ನಾಲತವಾಡ : ತಂದೆ ಜನ್ಮದಿನವನ್ನು ಎ.ಎಸ್.ಎನ್. ಕಾನೂನು ಮಹಾ ವಿದ್ಯಾಲಯ ನಾಲತವಾಡದ ವಿದ್ಯಾರ್ಥಿಗಳಿಗೆ ದೇವಿಕ ಸುಬ್ಬರವ್ ಫೌಂಡೇಷನ್ ವತಿಯಿಂದ ಪಲ್ಲವಿ ನಾಡಗೌಡನವರು ವಿದ್ಯಾರ್ಥಿಗಳಿಗೆ ಸಿಹಿ ಕೊಟ್ಟು ಸಂತೋಷದಿಂದ ತಮ್ಮ ತಂದೆಯಾದ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಸಿ.ಎಸ್. ಅಪ್ಪಾಜಿ ನಾಡಗೌಡನವರ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು ..
ಇದೆ ಸಂದರ್ಭದಲ್ಲಿ ಎ.ಎಸ್.ಎನ್ ಕಾನೂನು ಮಹಾ ವಿದ್ಯಾಲಯ ಪ್ರಾಂಶುಪಾಲರಾದ ಶ್ರೀಮತಿ ರಶ್ಮಿ ಕುಲಕರ್ಣಿ, ಪಿ.ಬಿ. ಚೌಡಕೇರಿ, ಎಮ್.ಬಿ. ಪಾಟೀಲ, ವಿರೇಶ್ ಕಟ್ಟಿ, ಬಸವರಾಜ್ ಸರೂರ್, ಭಾಗ್ಯಶ್ರೀ ಚಳ್ಳಗಿ , ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಉಪಸ್ಥಿತರಿದ್ದರು
ವರದಿಗಾರ : ಶಿವು ರಾಠೋಡ