ಕೂಡ್ಲಿಗಿ : ಗುಣ ಮಟ್ಟದ ಶಿಕ್ಷಣ " ಹುಲಿಯ ಹಾಲಿನಂತೆ " ನೈತಿಕ ಶಕ್ತಿ ನೀಡುತ್ತೆ - ಸ್ನೇಹಿತರ ಬಳಗ ಅಬ್ದುಲ್ ರಹೆಮಾನ್
August 14, 2025
0
ವಿಜಯನಗರ ಜಿಲ್ಲೆ ಕೂಡ್ಲಿಗಿ : ಶಿಕ್ಷಣ ಹುಲಿಯ ಹಾಲು ಅದನ್ನು ಪಡೆದವರು ನೈತಿಕ ಶಕ್ತಿ ಹೊಂದಿ , ಭ್ರಷ್ಟಚಾರ ಶೋಷಣೆ ವಿರುದ್ಧ ಘರ್ಜಿಸುತ್ತಾರೆ ಎಂಬ. ಡಾ ॥ ಬಿ.ಆರ್.ಅಂಬೇಡ್ಕರ್ ರವರ ನುಡಿಯಂತೆ , ನಾಡಿನ ಪ್ರತಿಯೊರ್ವ ಮಗು ಗುಣ ಮಟ್ಟದ ಶಿಕ್ಷಣ ಹೊಂದಬೇಕಿದೆ ಎಂದು. ಸ್ನೇಹಿತರ ಬಳಗದ ಅಧ್ಯಕ್ಷರು , ಹಾಗೂ ಸಮಾಜ ಸುಧಾರಕ ಶಿಕ್ಷಣ ಪ್ರೇಮಿಗಳಾದ ಅಬ್ದುಲ್ ರಹೆಮಾನ್ ರವರು ನುಡಿದರು. ಅವರು ಪಟ್ಟಣದ ಶ್ರೀ ಸೊಲ್ಲಮ್ಮ ಮಂದಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ , ಹಾಗೂ ಸರ್ಕಾರಿ ಉರ್ದು ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಗೆಳೆಯರ ಬಳಗದ ವತಿಯಿಂದ ಶಾಲೆಯ ಮಕ್ಕಳಿಗೆ , ಶೈಕ್ಷಣಿಕ ಸಲಕರಣೆಗಳನ್ನು ಬಿತರಿಸಿ ಮಾತನಾಡಿದರು. ವಿದ್ಯೆ ನೈತಿಕ ಸ್ಥೈರ್ಯವನ್ನು ತುಂಬುತ್ತದೆ , ಗುಣ ಮಟ್ಟದ ಶಿಕ್ಷಣ ಮಕ್ಕಳಲ್ಲಿ ನೈತಿಕ ಸದೃಢರನ್ನಾಗಿಸುತ್ತದೆ. ಅದು ಸರ್ಕಾರಿ ಶಾಲೆಯ ಮಕ್ಕಳಿಗೆ ಲಭಿಸಬೇಕಿದೆ , ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲಿ ಗುಣ ಮಟ್ಟದ ಶಿಕ್ಷಣ ಕಲ್ಪಿಸುವುದು ಇಲಾಖೆ ಹಾಗೂ ಶಿಕ್ಷಕರ ಆಧ್ಯ ಕರ್ಥವ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಪೋಷಕರೊಂದಿಗೆ , ಶಿಕ್ಷಣ ಇಲಾಖೆಯೊಂದಿಗೆ ಸ್ನೇಹಿತರ ಬಳಗ ಅಗತ್ಯ ನೆರವು ನೀಡಲಿದೆ ಎಂದರು. ಸ್ನೇಹಿತರ ಬಳಗದ ಕಾರ್ಯಕರ್ತರು , ಶಾಲೆಯ ಮಕ್ಕಳಿಗೆ ನೋಟ್ ಬುಕ್ , ಮಗ್ಗಿ ಪುಸ್ತಕ, ರಬ್ಬರ್ ಬ್ಯಾಂಡ್ , ಆಗಸ್ಟ್ 15 ರ ಪ್ರಯುಕ್ತ ಭಾರತ ಮಾತೆಯಿರುವ. ತ್ತಿವರ್ಣ ಧ್ವಜದ ಮಾದರಿಯ , ಚಿಕ್ಕ ದ್ವಜಗಳನ್ನು ಮಕ್ಕಳಿಗೆ ವಿತರಿಸಿದರು. ಅಬ್ದುಲ್ ರಹೆಮಾನ್ ಮಾತನಾಡಿ , ಸಮಾಜ ಸೇವೆಯಿಂದಲೇ ತಮಗೆ ಆತ್ಮ ತೃಪ್ತಿ ದೊರಕುತ್ತಿದೆ. ಇದೆ ಕಾರಣಕ್ಕೆ ಕಳೆದ 9 ವರ್ಷಗಳಿಂದ ನಿರಂತರವಾಗಿ , ಪ್ರತಿ ವರ್ಷವೂ ಹಲವು ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಲಕರಣೆಗಳ ವಿತರಣೆ , ಉಚಿತ ನೇತ್ರ ತಪಾಸಣೆ ಶಸ್ತ್ರ ಚಿಕಿತ್ಸಾ ಶಿಬಿರ , ಹಿರಿಯ ನಾಗರೀಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ, ಕೋವಿಡ್ ಸಂದರ್ಭದಲ್ಲಿ ಬಡವರಿಗೆ ದವಸ ಧಾನ್ಯ ನಗದು ಹಣ ಔಷಧಿ ವಿತರಣೆ, SSLC PUC ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ನಿವಾರಣೆಗೆ ಶಿಬಿರಗಳು , ಶಾಲೆ ಕಾಲೇಜುಗಳಲ್ಲಿ ವಸತಿ ಶಾಲೆಗಳಲ್ಲಿ ಕ್ರೀಡಾ ಕೂಟಗಳ ಆಯೋಜನೆ ಸೇರಿದಂತೆ. ಅನೇಕ ರೀತಿಯ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಸಮಾಜಕ್ಕೆ ತಾವು ಅಳಿಲು ಸೇವೆ ಮಾಡುತ್ತಿರುವುದಾಗಿ ತಿಳಿಸಿದರು. ಶ್ರೀಸೊಲ್ಲಮ್ಮ ಮಂದಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ , ಮುಖ್ಯ ಶಿಕ್ಷಕರಾದ ಮಲ್ಲಮ್ಮ. ಶಿಕ್ಷಕರಾದ ಅಶ್ವಿತಾ , ಮುರುಗೇಂದ್ರಪ್ಪ , ಮತ್ತು ಅಂಜಿನಮ್ಮ ಇದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ , ಮುಖ್ಯ ಶಿಕ್ಷಕರಾದ ರಜಿಯಾಬೇಗಂ , ಮಂಜುಳಾ , ಫರ್ಜನ , ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ನೆಹಿತರ ಬಳಗದ ಪದಾಧಿಕಾರಿಗಳು , ಹಾಗೂ ಸದಸ್ಯರು ಉಪಸ್ಥಿತರಿದ್ದರು.
Tags