ಈ ಆರೋಗ್ಯ ಶಿಬಿರ ದಲ್ಲಿ
ಶ್ರೀಮತಿ ಸರೋಜ , ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಶ್ರೀ ಲಕ್ಷಣ ಅಧ್ಯಕ್ಷರು ಗ್ರಾಮ ಪಂಚಾಯತ್,ಶ್ರೀ ಸಂಜಯ ರಾಠೋರ್ ಆಡಳಿತ ವೈಧ್ಯಾಧಿಕಾರಿಗಳು ಶ್ರೀ ಸಂಗಣ್ಣ ಪಾಟೀಲ ಸಮುದಾಯ ಆರೋಗ್ಯ ಅಧಿಕಾರಿಗಳು, HIO, ಗ್ರಾ ಪಂ ಸದಸ್ಯರು ಗ್ರಂಥಪಾಲಕರು, , PHCO , ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸದಸ್ಯರು ಪ್ರೇರಕರಾದ ಶ್ರೀಮತಿ ರಾಚಮ್ಮ ಹಾಗೂ, 142 ಹಿರಿಯ ನಾಗರೀಕರು ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಸರೋಜ , ಅಭಿವೃದ್ಧಿ ಅಧಿಕಾರಿಗಳು, ಕಲಿಕೆ ಟಾಟಾ ಟ್ರಸ್ಟ್ಸ್ ಸಂಸ್ಥೆಯು , ಹಿರಿಯರ ಜೀವನ ಸಂತಸದಾಯಕ ವಾಗಿಸಲು ಗ್ರಾಮ ಹಿರಿಯರ ಕೇಂದ್ರ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು ಎಲ್ಲಾ ಅರ್ಹ ಹಿರಿಯ ನಾಗರೀಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸೂಚಿಸಿದರು ಹಾಗೂ ಗ್ರಾಮ ಪಂಚಾಯತ್ ವತಿಯಿಂದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ಹಂಚಿಕೊಂಡರು
ತದನಂತರ ಶ್ರೀ ಸಂಜಯ ರಾಠೋಡ ಆಡಳಿತ ಆರೋಗ್ಯ ಅಧಿಕಾರಿಗಳು ಮಾನಸಿಕ ಆರೋಗ್ಯ ಕುರಿತು ಹಿರಿಯರ ಜೊತೆಗೆ ಚರ್ಚೆ ನಡೆಸಿದರು.
ಶ್ರೀ ಮಿನಾಕ್ಷಿ ನೇತ್ರ ತಜ್ಞರು ಕಣ್ಣುಗಳ ಮಹತ್ವ ಕುರಿತು ಚರ್ಚಿಸಿದರು ತದನಂತರ ಹಿರಿಯರಿಗೆ ಬಿ ಪಿ, ಶುಗರ್ ಮತ್ತು ಕಣ್ಣಿನ ತಪಸಣೆ ನಡೆಸಿ ಕನ್ನಡಕ ಮತ್ತು ಔಷಧಿಗಳನ್ನು ವಿತರಿಸಲಾಯಿತು.
ಶ್ರೀ ಅಲ್ಲಾವುದ್ದೀನ್ ಕಾರ್ಯಕ್ರಮ ಸಂಯೋಜಕರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.