ಸುರಪುರ ಸುದ್ದಿ : ಕಲರ್ಸ ಕನ್ನಡ ಸಿನೆಮಾ ಚಾನಲ್ ನ ಬಾಸ್ ಸೀಜನ್ 12ರ ಸ್ಪರ್ದಿ ಮಲ್ಲಮ್ಮ ಬಾವಿ ರವರನ್ನು ಸುರಪುರ ತಾಲ್ಲೂಕಿನ ಸ್ವಗ್ರಾಮವಾದ ಕನ್ನೆಳ್ಳಿ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿದರು.
ನಟ ಮನೋಜ್ ಕುಮಾರ್ ಹಾಗೂ ಸೆಲೆಬ್ರಿಟಿಸ್ ಪಲ್ಲವಿ ಲಕ್ಷ್ಮೀಕಾಂತಗೌಡ ಜೊತೆಗೆ ಮಲ್ಲಮ್ಮ ಬಾವಿಯವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳು ಲೇಜಿಮ್ ತಂಡದ ಜೊತೆಗೆ ಡೊಳ್ಳು ಕುಣಿತದ ತಂಡದೊಂದಿಗೆ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಲಾಯಿತು.
ನಂತರ ಕನ್ನೆಳ್ಳಿ ಗ್ರಾಮಸ್ಥರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು .
ಆಕಾಶವಾಣಿ ಕಲಾವಿದರಾದ ವೀರೇಶ ಗವಾಯಿಗಳು ಹಾಗೂ ಮಹಾಂತೇಶ ಹೆಗ್ಗಣದೊಡ್ಡಿ ಯವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಡೊಳ್ಳು ವಾಧ್ಯ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ದೇವದುರ್ಗದ ಮಲದಕಲ್ ಪೂಜ್ಯರು, ನಗನೂರು ಸೂಗೂರೇಶ್ವರ ಮಠದ ಪೂಜ್ಯರು, ಹೆಗ್ಗಣದೊಡ್ಡಿ ಧರ್ಮರ ಮಠದ ಪೂಜ್ಯರು, ಶಹಾಪುರ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಪೂಜ್ಯರಾದ ಶರಣು ಗದ್ದುಗೆ, ಬಂಡೆಪ್ಪನಹಳ್ಳಿ ಪೂಜ್ಯರು ಕನ್ನೆಳ್ಳಿ ಗ್ರಾಮದ ಮಲ್ಲಯ್ಯ ಮುತ್ಯಾ, ಪಂಚಯ್ಯ ಮುತ್ಯಾ, ಗೋವಿಂದ ರಾಜ ದೇವರು, ದೊಡ್ಡಪ್ಪಗೌಡ ಪೋಲಿಸ್ ಪಾಟೀಲ್, ಬಾಪುಗೌಡ ಮಾಲಿಪಾಟೀಲ್ ಸುರಪುರ ಪಿಎಸ್ಐ ಸಿದ್ದಣ್ಣ ಯಡ್ರಾಮಿ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.
ಗ್ರಾಮದ ಪ್ರಮುಖರಾದ ನಿಂಗಣ್ಣ ಗೋಡಿಹಾಳ್ಕರ್, ಬಸವರಾಜ ನಾಯ್ಕೋಡಿ, ಮಡಿವಾಳಪ್ಪ ಕೊಂಡಗುಳಿ, ಚಂದಪ್ಪ ನಾಯ್ಕೋಡಿ, ನಾದಬ್ರಹ್ಮ ಹೆಬ್ಬಾಳ್ಕರ್, ಮಲ್ಲಣ್ಣ ಹಡಪದ, ಮಲ್ಲಿಕಾರ್ಜುನ ಕುಂಬಾರ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಮತ್ತು ಮಕ್ಕಳು ಇದ್ದರು.
ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ಅಂಗಡಿ ನಿರೂಪಿಸಿದರು, ಮಲ್ಲು ಚಾನಕೋಟಿ ಸ್ವಾಗತಿಸಿದರು.
ವರದಿ : ಶಿವು ರಾಠೋಡ