ನಾಲತವಾಡ : ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಹೋಬಳಿಯ ನಾಡಕಛೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಪ್ರತಿ ವರ್ಷ ಫೆಬ್ರವರಿ 19 ರಂದು ಆಚರಿಸಲಾಗುತ್ತದೆ. ಮರಾಠಾ ಸಾಮ್ರಾಜ್ಯದ ಸ್ಥಾಪಕ ಶಿವಾಜಿ ಮಹಾರಾಜರ 396ನೇ ಜನ್ಮ ವಾರ್ಷಿಕೋತ್ಸವವನ್ನು (2026ರಲ್ಲಿ) ದೇಶಾದ್ಯಂತ, ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ದಿನದಂದು ಶಿವಾಜಿ ಮಹಾರಾಜರ ಶೌರ್ಯ, ಆಡಳಿತ ಕೌಶಲ್ಯ ಮತ್ತು ಅವರ ತತ್ವಗಳನ್ನು ಸ್ಮರಿಸಿ ಗೌರವ ಸಲ್ಲಿಸಲಾಗುತ್ತದೆ.
ಇದೆ ಸಂದರ್ಭದಲ್ಲಿ ಉಪತಶೀಲ್ದಾರ್ ಎನ್.ಬಿ.ದೊರೆ, ಕಂದಾಯ ನಿರೀಕ್ಷರು ವಿ.ವಿ.ಅಂಬಿಗರ್, ಗ್ರಾಮಾಡಳಿತ ಅಧಿಕಾರಿಗಳು ಸಚಿನ ಗೌಡರ್, ಎಫ್.ಡಿ.ಎ. ಶ್ರೀಮತಿ ಎಸ್.ಎನ್ ಇಮಾರತವಾಲೆ, ಗ್ರಾಮ ಸಾಹಾಯಕರು ಮಹೇಬುಬ ನಡದಾಳ್, ದೇವು ಗಂಜಿ, ಮೋನೇಶ್ ಹೊಸಮನಿ, ಬಸವರಾಜ್ ಸರಿಕಾರ, ಇನ್ನಿತರರು ಉಪಸ್ಥಿತರಿದ್ದರು
ಜಿಲ್ಲಾವರದಿಗಾರರು: ಶಿವು ರಾಠೋಡ.