ಮುದ್ದೇಬಿಹಾಳ ನ್ಯೂಸ್;
ಯಾವದೆ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಸಮಾಜ ಸೇವೆ ನಿಜವಾಗಿಯೂ ದೊಡ್ಡದು. ಅದಕ್ಕೆ ಬೆಲೆಕಟ್ಟಲಾಗದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು. ಅವರು ಪಟ್ಟಣದ ವಿದ್ಯಾನಗರದಲ್ಲಿರುವ ಮನಿಯಾರ ಕಾಂಪ್ಲೆಕ್ಸಿನಲ್ಲಿ ನಡೆದ ಮನಿಯಾರ ಸೇವಾ ಟ್ರಸ್ಟ್ ವತಿಯಿಂದ ಪವಿತ್ರ ರಂಜಾನ ಪ್ರಯುಕ್ತ ತಂದೆ ತಾಯಿ ಸ್ಮರಣಾರ್ಥ 50 ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಹಾಗೂ ಔಷಧಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ನಾವೆಲ್ಲ ರಾಜಕಾರಣಿಗಳು ಯಾರೋ ಮಾಡಿದ ಸಮಾಜ ಸೇವೆಯಲ್ಲಿ ನಾವು ಮಾಡಿದ್ದೇವೆ ಎಂದು ಪ್ರಚಾರ ಪಡೆಯುತ್ತೇವೆ, ಆದರೆ ಅಯ್ಯೂಬ ಅವರು ತಾವು ಗಳಿಸಿದ ಆದಾಯದಲ್ಲಿ ಬಡವರಿಗಾಗಿ ಲಕ್ಷಾಂತರ ಹಣ ನೆರವು ನೀಡುತ್ತಿರುವುದು, ಬಡವರ ಸೇವೆಯಲ್ಲಿ ದೇವರನ್ನು ಕಾಣುವುದು ಎಲ್ಲರಿಗೂ ಮಾದರಿ ಎಂದರು. ಡಾ.ಎ.ಎಂ.ಮುಲ್ಲಾ ಮಾತನಾಡಿ, ನಮ್ಮ ನ್ಯಾಯವಾದ ದುಡಿಮೆಯಲ್ಲಿ ಉಳಿಸಿ, ಇಲ್ಲದವರಿಗೆ ಹಂಚಿ ಉಣ್ಣುವಂತೆ, ಉಪವಾಸ, ದಾನ ಧರ್ಮ, ದಾಸೋಹ ಮಾಡುವಂತೆ ಇಸ್ಲಾಂ ಧರ್ಮ ಹೆಳುತ್ತದೆ ಎಂದರು. ಉಚಿತ ಕಣ್ಣಿನ ಶಿಬಿರ ನಡೆಸಿಕೊಟ್ಟ ನೇತ್ರ ಶಸ್ತ್ರ ಚಿಕಿತ್ಸಕ ಡಾ.ಪ್ರಭುಗೌಡ ಬಿ.ಎಲ್. ಮಾತನಾಡಿ, ಅಯ್ಯೂಬ ಮನಿಯಾರ ಅವರ ಸಮಾಜ ಸೇವೆ ಬಗ್ಗೆ ಹೆಮ್ಮೆ ಎನಿಸುತ್ತದೆ. ಕಳೆದ ಒಂಬತ್ತು ವರ್ಷಗಳಿಂದ ಒಂದು ರೂ.ಹಣ ಪಡೆಯದೇ, ಜಾತಿ ಬೇಧ ಎಣಿಸದೇ ಅರ್ಹ ಬಡವರಿಗೆ ಸಲ್ಲಿಸಿದ ಸೇವೆ ದೊಡ್ಡ ಸಮಾಜ ಸೇವೆ ಎಂದರು. ಸಭೆಯನ್ನುದ್ದೇಶಿಸಿ ಹಿರಿಯ ವಕೀಲರಾದ ಎಂ. ಎಚ್.ಹಾಲಣ್ಣವರ, ನೇತಾಜಿ ನಲವಡೆ, ಎಂ.ಎಚ್.ಕ್ವಾರಿ ವಕೀಲರು, ಎಚ್.ಎಂ.ವಡಗೇರಿ, ವೈ.ಎಚ್.ವಿಜಯಕರ ಮತ್ತಿತರರು ಮಾತನಾಡಿದರು. ವೇದಿಕೆಯ ಮೇಲೆ ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಗುರು ತಾರನಾಳ, ಸತೀಶ ಓಸ್ವಾಲ, ಅಬ್ದುಲಗಫೂರ ಮಕಾನದಾರ, ಪ್ರಭುರಾಜ ಕಲಬುರ್ಗಿ, ವಾಸುದೇವ ಶಾಸ್ತ್ರಿ, ಲಾಡ್ಲೇಮಶ್ಯಾಕ ನಾಯ್ಕೋಡಿ, ಅಲ್ಲಾಭಕ್ಷ ಢವಳಗಿ, ರಾಜೇಂದ್ರ ಭೋಸಲೆ, ವಿಕ್ರಮ ಓಸ್ವಾಲ ಮತ್ತಿತರರು ಇದ್ದರು. ಅಧ್ಯಕ್ಷತೆ ವಹಿಸಿ ಸಮಾಜ ಸೇವಕ ಅಯೂಬ್ ಮನಿಯಾರ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಕುಂಟೋಜಿಯ ಡಾ.ಚನ್ನವೀರ ದೇವರು, ಮೌಲಾನಾ ಇಸಾಖ ಮಾಗಿ ಆಶೀರ್ವಚನ ನೀಡಿದರು. ನಿನ್ನೆ ಸೋಮವಾರ ಶಿಬಿರದಲ್ಲಿ 75 ಜನರನ್ನು ತಪಾಸಣೆ ಮಾಡಿ ಅದರಲ್ಲಿ ಅರ್ಹರಾದ 50 ಜನರನ್ನು ಆಯ್ಕೆ ಮಾಡಿ, ಕಲಬುರ್ಗಿಯಲ್ಲಿರುವ ಅನುಗ್ರಹ ಕಣ್ಣಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಯಿತು. ಆಪ್ತಾಬ ಮನಿಯಾರ ಸ್ವಾಗತಿಸಿದರು. ಮೌಲಾನಾ ಹುಸೇನ ುಮರಿ ಕುರಾನ ಪಠಣ ಮಾಡಿದರು. ಆರೋಗ್ಯ ನಿರೀಕ್ಷಕ ಮುಜಾಹಿದ ನಮಾಜಕಟ್ಟಿ ನಿರೂಪಿಸಿದರು. ಬಾಬಾ ಶೇಖ ವಂದಿಸಿದರು.