ಕಾಂಗ್ರೆಸ್ಸ ಸಾಮೂಹಿಕ ನಾಯಕತ್ವದಲ್ಲಿ ಹೋರಾಟ
ರಾಜ್ಯದಲ್ಲಿ ಧರ್ಮಜಾತಿನಡುವೆಸಂಘರ್ಷ, ಮುಂಬರುವ ಚುನಾವಣೆಯಲ್ಲಿ ಮತದಾರ ತಕ್ಕಪಾಠ ಕಲಿಸುತ್ತಾನೆ -ಜಾರಕಿಹೊಳಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ:ಎ೨೨ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ದೇಶದಲ್ಲೆ ಅತಿಹೆಚ್ಚು ಭ್ರಷ್ಠಾಚಾರ ನಡೆಯುತ್ತಿರುವ ಸರ್ಕಾರ ಎಂಬುದಾಗಿದ್ದು ಜನತೆ ಮುಂಬುರುವ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶಜಾರಿಕಿಹೊಳಿ ಹೇಳಿದರು
ಅವರು ತಾಲೂಕಿನ ಚಿಕ್ಕುಪ್ಪೇರಿಗ್ರಾಮದ ಕಂಬಳಿ ಕುಟುಂಬದವರ ಮದುವೆಯಲ್ಲಿ ಭಾಗವಹಿಸಿ ನಂತರ ಮಾತನಾಡಿ ಮಠ ಮಂದಿರಗಳು ಹಾಗೂ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ಶೇ ೪೦ % ಕಮೀಷನ ಕಡಿತ ಮಾಡುತ್ತಿರುವ ಆರೋಪಗಳು ಬಹಿರಂಗ ಚರ್ಚೆ ನಡೆದಿದೆ ಎಂದು ಟೀಕಿಸಿ
ಪರ್ಸೇಂಟೆಜಗಾಗಿ ಪೈಪೋಟಿ ನಡೆದಿದ್ದು ಇನ್ನೊಂದೆಡೆ ಧರ್ಮ ಧರ್ಮಗಳ ಜಾತಿ ಜಾತಿಗಳ ಮಧ್ಯೆ ಸಂಘರ್ಷ ಹುಟ್ಟು ಹಾಕಿ ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡುತ್ತಿರುವ ಬಗ್ಗೆ ಎಲ್ಲ ಧರ್ಮಿಯರು ಬೇಸರಗೊಂಡಿದ್ದಾರೆ ಕಾರಣ ಈ ಅವ್ಯವಸ್ಥೆ ವಿರುದ್ದ ಕಾಂಗ್ರೆಸ್ಸ ಪಕ್ಷದ ಮುಖಂಡರು ಬೀದಿಗಿಳಿದು ಹೋರಾಟ ನಡೆಸಲಾಗುತ್ತಿದೆ. ಸರ್ಕಾರ ತಾನಾಗಿಯೆ ವಿರ್ಸಜನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು ಜನ ಜಾಗೃತಿಗೆ ಚಿಂತನೆ ನಡೆಸುತ್ತಿದೆ ಎಂದರು
ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಕಾಂಗ್ರೆಸ್ಸ ಸುಭದ್ರವಾಗಿದೆ ಕೆಲ ಮುಖಂಡರಲ್ಲಿ ವೈಯಕ್ತಿಕ ಭಿನ್ನಾಬಿಪ್ರಾಯ ಇರುವದು ಸಹಜ ಪಕ್ಷದ ವೇದಿಕೆಯಲ್ಲಿ ಸರಿಪಡಿಸುವದು ನಡೆದಿದೆ ಸಾಮೂಹಿಕ ನಾಯಕತ್ವದಲ್ಲಿ ರಾಜ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಸ ಪಕ್ಷ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇವೆ ಬಿಜೆಪಿ ನೇತೃತ್ವದ ರಾಜ್ಯಸರಕಾರದ ವಿರುದ್ದ ಹಂತ ಹಂತವಾಗಿ ಹೋರಾಟ ಚುರುಕುಗೊಳಿಸವುದಾಗಿ ಸತೀಶ ಜಾರಕಿಹೋಳಿ ತಿಳಿಸಿದರು
ಈಸಂದರ್ಭದಲ್ಲಿ ಶಾಸಕ ಡಿಎಸ್ ಹುಲಗೇರಿಮಾಜಿ ಶಾಸಕ ಅಪ್ಪಾಜಿ ನಾಡಗೌಡರ, , ಬ್ಲಾಕ್ ಕಾಂಗ್ರೆಸ್ಸ ಅಧ್ಯಕ್ಷ ಭೂಪನಗೌಡ ಕರಡಕಲ್ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಸನಗೌಡ ಕಂಬಳಿ ಅಮರಗುಂಡಪ್ಪ ಮೇಟಿ ಎಸ್ ಆರ್ ರಸೂಲ್ ಸಂಗಣ್ಣ ಹೊಸೂರ ಗುಂಡಪ್ಪ ನಾಯಕ ಬಸನಗೌಡ ವಾಹಿದ ಖಾದ್ರಿ ಸೇರಿದಂತೆಇದ್ದರು.