ಸರ್ಕಾರಿ ಶಾಲೆಗಳ "ಅಸ್ತಿತ್ವ" ಉಳಿಸಬೇಕಿದೆ..!

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ವಿಶೇಷ ಲೇಖನ, ಮಾರ್ಚ್ 26 : ಕನ್ನಡ ಮಾಧ್ಯಮ ಶಾಲೆಗಳನ್ನು ಸರ್ಕಾರ ಮತ್ತು ನಾವೂ ಕೂಡ ಉಳಿಸಬೇಕಾದಂತಹ ಜರೂರು ಅತ್ಯಗತ್ಯವಿದೆ. ನಮ್ಮ ನಾಡು, ನುಡಿಯ ಅಸ್ಮಿತೆಯ ಜೊತೆಗೆ ಕನ್ನಡಿಗರಾದ ನಾವು ಕನ್ನಡದ ಸರ್ಕಾರಿ ಶಾಲೆಗಳನ್ನು ಮುಂದಿನ ಪೀಳಿಗಾಗಿ ಮುಂದುವರಿಸಬೇಕಾಗಿದೆ.

ಈ ನಿಟ್ಟಿನಲ್ಲಿ ನನಗೊಂದು ಹಾಡು ನೆನಪಾಗುತ್ತದೆ..! ಕನ್ನಡವೇ ತಾಯ್ನಿನಾಡು.., ಕನ್ನಡಿಗರೇ ನೀವೆಲ್ಲ ಅಭಿಮಾನ.., ಅಂತಹ ಎಷ್ಟು ಸುಮಧುರ ಹಾಡು ಅಲ್ಲವೇ..? ಓದುಗರೇ ನಮ್ಮ ಭಾಷೆಯೇ ಹಾಗೆ  ಕೇಳಲು, ಓದಲು, ಬರೆಯಲು, ಮಾತನಾಡಲು, ಮನೋಹರ. ಕನ್ನಡ ನಾಡಿನಲ್ಲಿ ಹುಟ್ಟಿದ ಕವಿಗಳು, ರಾಜಕೀಯ ಗಣ್ಯವ್ಯಕ್ತಿಗಳು, ಸಿನಿಮಾ ರಂಗದವರು, ವಿದೇಶದಲ್ಲಿ ನೆಲೆಸಿದವರೂ ಕೂಡ ಅಲ್ಲಿಯೇ ಇದ್ದರು ಸಮೇತ ಕನ್ನಡ ಅಭಿಮಾನ ಬಿಡದೆ ನಡೆಸುವ ಕಾರ್ಯಕ್ರಮಗಳು.

 ಅಷ್ಟೇ ಅಲ್ಲ ಕರ್ನಾಟಕದವರೇ ಆದ ತುಮಕೂರಿನಲ್ಲಿ ಹುಟ್ಟಿ ನಂತರ ವಿದೇಶದಲ್ಲಿ ನೆಲೆಸಿ ವಿಶ್ವದ ಎಲ್ಲರ ಮನಗೆದ್ದ "ಕೆನಡಾ ಸಂಸದ" 'ಚಂದ್ರ ಆರ್ಯ' ಅವರು ಕೆನಡಾ ಸಂಸತ್ತಿನಲ್ಲಿ ಮಾಡಿದ ಕನ್ನಡದ ಭಾಷಣವು ಅಲ್ಲಿರುವ ಎಲ್ಲ ಹೃದಯಗಳನ್ನು ಗೆದ್ದಿದೆ. ತಮ್ಮ ಭಾಷಣವನ್ನು ಸ್ಪಷ್ಟವಾಗಿ ಮಾತಾನಾಡಿ, ಆ ಭಾಷಣದ ತುಣುಕನ್ನು ಹಂಚಿಕೊಂಡು ಕೆಲವರು ರಾಜಕಾರಣಿಯಾಗಿದ್ದಾರೆ. ಇದು ಸುದೀರ್ಘ ಇತಿಹಾಸದಲ್ಲಿಯೇ ಮೊದಲಿಗರು ಎಂಬ ಕೀರ್ತಿ ಅವರಿಗೆ ಸಲ್ಲುತ್ತದೆ. ಕನ್ನಡದ ಹಿರಿಮೆ, ಗೌರವದ ಪ್ರತೀಕವೆಂದರೆ.., ಬಹುತೇಕ ನವೆಂಬರ್ಗ್ರೆ ಮಾತ್ರ ಕರುನಾಡನ್ನು ಕೊಂಡಾಡುವಿಕೆಗೆ ಸೀಮಿತವಾಗುವ ನಾವೆಲ್ಲ ಇಂದು ಪ್ರತಿಯೊಬ್ಬ ಕನ್ನಡಿಗರು ಕನ್ನಡಕ್ಕಾಗಿ, ಕನ್ನಡದ ಉಸಿರಿಗಾಗಿ ಕಂಕಣ ಬದ್ಧರಾಗಬೇಕಾದ ಅನಿವಾರ್ಯತೆ ಈಗ ನಮ್ಮ ಎದುರಿಗೆ ಬಂದು ನಿಂತಿದೆ. ಕನ್ನಡ ಭಾಷೆಯ ಉಳುವಿಗಾಗಿ ಬರೀ ಸರ್ಕಾರವೇ ಈ ಕೆಲಸ ಮಾಡಬೇಕು ಎಂದರೇಗೆ..? ಸರ್ಕಾರ ಮಾಡುವ ಕಾಯಕದ ಜೊತೆಗೆ ನಾವು ಕೂಡ ಕೈಜೋಡಿಸಬೇಕು. ಆದರೆ ಬಡವ, ಬಲ್ಲಿದ ಎಂಬ ಪುತ್ಕಾರಕ್ಕೆ ಪಕ್ಷಿಗೆ ರೆಕ್ಕಿ ಕಟ್ಟಿ ಹಾರಾಟ ಮಾಡು ಎಂದರೇಗೆ ಅಲ್ವಾ..?? ಸಿರಿವಂತರಿಗೊಂದು ನ್ಯಾಯ, ಬಡವರಿಗೊಂದು ನೀತಿ..! ನಮ್ಮ ಪ್ರಕಾರ ಈ ಖಾಸಗಿ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಿ "ಏಕರೂಪ"ದ ಮತ್ತು ಸಮಾನತೆಯ ತಾತ್ವಿಕ ಆಧಾರದ ಮೇರೆಗೆ ಸಂವಿಧಾನ ನೀಡಿರುವ ಶಿಕ್ಷಣದ ಹಕ್ಕನ್ನು ಜಾರಿಗೊಳಿಸಬೇಕು ಎಂಬುದು ನನ್ನ ಅಭಿಮತ.

ನಮ್ಮ ರಾಜ್ಯದಲ್ಲಿರುವ ಶಿಕ್ಷಣ ಪದ್ದತಿಗೂ ಮತ್ತು ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು ಸರ್ಕಾರಗಳು ಶಾಲೆಗಳು ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ 'ಸೆಡ್ಡು' ಹೊಡೆಯುವ ಹಾಗೆ ಮಾಡುವುದು ನಮ್ಮ ಸರ್ಕಾರದ ಜವಾಬ್ದಾರಿಯಾಗಿದೆ. ಎಲ್ಲರೂ ಸರ್ಕಾರಿ ಶಾಲೆಗಳ ಕಡೆಗೆ ಹೋಗಿರುವಾಗ ನಮ್ಮ ಕರ್ನಾಟಕ ಏಕೋ ಈ ವಿಷಯದಲ್ಲಿ ಮಾತ್ರ ವಿದ್ಯಾರ್ಥಿಗಳ ಕೊರತೆಯೊಂದಾಗಿ ಸರ್ಕಾರಿ ಶಾಳೆಗಳನ್ನು ಬಂದ್ ಮಾಡಲು ಹೊರಟಿರುವ ಈ ಧೋರಣೆಯನ್ನು ಹೇಗೆ ತಾನೆ ಸಹಿಸಲು ಸಾಧ್ಯ..ಸರಿಯಾದ ಅಂಗನವಾಡಿ ಕೇಂದ್ರಗಳಿದ್ದರೂ ಸೌಲಭ್ಯದ ಕೊರೆಯಿಂದಾಗಿ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ.ಇದು ಹೀಗೆಯೇ ಮುಂದುವರಿದರಿ ಹೇಗೆ ತಾನೆ ಕನ್ನಡ ಭಾಷೆಯನ್ನು ಉಳಿಸಲು ಸಾಧ್ಯ..? ಹೌದು ನಾವು ಈಗ ಮತ್ತೊಮ್ಮೆ ಹೋರಾಟ ಮಾಡಬೇಕಾಗಿದೆ ಅದು ನಮ್ಮ ಕನ್ನಡ ಮಾಧ್ಯಮಗಳ ಉಳಿವಿಗಾಗಿ ಸರ್ಕಾರ ಇರುವ ಶಾಲೆಗಳನ್ನು ಅಭಿವೃದ್ದಿ ಪಡಿಸದೆ ಸರ್ಕಾರಿ ಶಾಲೆಗಳನ್ನು ಹಂತಹಂತವಾಗಿ ಮುಚ್ಚುತ್ತಿರುವುದು ಕನ್ನಡಿಗರಾದ ನಾವು ಇದರ ವಿರುದ್ದ ದ್ವನಿ ಎತ್ತಲೆ ಬೇಕಾಗಿದೆ ನಾನು ಸಹ ಕನ್ನಡ ಮಾಧ್ಯಮದಲ್ಲಿ ಓದಿರುವುದರಿಂದ ನನಗೆ ಶಾಲೆಯ ಬಗ್ಗೆ ಅಭಿಮಾನವಿದೆ, ಆದರೆ  ಕನ್ನಡ ಮಾಧ್ಯಮ ಶಾಲೆಗಳು ಕೆಲವು ಕಡೆ ಮುಚ್ಚಿದರೆ, ಹಲವೆಡೆ ಇಂದೋ ನಾಳೆಯೋ ಮುಚ್ಚುವ ಭೀತಿಯ ಹಂತದಲ್ಲಿವೆ. ಕನ್ನಡದ ಅಭಿವೃದ್ಧಿಯ ಕುರಿತು ಮಾತುಗಳನ್ನಾಡುತ್ತಿರುವ ನಮ್ಮ ರಾಜ್ಯ ಸರಕಾರ ಕನ್ನಡ ಶಾಲೆಗಳ ಉಳಿವಿನ ಕುರಿತು ಎಲ್ಲಿಯೂ ಧ್ವನಿ ಎತ್ತದಿರುವುದು ಕನ್ನಡ ಶಾಲೆಗಳ ಕಣ್ಮರೆಗೆ ಕಾರಣವಾಗುತ್ತಿದೆ..? ಇದು ನೋವಿನ ಸಂಗತಿಯಾಗಿದೆ. ಕನ್ನಡ ಮಾಧ್ಯಮದ ಶಾಲೆಯ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದು  ಕನ್ನಡ ಶಾಲೆಗಳ ಪರಿಸ್ಥಿತಿಯನ್ನು ಕೇಳುವವರಿಲ್ಲದಂತಾಗಿದೆ. ಕೆಲವು ಕೆಡಗಳಲ್ಲಿ ಶಿಥಿಲಗೊಂಡು ಬೀಳುವ ಹಂತದಲ್ಲಿರುವ ಶಾಲೆಯ ಕೊಠಡಿಗಳು, ಮೂಲ ಸೌಕರ್ಯಗಳ ಕೊರತೆ, ಇದರಿಂದಾಗಿ  ಕನ್ನಡ ಮಾಧ್ಯಮದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿರುವ ಪೋಷಕರು ಅವರಿಗೆ ಕಾಲ ಕಾಲಕ್ಕೆ ಸರಿಯಾಗಿ  ಪಠ್ಯಪುಸ್ತಕಗಳು  ಪೂರೈಕೆಯಾಗದಿರುವುದು, ಕೊಠಡಿಗಳ ತೊಂದರೆಯಿಂದಾಗಿ ಮಕ್ಕಳು ಸಂಪೂರ್ಣವಾಗಿ  ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಅದಕ್ಕೆ ಸರ್ಕಾರಿ ಶಾಲೆಗಳ ದುಸ್ಥಿತಿಯಿಂದ ಬೇಸತ್ತು ಅವರು ತಮ್ಮ ಮಕ್ಕಳನ್ನು ಪುನಃ ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಪರಿಣಾಮವಾಗಿ, ಒಂದರಿಂದ ಹತ್ತನೇ ತರಗತಿವರೆಗಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ೧.೬೨ ಲಕ್ಷ ಕುಸಿದಿದೆ ಇನ್ನು ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಕೊಠಡಿಗಳ ಕೊರತೆ ಹಿನ್ನೆಲೆಯಿಂದಾಗಿ ಹೊಸತಾಗಿ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ೨೦೨೦-೨೧ ರಲ್ಲಿ ೧೨೨೭೯ ಕೊಠಡಿಗಳಿಗೆ ಮಂಜೂರಾತಿ ನೀಡಿದೆ. ಇದಕ್ಕೆ ೧೪೦೩೨೨.೯೮ ಲಕ್ಷ ಅನುದಾನ ನೀಡಲಾಗಿದೆ. ಅದೇ ರೀತಿ ೨೦೨೧-೨೨ ರಲ್ಲಿ೪೨೬೦ ಕೊಠಡಿಗಳಿಗೆ ಮಂಜೂರಾತಿ ನೀಡಲಾಗಿದ್ದು, ೩೬೮೫೫.೨೯ ಲಕ್ಷ ಅನುದಾನ ನೀಡಲಾಗಿದೆ. ಸರಿಯಾದ ಕಂಪ್ಯೋಟರ್ ವ್ಯವಸ್ಥೆಇಲ್ಲದಿರಿವುದು ಅವರ ಆಡಳಿತ ವೈಖರಿಗೆ ಕೈ ಹಿಡಿದ ಕೈಗಂನಡಿಯಂತಿದೆ ಅಲ್ಲದೆ  ಸಾವಿರಾರು ಶಾಲೆಗಳಲ್ಲಿ ಆಟದ ಮೈದಾನವೂ ಇಲ್ಲ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ೧೯,೨೬೯ ಸರ್ಕಾರಿ ಪ್ರಾಥಮಿಕ ಹಾಗೂ ೭೦೦ ಪ್ರೌಢ ಶಾಲೆಗಳಲ್ಲಿ ಆಟದ ಮೈದಾನವಿಲ್ಲ. ಇನ್ನು ಅನುದಾನಿತ ೫೭೯ ಪ್ರಾಥಮಿಕ, ೩೮೩ ಪ್ರೌಢ ಶಾಲೆಗಳಲ್ಲೂ ಇದೇ ಸ್ಥಿತಿ ಇದೆ. ಹಾಗಾದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಕನ್ನಡ ಶಾಲೆಗಳಿಗೆ  ಬರುವ ಬಡವರ ಮಕ್ಕಳು ಪರಿಸ್ಥಿತಿ  ಕಲಿಕೆಯಲ್ಲಿ ಅಯೋಮಯವಾಗಿದೆ.ಹಾಗೆಯೇ ಖಾಸಗಿ ಶಾಲೆಗಳ ಮಿತಿಮೀರಿದ ಶುಲ್ಕ ಬಡ ಮತ್ತು ಮಧ್ಯಮ ವರ್ಗದ ಜನರ ಕಂಗೆಡಿಸಿದೆ. ಆದರೂ ಅನಿವಾರ್ಯವೆಂಬಂತೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪ್ರವೃತ್ತಿಯು ತೀವ್ರವಾಗಿದೆ. ಸರ್ಕಾರಿ ಶಾಲೆ ಚೆನ್ನಾಗಿದ್ದರೆ ಮಕ್ಕಳನ್ನ ಅಲ್ಲೇ ಓದಿಸಬಹುದಿತ್ತಲ್ಲ ಎಂದು ಕೊರಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಇದರ ಬಗ್ಗೆ ಗಂಭೀರ ಚಿಂತನೆಯನ್ನು ನಡೆಸಿ, ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಬದಲು, ಅದರ ಉನ್ನತಿಗೆ ಶ್ರಮಿಸಬೇಕು. ಸರ್ಕಾರಿ ಕೆಲಸದಲ್ಲಿರುವವರು ತಮ್ಮ ಮಕ್ಕಳನ್ನು ಸಹ ಸರ್ಕಾರಿ ಶಾಲೆಗೆ ಸೇರಿಸುವ ಕಡ್ಡಾಯ ನೀತಿ ಜಾರಿಯಾದಾಗ ಮಾತ್ರ ಕನ್ನಡ ಶಾಲೆಗಳ ಉಳಿವು ಸಾಧ್ಯ ಎಂಬ ಅರಿವು ನಮ್ಮಲ್ಲಿ ಮೂಡಬೇಕಿದೆ.



ಜ್ಯೋತಿ ಜಿ, ಮೈಸೂರು
(ಉಪನ್ಯಾಸಕರು, ಸಾಮಾಜಿಕ ಹೋರಾಟಗಾರರು)


Post a Comment

Previous Post Next Post