ಬಿಜೆಪಿಗೆ ಬೆಳಗಾವಿ ಬಣ ರಾಜಕಾರಣವು ದೊಡ್ಡ ತೆಲೆ ನೋವಾಗಿ ಪರಿಣಮಿಸಿದೆ. ಮತ್ತೊಂದೆಡೆ ಸಚಿವ ಮುರುಗೇಶ್ ನಿರಾಣಿ ಕುಟುಂಬದ ವಿರುದ್ಧ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲವೆಂಬುದನ್ನು ಸೂಚಿಸುತ್ತಿದೆ. ಈ ಹಿನ್ನೆಲೆ ಸಭೆ ಕರೆಯಲಾಗಿದ್ದು, ಈ ಬಗ್ಗೆ ಚರ್ಚಿಸಿ 'ಕೇಸರಿ' ಪಡೆ ಭಿನ್ನಮತ ಶಮನ ಮಾಡುತ್ತಾ ಅನ್ನೂ ಪ್ರಶ್ನೆ ಮೂಡಿದೆ.
ಬಣ ರಾಜಕೀಯ ಕ್ಕೆ ಬಲಿ ಆಗಲಿದೆಯಾ ಬೆಳವಾಗಿ ಬಿಜೆಪಿ..?
May 20, 2022
0
ಬೆಳಗಾವಿ: ಬಿಜೆಪಿಯಲ್ಲಿ ಭಿನ್ನಮತ ವಿಚಾರ ಇದೀಗ 'ಕೇಸರಿ ಪಕ್ಷ'ಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆ ಭಿನ್ನಮತ ಶಮನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಹೊಣೆಗಾರಿಕೆ ವಹಿಸಲಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಇಂದು ಕೇಂದ್ರ ಸಚಿವರ ನೇತೃತ್ವದಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆ ನಾಯಕರ ಜೊತೆಗೆ ಬೆಳಗಾವಿ ಖಾಸಗಿ ಹೋಟೆಲ್ ನಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಗೆ ಮೂರು ಜಿಲ್ಲೆಯ ಸಚಿವರು, ಶಾಸಕರು, ಸಂಸದರು ಹಾಜರಿರಬೇಕೆಂದು ಸೂಚಿಸಲಾಗಿದೆ. ರವಿಕುಮಾರ್ ನೇತೃತ್ವದಲ್ಲಿ ನಡೆದ ಸಭೆಗೆ ಜಾರಕಿಹೊಳಿ ಬ್ರದರ್ ಗೈರಾಗಿದ್ದರು. ಹೀಗಾಗಿ ಪ್ರಹಾದ್ ಜೋಶಿ ನೇತೃತ್ವದ ಸಭೆಗೆ ಜಾರಕಿಹೊಳಿ ಬ್ರದರ್ಸ್ ಹಾಜರಾಗ್ತಾರಾ? ಅನ್ನೋ ಪ್ರಶ್ನೆ ಮೂಡಿದೆ.
Tags