ದೇವರ ಹಿಪ್ಪರಗಿ :: ಶ್ವ ಪರಿಸರದ ದಿನದ ಅಂಗವಾಗಿ ಇಂದು ದೇವರಹಿಪ್ಪರಗಿಯ ಪಟ್ಟಣದಲ್ಲಿ ಬಿಜೆಪಿಯ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ಸಸಿಗಳನ್ನು ನೆಟ್ಟು ನೀರೆರೆದರು.ಪರಿಸರದ ಬಗೆ ಕಾಳಜಿಯನ್ನು ಹೆಚ್ಚಿಸಿ,ಅರಣ್ಯ, ಮರಗಿಡ ಹಾಗೂ ಪಶುಪಕ್ಷಿ ಸಂಕುಲವನ್ನು ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಪ್ರತಿಯೊಬ್ಬ ನಾಗರಿಕರು ಕಾರ್ಯಪ್ರವೃತ್ತರಾಗಬೇಕು.ಈ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರದ ಕೊಡುಗೆಯನ್ನು ನೀಡಬೇಕೆಂದು ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯದಲ್ಲಿ ವಿಜಯಪುರ ಜಿಲ್ಲೆಯು ಅತಿ ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿದೆ. ಅದಕ್ಕಾಗಿಯೇ ಜಿಲ್ಲೆಯಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗುತ್ತಿಲ್ಲ.ಇದಕ್ಕೆ ಕಾರಣ ಅರಣ್ಯ ನಾಶವಾಗಿದೆ.ಪ್ರತಿಯೊಬ್ಬ ನಾಗರಿಕರು ಮರ ಗಿಡಗಳನ್ನು ಬೆಳೆಸುವುದರ ಮೂಲಕ ವಿಜಯಪುರ ಜಿಲ್ಲೆಯನ್ನು ಬರಗಾಲದ ನಾಡನ್ನು, ಮಲೆನಾಡನಾಗಿ ಮಾಡೋಣ ಎಂದು ಕರೆ ನಿಡಿದರು.
ಕರ್ನಾಟಕ ರಾಜ್ಯದಲ್ಲಿ ಜೂನ್ 5ರಿಂದ ಒಂದು ತಿಂಗಳ ಕಾಲ ಎಲ್ಲಾ ಜಿಲ್ಲೆ, ಮಂಡಲ, ಬೂತ್ ಗಳಲ್ಲಿ ಸಂಸದರು, ಶಾಸಕರು, ಪದಾಧಿಕಾರಿಗಳು, ಮತ್ತು ಪಕ್ಷದ ಕಾರ್ಯಕರ್ತರನ್ನು ಒಳಗೊಂಡಂತೆ ಸಸಿ ನೆಡುವ ಕಾರ್ಯಕ್ರಮವನ್ನು ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಎಲ್.ಡಿ.ಮುಲ್ಲಾ, ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ,ಪಟ್ಟಣ ಪಂಚಾಯಿತಿಯ ಸಧ್ಯಸರು ಬಶೀರ ಬೇಪಾರಿ,ಬಿಜೆಪಿ ಮಂಡಲ ಅದ್ಯಕ್ಷ ಭಿಮನಗೌಡ ಸಿದ್ಧರೆಡ್ಡಿ,ಬಿಜೆಪಿ ಯುವಮೊರ್ಚಾದ ಅದ್ಯಕ್ಷರು ರಾಜು ಮೇಟಗಾರ, ಯುವ ಮೋರ್ಚಾದ ಉಪಾಧ್ಯಕ್ಷರು ಶಂಕರ ಜಮಾದಾರ,ಕಾಸುಗೌಡ ಬಿರಾದಾರ, ಹುಸೇನ ಗೌಂಡಿ,ಕಾಸು ಬಜೆಂತ್ರಿ,ಕಾಸಿನಾಥ ಜಮಾದಾರ ಉಮೇಶ ರೂಗಿ ಹಾಗೂ ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರು ಭಾಗವಹಿಸಿದ್ದರು.
ವರದಿ : ಬಸವರಾಜ ಯಲಗೋಡ ದೇವರ ಹಿಪ್ಪರಗಿ