ವಸತಿ ನಿಲಯದ ಹೊರಗುತ್ತಿಗೆ ಕಾರ್ಮಿಕರಿಗೆ 9 ತಿಂಗಳಿನ ವೇತನ ನೀಡಲು ಒತ್ತಾಯ

Udayavani News
0
ಲಿಂಗಸೂಗೂರ: ಏ 18, ಪಟ್ಟಣದ ಸಮಾಜ ಕಲ್ಯಾಣ ಕಾರ್ಯಾಲಯ ಮುಂದೆ ವೇತನಕ್ಕಾಗಿ ಪ್ರತಿಭಟನೆ ಮಾಡಿದ ಘಟನೆ ನಡೆಯಿತು.

ನಂತರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು  ರಾಜೇಂದ್ರ ಇವರಿಗೆ ಮನವಿ ಸಲ್ಲಿಸಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬರುವ ವಸತಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಸುಮಾರು 9 ತಿಂಗಳಿಂದ ವೇತನ ನೀಡಿರುವುದಿಲ್ಲ ನಮ್ಮ ಕುಟು0ಬ ನಿರ್ವಹಣೆ ಮತ್ತು ನಮ್ಮ ಉಪಜೀವನ ತೀರಾ ಕಷ್ಟಕರವಾಗಿರುತ್ತದೆ. 6 ದಿನಗಳೋಳಗಾಗಿ ನಮಗೆ ವೇತನವನ್ನು ನೀಡಬೇಕು, ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದರು, ಒಂದು ವೇಳೆ ನಮ್ಮ ವೇತನ ನೀಡುವ ವಿಚಾರದಲ್ಲಿ ನಿರ್ಲಕ್ಷ ವಹಿಸಿದರೆ  ನಾವುಗಳು ಎಲ್ಲಾ ಹಾಸ್ಟೆಲ್ ಹೊರಗಿತ್ತಿಗೆ ಕಾರ್ಮಿಕರು ಇಲಾಖೆಯ ಮುಂದುಗಡೆ ಅನಿರ್ದಿಷ್ಟವದಿಯ ಸತ್ಯಗ್ರಹ ಹಮ್ಮಿಕೊಳ್ಳಲಾಗುತ್ತದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕ ಅಧ್ಯಕ್ಷ ದೇವೇಂದ್ರಪ್ಪ ಪಂಜಲರ್, ಚಿನ್ನಪ್ಪ, ಹನುಮರೆಡ್ಡಿ, ಗೌರಮ್ಮ, ರೇಣುಕಮ್ಮ, ಬಸಮ್ಮ, ಕಮಲಬಾಯಿ,  ಶಿವಮ್ಮ, ಇನ್ನಿತರರು ಇದ್ದರು.

ವರದಿ : ಗೌತಮ ಚವ್ಹಾಣ ಲಿಂಗಸ್ಗೂರ

Post a Comment

0Comments

Post a Comment (0)