ನೂತನ ಬ್ರಾಂಡ್ ರೆವಿಯಾ ಜೊತೆಗೆ ಲೂಬ್ರಿಕೆಂಟ್ ಕ್ಷೇತ್ರಕ್ಕೆ ಪ್ರವೇಶಿಸಿದ ಬ್ರೇಕ್ಸ್ ಇಂಡಿಯಾ


ಏಪ್ರಿಲ್   2023 :- ಸುರಕ್ಷತೆ ಮತ್ತು ಗುಣಮಟ್ಟಕ್ಕಾಗಿ ವಾಹನ ಕ್ಷೇತ್ರದಲ್ಲಿ ಅತ್ಯಂತ ನಂಬಿಕಾರ್ಹ ಹೆಸರುಗಳಲ್ಲಿ ಒಂದಾಗಿರುವ ಬ್ರೇಕ್ಸ್ ಇಂಡಿಯಾ ಈಗ ಸಂಪೂರ್ಣ ನೂತನ ರೆವಿಯಾ ಬ್ರಾಂಡ್ ಜೊತೆಗೆ ಲೂಬ್ರಿಕೆಂಟ್(ಘರ್ಷಣೆ ನಿವಾರಕಗಳು)ಗಳ ಕ್ಷೇತ್ರವನ್ನು ಪ್ರವೇಶಿಸುತ್ತಿದೆ. ಬ್ರೇಕ್ಸ್ ಇಂಡಿಯಾದ ದೃಢವಾದ ವಿತರಣಾ ಜಾಲ ಮತ್ತು 60 ವರ್ಷಗಳ ಸಮೃದ್ಧ ಪರಂಪರೆಯನ್ನು ಬಳಸಿಕೊಂಡು ಕಂಪನಿಯು ಇಂಜಿನ್ ಆಯಿಲ್ ಕ್ಷೇತ್ರಕ್ಕೆ ವಿಸ್ತರಿಸುತ್ತಿದ್ದು, ತನ್ನ ನೂತನ ಬ್ರಾಂಡ್ ಜೊತೆಗೆ ವಾಣಿಜ್ಯ ವಾಹನಗಳು ಮತ್ತು ಪ್ರಯಾಣಿಕರ ಕಾರುಗಳ ಕ್ಷೇತ್ರಗಳಿಗೆ ಸೇವೆ ಸಲ್ಲಿಸಲು ಮುಂದಾಗಿದೆ.
ಬ್ರೇಕ್ಸ್ ಇಂಡಿಯಾದ ಮಾರುಕಟ್ಟೆ ನಂತರದ ವ್ಯವಹಾರ ವಿಭಾಗದ ಮುಖ್ಯಸ್ಥರು ಮತ್ತು ಉಪಾಧ್ಯಕ್ಷರಾದ ಎಸ್. ಸುಜಿತ್ ನಾಯಕ್ ಅವರು ಮಾತನಾಡಿ, ``ಆರು ದಶಕಗಳಿಗೂ ಹೆಚ್ಚಿನ ಸಮಯದಿಂದ ಸ್ಥಾಪಿತವಾಗಿರುವ ಬ್ರೇಕ್ಸ್ ಇಂಡಿಯಾ, ವಾಹನ ಉದ್ಯಮದಲ್ಲಿ ಟಿವಿಎಸ್ ಗರ್ಲಿಂಗ್, ಟಿವಿಎಸ್ ಅಪಾಚೆ ಮತ್ತು ಟಿವಿಎಸ್ ಸ್ಪ್ರಿಂಟರ್‍ಗಳಿಂದ ಸುರಕ್ಷತಾ ಬಿಡಿಭಾಗಗಳಿಗೆ ಹೆಸರಾಗಿದೆ. ನಮ್ಮ ನೂತನ ಬ್ರಾಂಡ್ ರೆವಿಯಾ ಜೊತೆಗೆ ಇಂಜಿನ್ ಆಯಿಲ್ ಬಿಡುಗಡೆ ಮಾಡಲು ನಾವು ಬಹಳ ಉತ್ಸಾಹಿತರಾಗಿದ್ದೇವೆ’’ ಎಂದರು.
ರೆವಿಯಾ ಇಂಜಿನ್ ಆಯಿಲ್ ವಿಸ್ತಾರವಾದ ಉತ್ಪನ್ನಗಳ ಶ್ರೇಣಿ ಹೊಂದಿದ್ದು, 9 ಗ್ರೇಡ್‍ಗಳ ಇಂಜಿನ್ ಆಯಿಲ್ ಹೊಂದಿದೆ. ಪ್ರಯಾಣಿಕರ ಕಾರುಗಳಿಗಾಗಿ 5 ಮತ್ತು ವಾಣಿಜ್ಯ ವಾಹನಗಳಿಗಾಗಿ 4 ಗ್ರೇಡ್‍ಗಳ ಇಂಜಿನ್ ವಾಹನಗಳನ್ನು ಸಾದರಪಡಿಸಲಾಗುತ್ತಿದೆ. ಕಂಪನಿ ಎಸ್‍ಯುವಿ ಮತ್ತು ಎಂಯುವಿಗಳಿಗಾಗಿ ಪ್ರೀಮಿಯಮ್ ಫುಲ್ಲಿ ಸಿಂಥೆಟಿಕ್ ಶ್ರೇಣಿಯನ್ನು ಕೂಡ ಸಾದರಪಡಿಸುತ್ತಿದೆ. ರೆವಿಯಾ15ಡಬ್ಲ್ಯು40 ಸಿಕೆ4 ಇಂಜಿನ್ ಆಯಿಲ್ ಇತ್ತೀಚಿನ ಬಿಎಸ್6 ನಿಯಮಗಳಿಗೆ ತಕ್ಕಂತೆ ಇದ್ದು, ಎಲ್ಲಾ ನೂತನ ಪೀಳಿಗೆಯ ಇಂಜಿನ್‍ಗಳಿಗೆ ಸೂಕ್ತವಾಗಿದೆ.
ಉತ್ಪನ್ನಗಳ ಶ್ರೇಣಿ ಕುರಿತು ವಿವರಿಸಿದ ಸುಜಿತ್ ಅವರು ಮಾತನಾಡಿ, ``ತೀರ ಕಠಿಣವಾದ ವಾಹನ ಚಾಲನೆ ಸ್ಥಿತಿಗಳ ಅಡಿಯಲ್ಲಿ ಗರಿಷ್ಟ ಇಂಜಿನ್ ಸಂರಕ್ಷಣೆ ಮತ್ತು ಕಾರ್ಯಕ್ಷಮತೆಯನ್ನು ಪೂರೈಸುವಂತೆ ರೆವಿಯಾ ಇಂಜಿನ್ ಆಯಿಲ್ ರೂಪಿಸಲಾಗಿದೆ. ಉನ್ನತೀಕರಿಸಲಾದ ವಸ್ತುಗಳನ್ನು ರೆವಿಯಾ ಇಂಜಿನ್ ಆಯಿಲ್‍ಗೆ ಸೇರಿಸಲಾಗಿದೆ. ಪ್ರಯಾಣಿಕರ ಕಾರುಗಳಿಗಾಗಿ ಹೈಪರ್ ಝೆಡ್‍ಡಿಪಿ ತಂತ್ರಜ್ಞಾನ ಮತ್ತು ವಾಣಿಜ್ಯ ವಾಹನಗಳಿಗಾಗಿ ಟರ್ಬೋ ಬೂಸ್ಟರ್‍ಗಳನ್ನು ಇದರಲ್ಲಿ ಸೇರಿಸಲಾಗಿದ್ದು, ಇಂಜಿನ್‍ನ ದೀರ್ಘ ಬಾಳಿಕೆ ಮತ್ತು ಪ್ರದರ್ಶನವನ್ನು ಇದು ಹೆಚ್ಚಿಸುತ್ತದೆ’’ ಎಂದರು.
ಈ ಮಾರುಕಟ್ಟೆಯಲ್ಲಿ ಬೆಳವಣಿಗೆಗೆ ಇರುವ ಅವಕಾಶ ಕುರಿತು ವಿವರಿಸಿದ ಸುಜಿತ್ ಅವರು ಮಾತನಾಡಿ, `` ಉತ್ತಮ ಕಾರ್ಯಕ್ಷಮತೆಯ ಲೂಬ್ರಿಕೆಂಟ್‍ಗಳಿಗೆ ಹೆಚ್ಚುತ್ತಿರುವ ಬೇಡಿಕೆ, ವಿಕಾಸಗೊಳ್ಳುತ್ತಿರುವ ಬಿಎಸ್ ಮಾನದಂಡಗಳು ಮತ್ತು ಬೆಳೆಯುತ್ತಿರುವ ವಾಹನ ಸಂಖ್ಯೆಗಳ ಜೊತೆಗೆ ಇಂಜಿನ್ ಆಯಿಲ್ ಕ್ಷೇತ್ರ ಬೆಳವಣಿಗೆಗೆ ಸಜ್ಜಾಗಿದೆ’’ ಎಂದರು.

Post a Comment

Previous Post Next Post