ಆಡಳಿತ ನೇಡಿಸಿದ ಪಕ್ಷದ ವಕ್ತಾರ ರೀತಿಯಲ್ಲಿ ಷಡಕ್ಷರಿ ಹೇಳಿಕೆ :: ರಾಜ್ಯ ಮಟ್ಟದ ಎಲ್ಲ ಪತ್ರಿಕೆಗಳಲ್ಲೂ ಪ್ರಕಟ ಚುನಾವಣೆ ಆಯೋಗ ಮೌನ..!?

ಕರ್ನಾಟಕ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅನ್ವಯ ವಾಗದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ ) ದ ರಾಜ್ಯಾಧ್ಯಕ್ಷರಾದ ಷಡಕ್ಷರಿ.....?! ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಮೌನಕ್ಕೆ ಶರಣು ಕಾರಣ ಮಾತ್ರಾ ನಿಗೂಢ....!!!!*

ನೀತಿ ಸಂಹಿತೆ ಅಂತ್ಯದ ನಂತರ ಡಿಎ ಹೆಚ್ಚಳ

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಸಿ.ಎಸ್.ಷಡಾಕ್ಷರಿ

ಶಿವಮೊಗ್ಗ : ಚುನಾವಣಾ ನೀತಿ ಸಂಹಿತೆ ಅಂತ್ಯಗೊಂಡ ಬಳಿಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಡಿಎ ಹೆಚ್ಚಳವಾಗಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ ಎಂದು ರಾಜ್ಯ ಮಟ್ಟದ ಪತ್ರಕೆಗಳಲ್ಲಿ ಪ್ರಕಟವಾಗಿವೆ

ರಾಜ್ಯದಲ್ಲಿ ಪ್ರಸ್ತುತ ನೀತಿ ಸಂಹಿತೆ ಜಾರಿಯಲ್ಲಿದೆ. ಇದು ಅಂತ್ಯಗೊಂಡ ಬಳಿಕ ಕೇಂದ್ರ ಸರ್ಕಾರದ ಮಾದರಿ ಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಂಜೂರಾತಿ ಆದೇಶ ಹೊರಬೀಳ ಲಿದೆ. ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಈ ಕುರಿತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದಿದ್ದಾರೆ ಎಂದು ಚುನಾವಣೆ ಆಯೋಗದ ಹೆಸರು ಕೂಡ ಬಳಸಿಕೊಂಡಿದ್ದಾರೆ.

  ಸಾಮಾಜಿಕ ಜಾಲತಾಣಗಳಲ್ಲಿ ಕೇಳಗಿನ ಲೇಖನ ರೀತಿಯಲ್ಲಿ  ಬರೆದು ಜನರು ಹಾಕುತ್ತಿದ್ದಾರೆ.
ಡಬಲ್ ಇಂಜಿನ್ ಘನತೆವೆತ್ತ ಕೇಂದ್ರ & ರಾಜ್ಯ ಸರ್ಕಾರದ ಮಹಿಮೆ ... ನಾ ಕಾವೂoಗಾ - ನಾ ಖಾನೇಕೂ ಧೂoಗಾ, ಅಚ್ಛೇದಿನ್.... ಜೈ ಮೋದಿ ಜೈ ಬಿಜೆಪಿ 😄


ಮೇ 13ರ ಬಳಿಕೆ ಚುನಾವಣಾ

ನೀತಿ ಸಂಹಿತೆ ಅಂತ್ಯಗೊಳ್ಳಲಿದೆ. ಇದಾದ ಬಳಿಕ ತುಟ್ಟಿಭತ್ಯೆ ಮಂಜೂರು ಆದೇಶ ಹೊರಬೀಳಲಿದೆ. ಶೇಕಡ 4 ಬಾಕಿ ತುಟ್ಟಿಭತ್ಯೆ ಆದೇಶವನ್ನು ಜನವರಿ 1 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ  ತರಲು ಆದೇಶ ಹೊರಡಿಸುವುದಾಗಿ ಹಣಕಾಸು ಇಲಾಖೆ ಭರವಸೆ ನೀಡಿದೆ. ಏಳನೇ ವೇತನ ಆಯೋಗದ ಶೇಕಡ 17 ರಷ್ಟು ಮಧ್ಯಂತರ ಪರಿಹಾರ ಮೊತ್ತವನ್ನು ಏಪ್ರಿಲ್ ವೇತನದಲ್ಲೇ ಪಡೆಯಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದು ಈ ತಿಂಗಳ ವೇತನದಲ್ಲೇ ಸಿಗಲಿದೆ ಏಪ್ರಿಲ್ 1 ರಿಂದ ಶೇ.17 ರಷ್ಟು ಮಧ್ಯಂತರ ಪರಿಹಾರ ಮೊತ್ತವನ್ನು ಏಪ್ರಿಲ್ 2023ರ ವೇತನದಲ್ಲಿ ಸೆಳೆಯಲು ಹೆಚ್‌ಆರ್‌ಎಂಎಸ್ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ನೌಕರರು ಏಪ್ರಿಲ್ 2023ರ ವೇತನದಲ್ಲಿ ಮಧ್ಯಂತರ ಪರಿಹಾರ ಪಡೆಯಲಿದ್ದಾರೆ ಎಂದಿದ್ದಾರೆ ಎಂದು ಚುನಾವಣೆಯ ಸಂದರ್ಭದಲ್ಲಿ ಆಡಳಿತ ನೇಡಿಸಿದ ಪಕ್ಷದ ಪರವಾಗಿ ಇರುವಂತ ಹೇಳಿಕೆ ನೀಡಿದ್ದಾರೆ

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿ ಈ ರೀತಿಯಲ್ಲಿ ಪತ್ರಿಕಾ ಹೇಳಿಕೆಯನ್ನೂ ಶಿವಮೊಗ್ಗದಲ್ಲಿ ನೀಡಿದರೂ ಕಣ್ಮುಚ್ಚಿ ಕುಳಿತ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನಿರ್ಲಕ್ಷತವನ್ನು ತೀವ್ರವಾಗಿ ಖಂಡನೆಗೆ ಹೋಳಗಾಗುತ್ತಿದೆ.ಸರ್ಕಾರಿ ನೌಕರ ಮೇಲೆ ಪ್ರಭಾವ ಬೀರುವಂತ  ಹೇಳಿಕೆ ನೀಡಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರು ಷಡಕ್ಷರಿರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಕಲಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಹಾಗೂ ಸಂಘ ಸಂಸ್ಥೆಗಳು ಆಗ್ರಹಿಸುತ್ತಿದ್ದಾರೆ.

✒️ಓಂಕಾರ ಎಸ್. ವಿ. ತಾಳಗುಪ್ಪ

Post a Comment

Previous Post Next Post