ಬಿಎಎಸ್ ಇಂಟರ್ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟ ಮಟ್ಸೋಗಿ-ಡೊ ಟೂರ್ನಿಗೆ ಆಯ್ಕೆಮುದ್ದೇಬಿಹಾಳ:

Udayavani News
0

ಪಟ್ಟಣದ ಬಿಎಎಸ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಜರುಗಲಿರುವ 20 ನೇ ರಾಷ್ಟ್ರೀಯ ಮಟ್ಸೋಗಿ-ಡೊ(ಮಾರ್ಷಲ್ ಆರ್ಟ್ಸ್) ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಶಾಲೆಯ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯವರು ಸನ್ಮಾನಿಸಿ ಶುಭಹಾರೈಸಿದರು.
ಪಟ್ಟಣದ ಬಿಎಎಸ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಜರುಗಲಿರುವ 20 ನೇ ರಾಷ್ಟ್ರೀಯ ಮಟ್ಸೋಗಿ-ಡೊ(ಮಾರ್ಷಲ್ ಆರ್ಟ್ಸ್) ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಶಾಲೆಯ ವಿದ್ಯಾರ್ಥಿಗಳಾದ ಶಕುಂತಲಾ ಶಾರದಳ್ಳಿ, ವಿಕ್ರಾಂತ ಶಾರದಳ್ಳಿ ಕ್ರೀಡಾಪಟುಗಳನ್ನು ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕ ವೃಂದದವರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪದಕ ತರಬೇಕೆಂದು ಶುಭಹಾರೈಸಿದರು.
ಮಾರ್ಷಲ್ ಆರ್ಟ್ಸ್ ತರಬೇತಿದಾರ ಶಿವಕುಮಾರ ಶಾರದಳ್ಳಿ ಅವರ ನೇತೃತ್ವದಲ್ಲಿ ಉತ್ತಮ ತರಬೇತಿ ಪಡೆದಿರುವ ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾಗಿರುವುದು ಶಾಲೆಗೆ ಹಿರಿಮೆ ತಂದಿದೆ. ವಿದ್ಯಾರ್ಥಿಗಳಿಗೆ ಕಲಿಕೆಯೊಂದು ಕ್ರೀಡಾಚಟುವಟಿಕೆಯೂ ಅತೀ ಅವಶ್ಯವಾಗಿದೆ. ಇದರಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಮುನ್ನೆಡೆಯುತ್ತಿದ್ದು ಅವರಿಗೆ ಶಾಲೆಯಿಂದ ಸಂಪೂರ್ಣ ಬೆಂಬಲ ನೀಡಲಿದ್ದೇವೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದರ ಹಾಗೂ ಮುಖ್ಯ ಗುರುಮಾತೆ ರಿಷೀಕಾ ನಾಯ್ಕ ಹೇಳಿದರು.
ಬಿಎಎಸ್ ಶಾಲಾ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಶಾಲೆಗೆ ಕೀರ್ತಿ ತರಬೇಕು ಎಂದು ಶಾಲಾ ಆಡಳಿತ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪರವಾಗಿ ಶುಭಹಾರೈಸುತ್ತೇನೆ ಎಂದು ಹೇಳಿದರು.
ತರಬೇತಿದಾರ ಶಿವಕುಮಾರ ಶಾರದಳ್ಳಿ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ಇದೇ ಡಿಸೆಂಬರ್ 28 ರಿಂದ 31 ವರೆಗೆ ನಡೆಲಿರವ 20 ನೇ ರಾಷ್ಟ್ರೀಯ ಮಟ್ಸೋಗಿ-ಡೊ(ಮಾರ್ಷಲ್ ಆರ್ಟ್ಸ್) ಕ್ರೀಡಾಕೂಟದಲ್ಲಿ ದೇಶದ ಅಂದಾಜು 15ಕ್ಕೂ ಹೆಚ್ಚು ರಾಜ್ಯಗಳ 1 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಈ ವೇಳ ಶಿವನಗೌಡ ಬಿರಾದಾರ, ಕಾರ್ಯದರ್ಶಿ ಸುಮಂಗಳಾ ಬಿರಾದಾರ, ಗೀತಾ ಬಿರಾದಾರ,  
ಬಿಎಎಸ್ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳು ಇದ್ದರು.

ವರದಿ : ಶಿವು ರಾಠೋಡ



Post a Comment

0Comments

Post a Comment (0)