ಮಸ್ಕಿ: ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಸಮಯ 11 ಗಂಟೆ 14 ನಿಮಿಷಗಳಾದ್ರು ಕಛೇರಿಗೆ ಆಗಮಿಸಿದ ಅಧಿಕಾರಿ ವೃಂದ. ದಿನ ನಿತ್ಯವೂ ಅಧಿಕಾರಿಗಳನ್ನು ಹುಡುಕಿಕೊಂಡು ಬಂದ್ರು ಕಛೇರಿಯಲ್ಲಿ ಸಿಗದ ಅಧಿಕಾರಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಅದ ಸಾರ್ವಜನಿಕರ ಆಕ್ರೋಶದ ವಿಡಿಯೋ.
ಒಂದು ದಿನವೆಂದರೆ ಇರಲಿ ಬಿಡಿ ಏನೋ ವೈಯಕ್ತಿಕ ಕೆಲಸ ಕಾರ್ಯಗಳು ಇರಬಹುದು ಎಂದು ನಾವೂ ಸುಮ್ಮನಾಗಬಹುದು. ಈ ವಿಚಾರವಾಗಿ ತಾಲೂಕಾ ಪಂಚಾಯತಿಯ ಎಡಿ ಯಾದಂತಹ ಶಿವಾನಂದ ರೆಡ್ದಿ ರವರನ್ನು ಕೇಳಿದರೆ ಎಲ್ಲಾ ಅಧಿಕಾರಿ ವರ್ಗದವರೂ ವಿಸಿಟಿಂಗ್ ಗೆ ಹೋಗಿದ್ದಾರೆ ಎಂದು ಹೇಳುವರು. ಈ ಮಾತಿನ ಅರ್ಥ ಗ್ರಾಮ ಪಂಚಾಯತಿಯಲ್ಲಿ ಸಿಬ್ಬಂದಿಯ ಗೈರಾಜರಿನ ಹಿಂದೆ ತಾಲೂಕ ಪಂಚಾಯಿತಿ ಅಧಿಕಾರಿಗಳ ಕುಮ್ಮಕ್ಕು ಇದೇ ಎನ್ನುವುದು ಅನುಮಾನ ಮೂಡಿಸಿದೆ. ದಿನ ನಿತ್ಯವೂ ಕಛೇರಿಗೆ ಅಲೆಯುವುದರಿಂದ ನಮ್ಮ ಸಮಯ, ಆ ದಿನದ ಕೆಲಸ ಕಾರ್ಯಗಳು ವ್ಯರ್ಥ ಮಾಡಿರುವ ಅದೆಷ್ಟೋ ದಿನಗಳಿವೆ ಆ ದಿನಗಳ ಸಂಬಳವೇನಾದರು ನೀಡುವರೇ ...? ಸರಕಾರಿ ಕೆಲಸವನ್ನು ಬೇಕಾ ಬಿಟ್ಟಿ ಮಾಡುತ್ತಿರುವ ಹಾಲಾಪೂರ ಗ್ರಾಮ ಪಂಚಾಯಿತಿಯ ಅಭಿವೃಧ್ದಿ ಅಧಿಕಾರಿ, ಕಾರ್ಯದರ್ಶಿ,ಗಣಕಯಂತ್ರ ಆಪರೇಟರ್, ಬಿಲ್ ಕಲೆಕ್ಟರ್ ಸೇರಿದಂತೆ ಇನ್ನಿತರೇ ಸಿಬ್ಬಂದಿಗಳ ವಿರುದ್ಧ ಸಂಭಂದಪಟ್ಟ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಇವರು ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ದಿನ ನಿತ್ಯವೂ ಕಛೇರಿಗೆ ಬಂದು ಹೋಗುವುದರಿಂದ ನಮಗೆ ನೀವೇನಾದರೂ ಆರ್ಥಿಕವಾಗಿ ಸಹಾಯ ಮಾಡುವಿರೇ.? ಗ್ರಾಮ ಪಂಚಾಯಿತಿಯಲ್ಲಿ ಒಬ್ಬ ಜವಾನ ನನ್ನು ಬಿಟ್ಟರೇ ಮತ್ಯಾರು ಕಾರ್ಯಾಲಯದಲ್ಲಿಯೇ ಇರುವುದಿಲ್ಲ ಎಂದು ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಡುವ ಸುಭಾಷ್ ಹಿರೇ ಕಡಬೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಮೊ:8197164470