ಮಸ್ಕಿ ಸೆ.12 : ಪಟ್ಟಣದ ಪರಾಪೂರ ರಸ್ತೆಯ ಹೊರ ವಲಯದಲ್ಲಿರುವ ಅಭಿನಂದನ್ ಸ್ಫೂರ್ತಿ ದಾಮ ಅನಾಥ ಆಶ್ರಮದಲ್ಲಿ ವೀರೇಶ್ ಪೊಲೀಸ್ ಮಗನಾದ ಪರಶುರಾಮ ಎಂಬ ಪುಟ್ಟ ಬಾಲಕನ ಹುಟ್ಟು ಹಬ್ಬವನ್ನು ಸರಳತೆಯಿಂದ ಆಚರಿಸಲಾಯಿತು.
ವೀರೇಶ್ ಪೊಲೀಸ್ ಮತ್ತು ರಾಧಾ ಬಂಡಿ ಎಂಬ ದಂಪತಿಯ ಎರಡನೇ ಮಗನಾದ ಪರಶುರಾಮ ವಿ.ಎಂ 3 ನೇ ವರುಷದ ಪುಟ್ಟ ಕಂದನ ಹುಟ್ಟುಹಬ್ಬವನ್ನು ಅಭಿನಂದನ್ ಸ್ಫೂರ್ತಿ ದಾಮ ಅನಾಥ ಆಶ್ರಮದಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಸರಳತೆಯಿಂದ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.
ಆಶ್ರಮದ ಸಂಸ್ಥಾಪಕ ರಾಮಣ್ಣ ಹಂಪರಗುಂದಿ, ಶೃತಿ ಹಂಪರಗುಂದಿ, ಅಶೋಕ್ ಪೊಲೀಸ್, ಪೊಲೀಸ್ ಸಿಬ್ಬಂದಿ ವರ್ಗದವರು, ಸಂತೋಷ ಕುಮಾರ್, ಸ್ಥಳೀಯ ಯುವಕರು ಹಾಗೂ ಆಶ್ರಮದ ಮಕ್ಕಳು ಇದ್ದರು.