ಐಟಿ ಉದ್ಯೋಗಿಗಳಿಗೆ ಇದು ಶಾಕಿಂಗ್ ನ್ಯೂಸ್. ಒಳ್ಳೆ ಆಫರ್ ಬಂತು ಅಂತ ನೀವು ಪ್ರತಿಸ್ಪರ್ಧಿ ಕಂಪನಿ ಸೇರಿದ್ರೋ ಮುಗಿತು ನಿಮ್ಮ ಕಥೆ. ಕೆಲಸ ವಿಲ್ಲದೇ 6 ತಿಂಗಳು ಮನೆಯಲ್ಲಿಯೇ ಕುಳಿತು ಕೊಳ್ಳಲೇಬೇಕಾಗುತ್ತದೆ.
ಇಂತಹ ಒಂದು ನಿಯಮವನ್ನ ಇನ್ಫೋಸಿಸ್ ಕಂಪನಿ ಜಾರಿಗೆ ತಂದಿದೆ. ಸದ್ಯ ಕಂಪನಿಯಲ್ಲಿ ಆಗ್ತಿರೋ ಪ್ರತಿಭಾ ಪಲಾಯನವನ್ನ ತಪ್ಪಿಸಲೆಂದೇ ಕಂಪನಿ ಈ ಒಂದು ಹೊಸ ಐಡಿಯಾ ಮಾಡಿದೆ.
ಕಂಪನಿಯ ಆಫರ್ ಲೆಟರ್‌ನಲ್ಲಿಯೇ ಈ ಒಂದು ಷರತ್ತು ವಿಧಿಸಿದೆ.ಈ ಕಂಪನಿ ಜಾಯಿನ್ ಆದ ಉದ್ಯೋಗಿಗಳು,ಇಲ್ಲಿ 12 ತಿಂಗಳು ಕೆಲಸ ಮಾಡಿದ ಕ್ಲೈಂಟ್‌ಗಳು ಬೇರೆ ಕಂಪನಿಯಲ್ಲೂ ಇದ್ದರೇ ಅಂತಹ ಪ್ರತಿಸ್ಪರ್ಧಿ ಕಂಪನಿಗೆ 6 ತಿಂಗಳವರೆಗೂ ಸೇರುವಂತಿಲ್ಲ ಅಂತಲೇ ಆಫರ್ ಲೆಟರ್ ನಲ್ಲಿ ಹೇಳಲಾಗಿದೆ.
ಆದರೆ, ಇನ್ಫೋಸಿಸ್‌ನ ಈ ಒಂದು ಷರತ್ತಿಗೆ ಉದ್ಯೋಗಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಪಿಓ ಮತ್ತು ಐಟಿ ಉದ್ಯೋಗಿಗಳ ಸಂಘ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೂ ದೂರು ನೀಡಿದೆ.