ಕಾಯಕತತ್ವದಿಂದ ಆರ್ಥಿಕ ಸಮಾನತೆ ತರಬಯಸಿದವರು ವಚನಕಾರರು: ವಿಜಯ ಕಮ್ಮಾರ್

Udayavani News
0

ವರದಿ:ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಮಸ್ಕಿ, ಸೆ.17 : ಬಸವಾದಿ ಶರಣರ ವಚನಗಳಲ್ಲಿ ನಾವು ಆರ್ಥಿಕತೆಯ ವಿಚಾರಗಳನ್ನು ಕಾಣಬಹುದು, ಅವರ ಆರ್ಥಿಕ ಕಲ್ಪನೆ ಎಲ್ಲರ ಅಭ್ಯುದಯವಾಗಿತ್ತು.
ಎಲ್ಲಾ ತಳಸಮುದಾಯದ ಕಾಯಕದ ಫಲದಿಂದ ಒಬ್ಬರು ಎಲ್ಲರಿಗಾಗಿ ಎಲ್ಲರು ಒಬ್ಬರಿಗಾಗಿ ಎಂಬ ಉದಾತ್ತ ಮೌಲ್ಯಗಳು ಅವರ ವಚನಗಳಲ್ಲಿ ಅಡಕವಾಗಿದ್ದವೆಂದು ಅಂತರಾಷ್ಟ್ರೀಯ ಸಂಪನ್ಮೂಲವ್ಯಕ್ತಿಗಳಾಗಿರುವ ವಿಜಯ ಕಮ್ಮಾರ್ ರವರು ಹೇಳಿದರು.

ಶುಕ್ರವಾರ ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಚನಗಳಲ್ಲಿ ಆರ್ಥಿಕತೆ ಎಂಬ ವಿಷಯದ ವಿಶೇಷ ಉಪನ್ಯಾಸದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು.
ಹಿರಿಯ ಪತ್ರಕರ್ತ ವೀರೇಶ ಸೌದ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪಂಪನಗೌಡ ಪಾಟೀಲ್ ರವರು ಮಾತನಾಡಿ ವಚನಗಳು ಜನಪರವಾದ ಆರ್ಥಿಕತೆಯನ್ನು ಪ್ರಚುರಪಡಿಸಿದವು ಅವುಗಳ ಭಾವಾರ್ಥವನ್ನು ನಾವು ಸರಿಯಾದರೀತಿಯಲ್ಲಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕಾಗಿದೆ.
ವಚನಗಳು ಜಾತಿಯಿಲ್ಲದ, ಸ್ವಾರ್ಥವಿಲ್ಲದ ಸಮಾನತೆಯ ಸಮಾಜ ನಿರ್ಮಾಣದ ಸಂದೇಶವನ್ನು ರವಾನಿಸಿದವು.
ಆದರೆ ಈಗ ಮೂಗು ಮಾಡಿದವರನ್ನು ಬಿಟ್ಟು ಮೂಗುತಿಮಾಡಿದವರನ್ನು ನೆನೆದರಂತೆ ಎನ್ನುವ ಮಾತು ಹೆಚ್ಚು ಪ್ರಚಲಿತದಲ್ಲಿದೆ.
ಎಂದು ಮಾರ್ಮಿಕವಾಗಿ ನುಡಿದರು.
ಕನ್ನಡವಿಭಾಗದ ಮುಖ್ಯಸ್ತರಾಗಿರುವ ಶಿವಗ್ಯಾನೆಪ್ಪ ,ರಾಜ್ಯಶಾಸ್ತ್ರವಿಭಾಗದ ಉಪನ್ಯಾಸಕ ಸುರೇಶ ಬಳಗಾನೂರು ಮಾತನಾಡಿದರು.
ಈ ಕಾರ್ಯಕ್ರಮವನ್ನು ಉಪನ್ಯಾಸಕ ಪ್ರಭುದೇವ ಸಾಲಿಮಠ ನಿರೂಪಿಸಿದರೆ,ಉಪನ್ಯಾಸಕ ರವಿಕುಮಾರ್ ವಂದಿಸಿದರು. 

ಈ ಕಾರ್ಯಕ್ರಮದಲ್ಲಿ 
ವಿದ್ಯಾರ್ಥಿ- ವಿದ್ಯಾರ್ಥಿನಿಯರು,ಸಹಾಯಕ ಪ್ರಾಧ್ಯಾಪಕರು,ಉಪನ್ಯಾಸಕ ಉಪನ್ಯಾಸಕಿಯರು ಉಪಸ್ಥಿತರಿದ್ದರು.

Post a Comment

0Comments

Post a Comment (0)