UDAYAVANI NEWS
ಸಿಂಧನೂರು, ಮಾರ್ಚ್ 26 : ಹೆಚ್.ಮರಿಯಪ್ಪ ವಕೀಲರು ಹೆಡಿಗಿಬಾಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ದ ಕುಡಿಯುವ ನೀರಿನ ಅರವಟಿಗೆ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರದ ತಾಲೂಕು ನ್ಯಾಯಲಯದ ಮುಂಭಾಗದ ಮುಖ್ಯ ರಸ್ತೆ ಬದಿಯಲ್ಲಿ ವೆಂಕಟಗೀರಿ ಕ್ಯಾಂಪ್ ಸಿದ್ಧಾಶ್ರಮದ ಶ್ರೀಗಳಾದ ಶರಣರು ಹೆಚ್.ಮರಿಯಪ್ಪ ವಕೀಲರು ಹೆಡಿಗಿಬಾಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ದ ಕುಡಿಯುವ ನೀರಿನ ಅರವಟಿಗೆ ಚಾಲನೆ ನೀಡಿ ಮಾತನಾಡಿದ ಅವರು ಸಾರ್ವಜನಿಕರಿಗೆ ಆಯೋಜಿಸಿರುವ ಉಚಿತ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಹಳ್ಳಿಯಿಂದ ನಗರಕ್ಕೆ ಬಂದ ಜನರಿಗೆ ಬೆಸಿಗೆಯಲ್ಲಿ ಒಂದೊತ್ತು ಊಟ ಇಲ್ಲದಿದ್ದರೆ ನಡೆಯುತ್ತೆ ಆದರೆ ನೀರಿನ ದಾಹ ತೀರಿಸುವುದು ಬಹುಮುಖ್ಯವಾದ ಕಾರ್ಯವಾಗಿದೆ.
ಕುಡಿವ ನೀರಿನ ದಾಹ ನೀಗಿಸುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ನ್ಯಾಯಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀ ಗೌರವಾನ್ವಿತ ಕೋಟೆಪ್ಪ ಕಾಂಬಳೆ , ಒಂದನೇ ಅಪಾರ ನ್ಯಾಯಾಧೀಶರಾದ ಶ್ರೀ ಆನಂದಪ್ಪ ಎಂ,ಎರಡನೇ ಅಪಾರ ನ್ಯಾಯಾಧೀಶರಾದ ಶ್ರೀ ಆಚಪ್ಪ ದೊಡ್ಡ ಬಸವರಾಜ ,ತಾಲೂಕು ವಕೀಲ ಸಂಘದ ಅಧ್ಯಕ್ಷರು ಕೆ.ಭೀಮನಗೌಡ,ಹೋಲಿ ಫ್ಯಾಮಿಲಿ ಚೆರ್ಚಿನ ಕ್ರೈಸ್ತ ಗುರುಗಳಾದವಂ.ಫಾದರ್ ಜ್ಞಾನ ಪ್ರಕಾಶ್ ,ಎಂ.ಅಮರೇಗೌಡ ವಕೀಲರು,ಜೆ.ರಾಯಪ್ಪ ವಕೀಲರು,ಶೇಖರಪ್ಪ ದುಮತಿ ವಕೀಲರು ,ನೀರುಪಾದಿ ವಕೀಲರು, ಶರಣಬಸವ ಉಮಲೂಟಿ ವಕೀಲರು,ಅಯ್ಯಪ್ಪ ಮಲ್ಲಾಪೂರು ವಕೀಲರು,ವಿಜಯ ಬಾಸ್ಕರ್ ವಕೀಲರು ,ಎಂ.ಡಿ.ಜಾಫರ್ ಸಾಬ್ ವಕೀಲರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು