ದೇಶ್, ಹುಲುಗಪ್ಪ, ಬನ್ನಿ ಭರಮಪ್ಪ, ಮಾರಕ್ಕ, ಅಂಜಿನಪ್ಪ, ತಿಪ್ಪಮ್ಮ, ಆಶಾ ಕಾರ್ಯ ಕರ್ತೆಯರು, ಅರೋಗ್ಯ ಸಿಬ್ಬಂದಿ,ಎ.ಎನ್.ಎಮ್.ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ಇದ್ದರು. ಮತ್ತೊಂದು ಗ್ರಾಮ ಪಂಚಾಯ್ತಿಯಾದ ಬಣವಿಕಲ್ಲು ಗ್ರಾಪಂ ನಲ್ಲಿ, ಅಧ್ಯಕ್ಷರಾದ ರೇಣುಕಾ ಚಾರಿ ಅಧ್ಯಕ್ಷತೆಯಲ್ಲಿ ಜರುಗಿತು. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಾಂತ ಕುಮಾರಿ, ಸದಸ್ಯರಾದ ವೀರಣ್ಣ, ಪ್ರಶಾಂತ್ ಗೌಡ್ರು, ಮಾರಣ್ಣ, ಪಂಪಣ್ಣ, ಗುರುಸ್ವಾಮಿ, ಸರ್ವ ಸದಸ್ಯರು ಹಾಗೂ ಗ್ರಾಪಂ ಕಚೇರಿ ಸಿಬ್ಬಂದಿಗಳು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕುಂದು ಕೊರತೆ ಗಳನ್ನು ಆಲಿಸಲಾಯಿತು,ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ. ಕೂಡ್ಲಿಗಿ ತಾಲೂಕು ಅಧ್ಯಕ್ಷರು ಸಲಹೆ ಸೂಚನೆಗಳನ್ನು ನೀಡಿದರು. ಒಕ್ಕೂಟದ ಅಧ್ಯಕ್ಷ ಮಾತನಾಡಿದರು, ಕೆಲ ಸಮಸ್ಯೆ ಗಳನ್ನು ಸ್ಥಳದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಲಾಗುವುದು, ಹಲವು ಸಮಸ್ಯೆಗಳಿಗೆ ತಾಲೂಕು ಮಟ್ಟದಲ್ಲಿ, ಸಂಘಟನೆ ಪದಾಧಿಕಾರಿಗಳ ಸಮಕ್ಷಮದಲ್ಲಿ, ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಜೊತೆಗೆ ಚರ್ಚಿಸಿ, ಸಮಸ್ಯೆ ಬಗೆ ಹರಿಸುತ್ತೇವೆ. ಜಿಲ್ಲಾ ಮಟ್ಟದಲ್ಲಿ ಇರುವ ಸಮಸ್ಸೆಗಳನ್ನು ಜಿಲ್ಲಾ ಅಧ್ಯಕ್ಷರಾದ, ಸಣ್ಣಕ್ಕಿ ಲಕ್ಷ್ಮಣ್ ಜೊತೆ ಚರ್ಚಿಸಿ. ಅಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಗುವುದು. ಹಂತ ಹಂತವಾಗಿ ಎಲ್ಲ ಎಲ್ಲಾ ಗ್ರಾಮ ಪಂಚಾಯ್ತಿಗಳ ಸದಸ್ಯರು ಗಳ ಸಮಸ್ಸೆ ಗಳನ್ನು, ಬಗೆ ಹರಿಸೋಣ ಎಂದು ತಿಳಿಸಿದರು. ಎಲ್ಲಾ ಸದಸ್ಯರು ಗಳು ಒಗ್ಗಟ್ಟಾಗಿ ಇರೋಣ, ಅದಕ್ಕಾಗಿ ಸಾಮಾನ್ಯ ಸಭೆಗೆ ತಪ್ಪದೆ ಭಾಗಿ ಆಗಬೇಕು. 2 ದಿನದ ತರಬೇತಿ ಆಯೋಜಿಸಲಾಗಿದ್ದು, ಎಲ್ಲರೂ ಭಾಗಿ ಆಗಿ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ತಿಳಿಸಿದರು.
Tags