ಎಸಿಬಿ ರಚನೆ ರದ್ದು, ಲೋಕಾಯುಕ್ತ ಬಲವರ್ಧನೆ ಆದೇಶ..! ಕಡತ ವರ್ಗಾವಣೆಗೆ ಎಡಿಜಿಪಿ ಆದೇಶ..! ಅತಂತ್ರಗೊಂಡ ಪೊಲೀಸ್ ಅಧಿಕಾರಿಗಳು..!

Udayavani News
0

ಬೆಂಗಳೂರು:
ಎಸಿಬಿ ರಚನೆ ರದ್ದು ಮಾಡಿ ಲೋಕಾಯುಕ್ತ ಬಲವರ್ಧನೆ ಆದೇಶ ಹೊರಡಿಸಲಾಗಿದೆ. ಸರ್ಕಾರದಿಂದಲೂ ಅಧಿಸೂಚನೆ ಹೊರಡಿಸಿ ನಿನ್ನೆ ಆದೇಶಿಸಲಾಗಿದ್ದು,ಇದರ ಬೆನ್ನಲ್ಲೇ ಕಡತ ವರ್ಗಾವಣೆಗೆ ಎಡಿಜಿಪಿ ಆದೇಶಿಸಿದ್ದಾರೆ. ಇವೆಲ್ಲದರ ನಡುವೆ ಪೊಲೀಸ್ ಅಧಿಕಾರಿಗಳು ಅತಂತ್ರಗೊಂಡಿದ್ದಾರೆ.

ಇನ್ಸ್‌ಪೆಕ್ಟರ್, ಡಿವೈಎಸ್‌ಪಿ, ಎಸ್‌ಪಿ ಹಂತದ ಅಧಿಕಾರಿಗಳು, ರಾಜ್ಯಾದ್ಯಂತ ಎಸಿಬಿಯಲ್ಲಿ 75 ಮಂದಿ ಇನ್ಸ್‌ಪೆಕ್ಟರ್‌ಗಳಿದ್ದಾರೆ. 45 ಡಿವೈಎಸ್‌ಪಿ, 9 ಮಂದಿ ಎಸ್‌ಪಿ ದರ್ಜೆಯ ಅಧಿಕಾರಿಗಳಿದ್ದಾರೆ, ಇಷ್ಟು ಅಧಿಕಾರಿಗಳಿಗೆ ಸ್ಥಳ ನಿಯುಕ್ತಗೊಳಿಸುವುದೇ ಕಷ್ಟವಾಗಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಇನ್ಸ್‌ಪೆಕ್ಟರ್, ಡಿವೈಎಸ್‌ಪಿ ಹುದ್ದೆಗಳು ಭರ್ತಿಯಾಗಿದ್ದು, ಉಳಿದ ಎಲ್ಲಾ ಪೊಲೀಸ್ ವಿಭಾಗದಲ್ಲೂ ಹುದ್ದೆಗೆ ತಕ್ಕಷ್ಟು ಅಧಿಕಾರಿಗಳಿದ್ದಾರೆ. ಈ ಸಂದರ್ಭದಲ್ಲಿ ಎಸಿಬಿಯಲ್ಲಿ ಇರುವ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸುವುದೇ ಸವಾಲಾಗಿದೆ. ಎಸ್‌ಪಿ ಹುದ್ದೆಯಲ್ಲಿ ಇರೋವ್ರು, ಐಪಿಎಸ್, ಕೆಎಸ್‌ಪಿಎಸ್ ಅಧಿಕಾರಿಗಳು, ಇವರಿಗೆ ಯಾವುದಾದರೂ ಹುದ್ದೆಗೆ ವರ್ಗಾವಣೆ ಮಾಡಬಹುದು, ಆದರೆ ಇನ್ಸ್‌ಪೆಕ್ಟರ್ ಮತ್ತು ಡಿವೈಎಸ್‌ಪಿಗಳಿಗೆ ಸ್ಥಳ ನಿಯುಕ್ತಿ ಮಾಡೋದು ಸರ್ಕಾರಕ್ಕೆ ಸವಾಲಾಗಿದ.

Post a Comment

0Comments

Post a Comment (0)