ಮತದಾನದ ಮಹತ್ವ ತಿಳಿಸಿದ ಡಾ ಬಿ.ಆರ್ ಅಂಬೇಡ್ಕರ್




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
ವಿಶೇಷ ಲೇಖನ : ಜ್ಯೋತಿ ಜಿ, ಮೈಸೂರು.
ಮೈಸೂರು, ಏಪ್ರಿಲ್ 13 : ಇಂದೆಲ್ಲಾ ರಾಜ್ಯಾದ್ಯಂತ ವಿಧಾನಸಭೆ ಚುನಾವಣೆ ಕಾವು ಏರುತ್ತಲೇ ಇದೆ. ಒಂದು ಕಡೆ ಬಿಸಿಲಿನ ತಾಪ, ಮತ್ತೊಂದಡೆ ಜನರನ್ನು ಆಕರ್ಷಿಸಲು ಹಣ, ಸೀರೆ, ಮದ್ಯ ಆಮಿಷಗಳು ಜೋರಾಗುತ್ತಿದೆ ಎನ್ನಲಾಗುತ್ತಿದೆ. ಈ ನಡುವೆ ೫ ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ರಾಜಕಾರಣಿಗಳಿಗೆ ಜನರ ನೋವಿಗೆ ಸ್ಪಂದಿಸುವುದೇ ಕಡಿಮೆ ಎಂದು ಹಿಡಿ ಶಾಪ ಹಾಕುವ ಜನರ ಅಭಿಮತ. ಇದರ ಮಧ್ಯೆ ಮಾಧ್ಯಮದ ಅಣುಕುಗಳು ಚುನಾವಣೆಯ ಅಖಾಡಕ್ಕೆ ಇಳಿಯಲು ಹೊರಟಿರುವ ರಾಜಕಾರಣಿಗಳು ಯಾವುದೇ ಅಪಮಾನಕ್ಕೆ ಬಗ್ಗದೆ, ಜಗ್ಗದೆ ಜನರ ನಡುವೆ ಬಂದು ಓಟು ಕೇಳಲು ಬರುವ ನೀವೇ ನಿಜವಾದ ದೇವ್ರ ಎಂದು ಹೇಳುವ ಪರಿಪರಿ ಮನವಿಗಳ ಮಹಾಪೂರ. ಮತ್ತೊಮ್ಮೆ ಗೆದ್ದು ಮತ್ತದೇ ೫ ವರ್ಷಗಳಿಗೊಮ್ಮೆ ಬರುವ ಇಂತಹ ಕೆಲವು ನಾಲಾಯಕ್‌ ರಾಜಕಾರಣಿಗಳಿಗೆ ಯಾವಾಗ ಜನರು ಬುದ್ಧಿ ಕಲಿಸುತ್ತಾರೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ..? ಈಗ ಕರ್ನಾಟಕದಲ್ಲಿ ಚುನಾವಣೆಗೆ ಇನ್ನೇನು ಮತವನ್ನು ಹಾಕುವ ಸಮಯ ಸಮೀಪಿಸುತ್ತಿದೆ. ಈ ಹೊತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಮತ್ತು ಪ್ರಭುತ್ವ ಪಡೆಯುವ ಆಕಾಂಕ್ಷಿಗಳಲ್ಲಿ ಹೊಸ ಹುರುಪು ಗರಿಗೆದರಿದೆಂತಾಗಿದೆ. ಉತ್ತಮ ಸಮಾಜಕ್ಕಾಗಿ ಮತ ಚಲಾಯಿಸುವ ನಾವು, ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ನಮ್ಮ ಹಿಂದಿನ ತಲೆಮಾರುಗಳ ಹೋರಾಟವನ್ನು ಗೌರವಿಸಬೇಕು. ಅಲ್ಲದೆ ಮತದಾನ ಮಾಡುವುದು ನಮ್ಮ ನಾಗರಿಕರ ಜವಾಬ್ದಾರಿ."ಮತದಾನ" ರಾಷ್ಟ್ರದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಾಮಾಜಿಕ ಕಳಕಳಿಯ ಜನಹಿತ ಸರ್ಕಾರ ರಚನೆಯಾಗಬೇಕು ಎಂಬ ಮೂಲ ಆಶಯ ಬಹುತೇಕ ಪ್ರಜಾಪ್ರಭುತ್ವದ ಪಾರದರ್ಶಕ ಆಡಳಿತಕ್ಕೆ ಅನುಕೂಲ ಮಾಡಿದರು. ನಮ್ಮ ಮತದಾನದ ಹಕ್ಕನ್ನು ಚಲಾಯಿಸುವುದು ನಮ್ಮ ಸ್ವಾತಂತ್ರ ಹೋರಾಟಗಾರರು ಭಾರತಕ್ಕಾಗಿ ಏನನ್ನು ರೂಪಿಸಿದ್ದರೋ ಅದನ್ನು ಮತದಾನ ಎತ್ತಿಹಿಡಿಯುತ್ತದೆ.ಉತ್ತಮ ಮತ ಚಲಾಯಿಸುವ ಮೂಲಕ ನಾವು ನಮ್ಮ ಸ್ವಾತಂತ್ರ ಹೋರಾಟಗಾರರನ್ನು ಮತ್ತು ನಮ್ಮ ಹಿಂದಿನ ತಲೆಮಾರುಗಳ ಹೋರಾಟವನ್ನು ಗೌರವಿಸಬೇಕು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಯ ಸಹಭಾಗಿತ್ವದ ಅಂಗವಾಗಿ ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಅಮೂಲ್ಯ ಕೊಡುಗೆಯನ್ನು ಕೊಡ ಮಾಡಿದೆ. ಮತದಾನ ಎಂಬುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಪ್ರಜೆಗಳು ತಮಗಾಗಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿ, ತಮ್ಮದೆ ಆದ ಸರ್ಕಾರವನ್ನು ರಚಿಸಿಕೊಳ್ಳಲು ಇರುವ ಒಂದು ಪ್ರಾತಿನಿಧಿಕ ವ್ಯವಸ್ಥೆಯಾಗಿದ್ದು, ಅದನ್ನು ಪ್ರತಿಯೊಬ್ಬ ಪ್ರಜೆಯು ಸೂಕ್ತ ರೀತಿಯಲ್ಲಿ ಚಲಾಯಿಸಿದಾಗ ದೇಶ ಮತ್ತು ಜನರ ಕಲ್ಯಾಣಕ್ಕೆ ಹಾಗೂ ಮತದ ಮೌಲ್ಯ ಹೆಚ್ಚಾಗುತ್ತದೆ. ನಮ್ಮ ಒಂದು ಮತ ಎಷ್ಟು ಅಮೂಲ್ಯವಾಗಿರುತ್ತದೆ ಮತ್ತು ಮತದಾನದ ಅವಕಾಶ ನಮಗೆ ಹೇಗೆ ಬಂತು ಎಂದು ಅರಿವಾದಾಗ ಮತದಾನ ಎಂಬುದು ಎಷ್ಟು ಪವಿತ್ರ ಎಂದು ತಿಳಿಯುತ್ತದೆ. ಅಲ್ಲದೆ ಇಂದಿನ ಯುವ ಪೀಳೀಗೆಗೆ ಹೆಚ್ಚಿನ ಅರಿವಾಗಬೇಕಾಗಿದೆ. ಇಂದು ೧೩೨ನೇ ಜನ್ಮ ದಿನಚಾರಣೆಯ ಪ್ರಯುಕ್ತ ಡಾ ಬಿ.ಆರ್ ಅಂಬೇಡ್ಕರ್ ರವರು ೧೪ನೇ ಏಪ್ರಿಲ್, ೧೮೯೧ ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರ‍ ಜಾತಿಯಲ್ಲಿ ಹುಟ್ಟಿದರು ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಸ್ವಾತಂತ್ರ ಪೂರ್ವ ಭಾರತದಲ್ಲಿ ಬಹುಜನರು  ಸಾವಿರಾರು ವರ್ಷಗಳು ತಮ್ಮವರಿಂದಲೇ ಕನಿಷ್ಠ ಹಕ್ಕುಗಳಿಲ್ಲದೆ ಮೂಕಪ್ರಾಣಿಗಳಂತೆ ಬದುಕಿದ ಜನರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದು ಮಾತ್ರ ಇತಿಹಾಸ.ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ನಡುವೆ ನಡೆದ ಚರ್ಚೆಗಳನ್ನು ಸುದೀರ್ಘವಾಗಿ ಮತ್ತು ಸಂಯಮದಿಂದ ವಿವೇಚನೆಯಿಂದ ನೋಡಿದಾಗ  ಅಂದು ಅಂಬೇಡ್ಕರ್ ಭಾರತದಲ್ಲಿರುವ ೧೮ ವರ್ಷ ಮೇಲ್ಪಟ್ಟ ಎಲ್ಲಾ ಗಂಡು ಹೆಣ್ಣಿಗೆ ಪ್ರತಿಯೊಬ್ಬರಿಗೂ ಮತ ಹಾಕುವ ಅವಕಾಶದ ಹಕ್ಕು ಕಲ್ಪಿಸಿದ್ದಾರೆ. ಇಂತಹ ಸಮಾನತೆ ಇರಲಿ ಎಂದು ಹೇಳಿದಾಗ ಗಾಂಧೀಜಿ ವಿರೋಧಿಸುತ್ತಾರೆ, ಸಾವಿರಾರು ವರ್ಷಗಳಿಂದ ವಿದ್ಯೆ, ಆಸ್ತಿ, ಅಧಿಕಾರದಿಂದ ವಂಚಿತರಾಗಿ ಪ್ರಾಣಿ  ಪಶುಗಳಿಗಿಂತ ಕಡೆಯದಾಗಿ ಬದುಕುತ್ತಿರುವ ನನ್ನ ದೇಶದ ಮೂಲ ನಿವಾಸಿ ಬಹುಸಂಖ್ಯಾತರ ಬದುಕು ಹಸನಾಗುವುದು ಪ್ರಾಯಶಃ ಗಾಂಧೀಜಿಯವರಿಗೆ ಬೇಡವಾಗಿತ್ತೋ ಏನೋ..? ಇದನ್ನು ತಿರಸ್ಕರಿಸಿದಾಗ  ಇಂಗ್ಲೆಂಡಿನ ಪ್ರಧಾನ ಮಂತ್ರಿ ರಾಮ್ಸೇ ಮ್ಯಾಕ್ ಡೊನಾಲ್ಡ್ ನ್ಯಾಯ ಸಮ್ಮತವಾಗಿ ೧೮ ವರ್ಷ ತುಂಬಿದ ಭಾರತದ ಎಲ್ಲಾ ಜನರಿಗೆ ಮತದಾನದ ಹಕ್ಕನ್ನು ನೀಡುತ್ತೇವೆಂದು ಘೋಷಿಸಿ ಅಸ್ಪೃಶ್ಯರಿಗೆ ಮತ ಚಲಾಯಿಸುವ ಹಕ್ಕು ನೀಡಿದರು. ಆ ನಂತರ ಸಭೆ ಮುಗಿಸಿ ಹೊರಬಂದ ಅಂಬೇಡ್ಕರರಿಗೆ ಪತ್ರಕರ್ತರು ನೀವು ಭಾರತೀಯರೆಲ್ಲರಿಗೂ ಮತದಾನದ ಹಕ್ಕನ್ನು ಕೊಡಿಸಿದಿರಂತೆ ಎಂದು ಪ್ರಶ್ನಿಸಿದರು..? ಅದಕ್ಕೆ ಅಂಬೇಡ್ಕರ್ ತಮಗೆ ಬೇಕಾದ ರಾಜನನ್ನು ಆಯ್ಕೆ ಮಾಡಿಕೊಳ್ಳುವ ಈ ದಿನ ನನಗೆ ತುಂಬಾ ಸಂತೋಷವಾಗಿದೆ. ೨೫೦೦ವರ್ಷಗಳ ಹಳೆಯ ಕಾಲದ ಮನುಸ್ಮೃತಿ ಆಧಾರಿತ ಮನುವ್ಯವಸ್ಥೆಯನ್ನು ನುಚ್ಚು ನೂರು ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.   ಅಂದು ಅವರು ಎಲ್ಲರ ಕಣ್ಣಿಗೆ ನಿಷ್ಠುರವ ವ್ಯಕ್ತಿಯಾಗಿ ಸಂವಿಧಾನದ ಪ್ರತಿಯೊಂದು ಮೂಲಭೂತ ಸೌಕರ್ಯಗಳನ್ನು ಜನರಿಗೆ ತಲುಪಿಸಿ ಆಧುನಿಕ ಸಂವಿಧಾನದ ಶಿಲ್ಪಿ ಎನಿಸಿದರು. ಆದರೆ ಇಂದು ಆ ಮಹಾನ್ ವ್ಯಕ್ತಿ ಕೊಡಿಸಿದ ಮತವನ್ನು ಹೆಂಡ, ಹಣಕ್ಕಾಗಿ ಮಾರಿಕೊಳ್ಳುವ ಬಹುಸಂಖ್ಯಾತರು ಗಾಂಧೀಜಿಯವರು ಬಹುಜನರಿಗೆ ಶಿಕ್ಷಣವಿಲ್ಲ ಮತ್ತು  ಮತದಾನದ ಅರಿವಿಲ್ಲ ಅದರಿಂದ ಅವರಿಗೆ ಮತದಾನದ ಹಕ್ಕು ನೀಡಬಾರದೆಂಬ ವಾದಕ್ಕೆ ಪುಷ್ಟಿ ನೀಡುವಂತೆ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ. ಅದರಲ್ಲೂ ವಿದ್ಯಾವಂತರೆನಿಸಿಕೊಂಡ ನಮ್ಮಂತಹವರ ಅಸಡ್ಡೆ ಮನೋಭಾವ ಎದ್ದು ಕಾಣುತ್ತಿದೆ. ಇದಕ್ಕಾಗಿ ಚುನಾವಣಾ ಆಯೋಗವು ಮತದಾನವನ್ನು ಹೆಚ್ಚಿಸಲು ಹಾಗೂ ಜಾಗೃತಿಗೊಳಿಸಿ ಮತದಾರರ ನೋಂದಣಿ ಮತ್ತು ಮತದಾನಕ್ಕೆ ಪ್ರೇರಣೆ ನೀಡುವಂತಹ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅದರಿಂದ ನಾವು ನೀಡುವ ಒಂದು ಮತವು ದೇಶಕ್ಕೆ ಹಿತ, ಎನ್ನುತ್ತಾ ಮತವನ್ನು ಚಲಾಯಿಸುವಾಗ ಯೋಗ್ಯ ವ್ಯಕ್ತಿಯನ್ನಷ್ಟೆ ಆರಿಸಿ ನಿಮ್ಮ ಪ್ರತಿನಿಧಿಯನ್ನಾಗಿಸಿಕೊಳ್ಳಬೇಕು. ಕಳಕಳಿ ಓದುಗ ಬಂಧುಗಳೇ ಯಾರೇ ಬಂದರು ನೀವು ದುಡಿಯಲೇಬೇಕು. ಆದರೆ ನಾವು ದುಡಿದ ಹಣ ಸೂಕ್ತ ಮತ್ತು ನ್ಯಾಯೋಚಿತ ರೀತಿಯಲ್ಲಿ ಬಳಸಿ ಸಮಾಜ ಮತ್ತು ದೇಶವನ್ನು ಅಭಿವೃದ್ದಿ ಮಾಡುವಂತಹ ನೇತಾರರನ್ನು ಆರಿಸುವ ಹೊಣೆಗಾರಿಕೆ ನಮ್ಮದು. ಇಂದು ಸರ್ಕಾರವು ಅಂಬೇಡ್ಕರ್‌ ಜಯಂತಿ ಆಚರಿಸಲು ಯೋಚಿಸುತ್ತಿರುವಾಗ ಎಲ್ಲವೂ ನೀವು ನೀಡುವ ಒಂದು ಮತದ ಮೇಲೆ ದೇಶದ ಮತ್ತು ಮುಂದಿನವರ ಭವಿಷ್ಯ ನಿಂತಿರುವುದು ನಾವು ಹಾಕುವ ಮತದ ಮೇಲೆ ಅವಲಂಭಿಸಿದೆ.ಜೈ ಅಂಬೇಡ್ಕರ್.


ವಿಶೇಷ ಲೇಖನ -ಜ್ಯೋತಿ ಜಿ, ಮೈಸೂರು.

(ಸಾಮಾಜಿಕ ಹೋರಾಟಗಾರ್ತಿ ಹಾಗೂ ಉಪನ್ಯಾಸಕರು.)


Post a Comment

Previous Post Next Post