ಬೆಂಗಳೂರು : ಸಮಾಜದಲ್ಲಿ ಮೇಲು , ಕೀಳು , ತಾರತಮ್ಯಗಳನ್ನು ನಿವಾರಣೆ ಮಾಡಿ , ಸಾಮರಸ್ಯ ಮೂಡಿಸುವ ಹಾಗೂ ಹಿಂದೂಗಳಲ್ಲಿ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ವ್ಯಾಪಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನ್ನಿಕೇರಿಯ ವಿಶ್ವ ಹಿಂದೂ ಅಂತರ್ಜಾತಿ ವಿವಾಹ ಪ್ರೋತ್ಸಾಹಕ ಸಂಘದ ಸಂಸ್ಥಾಪಕ ಅಧ್ಯಕ್ಷರು ಮನ್ನಿಕೇರಿಯ ಮಹಾಂತಲಿಂಗೇಶ್ವರ ಮಠದ ಪೂಜ್ಯ ಶ್ರೀ ವಿಜಯ ಸಿದ್ಧೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರ್ಜಾತಿ ವಿವಾಹ ಪ್ರೋತ್ಸಾಹಿಸಲು ರಾಜ್ಯದಾದ್ಯಂತ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು . ಅಂತರ್ಜಾತಿ ವಿವಾಹವಾದ ದಂಪತಿಗಳನ್ನು ಗೌರವಿಸುವ ಅವರ ಸಂಕಷ್ಟಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಸ್ನೇಹ ಸಮ್ಮೇಳನ ಹಾಗೂ ಇನ್ನಿತರ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು . ವಿವಾಹವಾದ ದಂಪತಿಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗುವುದು . ಒಟ್ಟಾರೆ ಜಾತಿವ್ಯವಸ್ಥೆ ನಿರ್ಮೂಲನಗೊಳಿಸುವ ನಿಟ್ಟಿನಲ್ಲಿ ವಿವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಗುವುದು ಎಂದರು.
ಎಲ್ಲ ಜನರಿಗೂ ಧಾರ್ಮಿಕ ಹಾಗೂ ಸಾಮಾಜಿಕ ಸಮಾನತೆಯ ಅವಕಾಶಗಳನ್ನು ದೊರಕಿಸುವ , ಸಮಾನತೆ ಸಾರುವ ವಿಚಾರ ಧಾರೆಗಳನ್ನು ಉತ್ತೇಜಿಸುವಂತಹ ಉದಾತ್ತ ಧೈಯ ಹೊಂದಿದ್ದು ಈ ಮೂಲಕ ಹಿಂದೂ ಧರ್ಮದಿಂದ ಅನ್ಯ ಧರ್ಮಗಳಿಗೆ ಮತ್ತಾಂತರವಾಗುವುದನ್ನು ತಪ್ಪಿಸುವುದು ನಮ್ಮ ಪರಮ ಗುರಿಯಾಗಿದೆ . ಈಗಾಗಲೇ ಮತಾಂತರಗೊಂಡವರನ್ನು ಮನವೊಲಿಸಿ ಮತ್ತೆ ಹಿಂದೂ ಧರ್ಮಕ್ಕೆ ಮರಳಿ ಕರೆತರುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು .
ಲಕ್ಷಾಂತರ ಜನ ಅಂತರ್ಜಾತಿ ವಿವಾಹವಾಗಿದ್ದು ಅವರೆಲ್ಲರನ್ನು ಒಂದೇ ವೇದಿಕೆಗೆ ತರುವ ಜೊತೆಗೆ ಅಂತರ್ಜಾತಿ ವಿವಾಹವಾದ ಹಿಂದೂಗಳು ಹಾಗೂ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡ ಆರ್ಥಿಕವಾಗಿ ಹಿಂದೂಳಿದ ಬಡಕುಂಟುಂಬಗಳಿಗೆ ನೆರವು , ಶೈಕ್ಷಣಿಕ , ಸಾಮಾಜಿಕ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾದ ಗಮನಕ್ಕೆ ತರುವುದು , ಎಂದು ವಿಜಯ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ವಿಶ್ವ ಹಿಂದೂ ಅಂತರ್ಜಾತಿ ವಿವಾಹ ಪ್ರೋತ್ಸಾಹಕ ಸಂಘದ ಗೌರವಾಧ್ಯಕ್ಷರಾಗಿ ಬೆಂಗಳೂರಿನ ರಾಮೋಹಳ್ಳಿಯ ಸಿದ್ಧಾರೂಢ ಮಿಷನ್ ಆಶ್ರಮದ ಡಾ || ಆರೂಢ ಭಾರತಿ ಸ್ವಾಮೀಜಿ , ಕಾರ್ಯನಿರ್ವಹಿಸುತ್ತಿದ್ದು ಉಪಾಧ್ಯಕ್ಷರಾಗಿ ರಾಮದುರ್ಗದ ಶ್ರೀ ಸಿದ್ಧಾರೂಢ ಮಠದ ಶ್ರೀ ಜಗದಾತ್ಮಾನಂದ ಸ್ವಾಮೀಜಿ . ಪ್ರಧಾನ ಕಾರ್ಯದರ್ಶಿ ಕಲ್ಲಯ್ಯಾ ಈ . ಹಿರೇಮಠ , ಕಾರ್ಯನಿರತರಾಗಿದ್ದಾರೆ ಎಂದರು.
ಯಾವುದೇ ಭಾಗದ ಅಂತರ್ಜಾತಿ ವಿವಾಹವಾದಂತಹ ದಂಪತಿಗಳನ್ನು ಈ ಸಂಘದ ಸದಸ್ಯತ್ವವನ್ನು ಪಡೆದುಕೊಳ್ಳಲೂ ಪ್ರಧಾನ ಕಾರ್ಯದರ್ಶಿ ಕಲ್ಲಯ್ಯ ಈ ಹಿರೇಮಠ ಮೊ : 8971867407 ಆಪೀಸ್ ನಂ : 6361163100
ಕೋರಲಾಗಿದೆ.
ವರದಿ - ಬಸವಲಿಂಗಪ್ಪ 8747875752