ಪ್ರಾರ್ಥನಾ ಶಿಕ್ಷಣ ಸಂಸ್ಥೆ ಶಹಪುರದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆದು ಮಾತನಾಡಿದ ಉತ್ತರ ಕರ್ನಾಟಕದ ಕರವೇ ಅಧ್ಯಕ್ಷರಾದ ಶ್ರೀ ಶರಣು ಬಿ ಗದ್ದುಗಿ ಮಾತನಾಡಿ ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಶಿಕ್ಷಣ ಪಡೆದು ತಮ್ಮ ತಂದೆ ತಾಯಿಯ ಕನಸನ್ನು ಈಡೇರಿಸುವುದರ ಜೊತೆಗೆ ನಾಡು ನುಡಿ ಕನ್ನಡ ಭಾಷೆಗೆ ಶ್ರಮಿಸಬೇಕೆಂದರು. ಲಿಂಗಸೂರಿನ ಸರಕಾರಿ ಪದವಿಮಾವಿದ್ಯಾಲಯದ ಉಪನ್ಯಾಸಕರಾದ ಡಾ//ಮರೆಪ್ಪ ಮಕ್ತಪುರ ಮಾತನಾಡಿ ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ವೈಚಾರಿಕ ಚಿಂತನೆಗಳು ಮಹಾನ್ ಪುರುಷರ ಆದರ್ಶಗಳ ಜೊತೆಗೆ ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನವನ್ನು ಜಾಗೃತಗೊಳಿಸುವುದೆ ಶಿಕ್ಷಕನ ಅತಿ ಶ್ರೇಷ್ಠ ಕಲೆ ಎಂದು ಹೇಳಿದರು. ಇತಿಹಾಸ ಉಪನ್ಯಾಸಕರಾದ ಅಂಬೇಡ್ಕರ್ ನಾಟೇಕಾರ್ ಮಾತನಾಡಿ ಜೀವನ ಹಾಗೂ ಸಮಯ ಈ ವಿಶ್ವದ ಬಹುದೊಡ್ಡ ಶಿಕ್ಷಕರು ಜೀವನ ಸಮಯದ ಸದುಪಯೋಗ ಕಲಿಸಿದರೆ ಸಮಯ ಬದುಕಿನ ಮೌಲ್ಯ ತಿಳಿಸುತ್ತದೆ ಹಾಗೆಯೆ ಶಿಕ್ಷಕ ವಿದ್ಯಾರ್ಥಿಗಳ ಬಾಳಿನ ಬ್ರಹ್ಮನಾಗಿರುತ್ತಾನೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ದೇವೇಂದ್ರಪ್ಪ ಬಡಿಗೇರ್ ವಹಿಸಿದರು.ಶ್ರೀ ಶಿವಪ್ರಕಾಶ್ ಬಡಿಗೇರ್ ಪ್ರಾಸ್ತವಿಕ ಮಾತನಾಡಿದರು.ಉಪನ್ಯಾಸಕರಾದ ಮಲ್ಲಿನಾಥ್ ಬಡಿಗೇರ್, ಸದಾನಂದ, ಸೊಗಪ್ಪ, ಮಾನಪ್ಪ ಹುರುಸುಗುಂಡಿಗಿ, ಅಮೃತ, ರವಿ ಬಂಡಾರಿ, ಲಕ್ಷ್ಮಣ್ ಮೇತ್ರಿ ,ನಿಶಾತ್ ಅಂಜುಮ್ , ಮಲ್ಲರೆಡ್ಡಿ ಉಪಸ್ಥಿತರಿದ್ದರು. ಭಾಗ್ಯಶ್ರೀ ಮತ್ತು ಜಟ್ಟೆಪ್ಪ ನಿರೂಪಿಸಿ ಮಮತಾ ಮತ್ತು ಸೀತಮ್ಮ ಸ್ವಾಗತಿಸಿ ಅಪ್ಸಾನ, ಈರಮ್ಮ ವಂದಿಸಿದರು.