ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

Udayavani News
0
ನಾರಾಯಣಪುರ : ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಕೊಡೇಕಲ್ ಉಪತಶೀಲ್ದಾರ ಕಲ್ಲಪ್ಪ ಜಂಜಿಗಡ್ಡಿ ತಿಳಿಸಿದ್ದಾರೆ.

 ಕೊಡೇಕಲ್ ಗ್ರಾಮದ ಉಪತಶೀಲ್ದಾರ ಆವರಣದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ಕರ್ನಾಟಕವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ರಾಜಕೀಯ, ಸಾಮಾಜಿಕ ಮತ್ತು ಕ್ರಾಂತಿಕಾರಿ ಹೋರಾಟಗಳ ಮೂಲಕ ಮಹತ್ವದ ಪಾತ್ರವಹಿಸಿದೆ. 1857ರ ಮೊದಲ ಸ್ವಾತಂತ್ರ್ಯ ಸಮರದಿಂದ ಹಿಡಿದು 1947ರ ಸ್ವಾತಂತ್ರ್ಯದವರೆಗೆ, ಕರ್ನಾಟಕದ ಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ.

 “ದೇಶಾದ್ಯಂತ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಘೋಷಣೆ ಮೊಳಗಿದ್ದಾಗ, ಕರ್ನಾಟಕದಲ್ಲಿಯೂ ನಮ್ಮ ಸುರಪುರ ಪ್ರತಿಧ್ವನಿ ಗಟ್ಟಿಯಾಗಿ ಕೇಳಿಬಂತು. ಜನನಾಯಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಸಾಮಾನ್ಯ ಪ್ರಜೆಗಳು ಒಟ್ಟಾಗಿ ಹೋರಾಡಿ ಬ್ರಿಟಿಷರ ನಡುಗಿಸಿದರು.

 ಅವರ ಸಾಹಸವನ್ನು ನೆನೆದು ಗೌರವಿಸುವುದು ನಮ್ಮ ಕರ್ತವ್ಯ” ಎಂದು ಕಲ್ಲಪ್ಪ ಜಂಜಿಗಡ್ಡಿ ತಿಳಿಸಿ ತದನ್ನಂತರ ಹುಟ್ಟು ಹೋರಾಟಗಾರಾದ ಸಂಗಪ್ಪ ಮಂಟಿ ಸನ್ಮಾನಿಸಿ ಗೌರವಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು.

ಈ ಸಂಧರ್ಭದಲ್ಲಿ ಸಂಗಪ್ಪ ಮಂಟಿ, ಸುರೇಶ, ಸದ್ದಂ, ಶರಣು, ಇಕ್ಬಾಲ್, ಶಿವಶರಣ, ಶತಗೌಡ, ದೀಪತಿ, ಹಣಮಯ್ಯ, ಭಾಗಣ್ಣ, ಅಂಬ್ರೇಶ, ರಮೇಶ ಪೂಜಾರಿ, ಪರಶುರಾಮ, ಭೀಮರಾಯ, ಯಮನಪ್ಪ, ಇನ್ನಿತರರು ಇದ್ದರು

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)