ಜಿಲ್ಲಾ ಮಟ್ಟದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡು ರಾಜ್ಯಮಟ್ಟಕೆ ಮೋನಿಕಾ ಯರಗಗೋಡಿ ಆಯ್ಕೆ.

Udayavani News
0


ಸುರಪುರ ತಾಲೂಕಿನ ಕುರೇಕನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮೋನಿಕಾ ಯರಗೋಡಿ ಜಿಲ್ಲಾ ಮಟ್ಟದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.. 13.10.25.ರಂದು ಜಿಲ್ಲಾಡಳಿತ & ಜಿಲ್ಲಾ ಪಂಚಾಯತ ಉಪ ನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಯಾದಗಿರಿ ಹಾಗೂ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಓಟದ ಸ್ಪರ್ಧೆಯಲ್ಲಿ ಒಟ್ಟು 06 ಜನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಅದರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರೆಕಾನಾಳದ 6ನೇ ತರಗತಿ ವಿದ್ಯಾರ್ಥಿನಿ ಮೋನಿಕಾ ಹ ಯರಗೋಡಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡು ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಎಂದು ತಿಳಿಸಿದ್ದಾರೆ. ಮುಖ್ಯಗುರುಗಳಾದ ಭೀಮನಗೌಡ ಬಿರಾದಾರ ನಮ್ಮ ಪತ್ರಿಕೆ ಜೊತೆ ಮಾತನಾಡಿ ಈ ವಿದ್ಯಾರ್ಥಿ ಬಡವಳ್ಳಿದ್ದು ಅವರ ತಂದೆ ತಾಯಿ ಕೂಲಿ ಕೆಲಸ ಮಾಡಿ ನನ್ನ ಮಗಳು ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ನಿಲ್ಲಬೇಕೆಂದು ಕನಸು ಇಟ್ಟಕೊಂಡು ಕಲಿಸುತ್ತಿದ್ದಾರೆ, ಆದರೆ ಹಿಂದುಳಿದ ಸಮಾಜದ ಒಬ್ಬ ವಿದ್ಯಾರ್ಥಿನಿ ಈ ಮಟ್ಟಕ್ಕೆ ಬೆಳೆದು ನಮ್ಮ ಶಾಲೆಯ ಹೆಸರು ರಾಜ್ಯ ಮಟ್ಟಕ್ಕೆ ಕೊಂಡೋಗಿದ್ದಾಳೆ. ನಮಗೆ ಸಂತೋಷವಾಗಿದೆ ಮುಂದೆ ರಾಷ್ಟ ಮಟ್ಟಕ್ಕೆ ಆಯ್ಕೆಯಾಗಲಿ, ನಮ್ಮ ಶಾಲೆಯ ಹೆಸರು ಅವಳ ಹೆಸರು ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕೆಂದು ಶುಭಹಾರೈಸಿದರು..

ವಿದ್ಯಾರ್ಥಿನಿ ಮೋನಿಕಾ ನಮ್ಮ ಪತ್ರಿಕೆ ಜೋತೆ ಮಾತನಾಡಿ ನನಗೆ ಈ ಹಿಂದೆ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲು ಎಲ್ಲಾ ಶಿಕ್ಷಕರು ಪ್ರೋತ್ಸಾಹಿಸಿದ್ದಾರೆ, ನನಗೆ ಮಾರ್ಗದರ್ಶಕರಾಗಿ ಬೆನ್ನಲಬಾಗಿ ನಿಂತು ನಾನು ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಲು ಪಾತ್ರದಾರರು ಮುಖ್ಯಗುರುಗಳು, ಹಾಗೂ ನನ್ನ ಗುರುವೃಂದ ಎಂದು ವಿದ್ಯಾರ್ಥಿನಿ ಪತ್ರಿಕೆ ಜೊತೆ ಮಾತನಾಡಿದಳು.
ಈ ವಿದ್ಯಾರ್ಥಿನಿಗೆ ಶಾಲೆಯ ಮುಖ್ಯ ಗುರುಗಳಾದ ಭೀಮನಗೌಡ ಬಿರಾದಾರ, ಸಹ ಶಿಕ್ಷಕ ಮಲ್ಲಿಕಾರ್ಜುನ ಎಚ್, ಬಸವರಾಜ ಆರತ್ತಿನವರ,ಮುಸಿಹೊನ್ನೂರಪ್ಪ, ಈರಣ್ಣ ಮಾನಬಾವಿ, ಹರ್ಷ ವ್ಯಕ್ತಪಡಿಸಿದರು.ರಾಜ್ಯ ಮಟ್ಟದ ಓಟದಲ್ಲಿ ಗೆದ್ದು ಮತ್ತೆ ರಾಷ್ಟ್ರ ಮಟ್ಟದಲ್ಲಿ ನಮ್ಮ ಶಾಲೆಯ ಹೆಸರು ತರಲೆಂದು ಸನ್ಮಾನಿಸಿ ಅಭಿನಂದನೆಗಳು ತಿಳಿಸಿದರು..ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪರಸು ಹುಡೆದ,ಸರ್ವ ಸದಸ್ಯರು, ಬಸವರಾಜ ಹುಡೇದ, , ಶರಣು ಹುಡೇದ, ಮತ್ತಿತರರು ಅಭಿನಂದನೆಗಳು ತಿಳಿಸಿದರು.ಊರಿನ ಹಿರಿಯರು ಸಮಾಜದ ಮುಖಂಡರು ಅಭಿನಂದನೆಗಳು ತಿಳಿಸಿದರು..

ವರದಿಗಾರ : ಶಿವು ರಾಠೋಡ

Post a Comment

0Comments

Post a Comment (0)