ಪರಿಶಿಷ್ಟ ಸಮುದಾಯದವರಿಗೆ ಸಾಮಾಜಿಕ ಬಹಿಷ್ಕಾರ ಆರೋಪ: ಚಿನ್ನಾಕಾರ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ

Udayavani News
0
ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಚಿನ್ನಾಕಾರ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ಅಧಿಕಾರಿಗಳ ತಂಡ ನಿನ್ನೆ(ಮಂಗಳವಾರ) ಚಿನ್ನಾಕಾರ ಗ್ರಾಮಕ್ಕೆ ಭೇಟಿ ನೀಡಿ, ಸಭೆ ನಡೆಸಿದರು.

ಗ್ರಾಮದಲ್ಲಿನ 9 ಗುಂಟೆ ಸರಕಾರಿ ಜಮೀನಿನಲ್ಲಿ 6 ಗುಂಟೆ ಸಮಾಜ ಕಲ್ಯಾಣ ಇಲಾಖೆಗೆ ಈ ಹಿಂದೆಯೇ ನೀಡಲಾಗಿತ್ತು. ಉಳಿದ 3 ಗುಂಟೆ ಜಮೀನಿನಲ್ಲಿ ಈಚೆಗೆ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಂದ ಹಿನ್ನೆಲೆ 3 ಗುಂಟೆ ಸ್ಥಳದಲ್ಲಿ ಕಟ್ಟಡ ನಿರ್ಮಿಸಲು ನಿರ್ಧರಿಸಿದ ನಂತರ ಸಮಸ್ಯೆ ಕಾಣಿಸಿಕೊಂಡಿದೆ.

ವರದಿ ಸಲ್ಲಿಸಲು ಸೂಚನೆ: 3 ಗುಂಟೆ ಸರಕಾರಿ ಜಮೀನಿಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾಧಿಕಾರಿ ಸುಶೀಲಾ ಜಿ.ಅವರು ತಹಶೀಲ್ದಾರ್ ಶಾಂತಗೌಡ ಬಿರಾದರ ಅವರಿಗೆ ಸೂಚಿಸಿದರು.

ಅಲ್ಲದೆ, ಕೂಡಲೇ ವರದಿ ನೀಡಿದರೆ, ಸ್ಥಳದ ಕುರಿತಾಗಿ ಮುಂದಿನ ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು. ಸಾಮರಸ್ಯಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಂತಿ ಸಭೆ: ಜಿಲ್ಲಾಧಿಕಾರಿ ಸೂಚನೆಯಂತೆ ಮಂಗಳವಾರ‍ ತಹಶೀಲ್ದಾರ್, ಡಿವೈಎಸ್‌ಪಿ, ತಾಪಂ ಇಒ, ಸಮಾಜ ಕಲ್ಯಾಣ ಇಲಾಖೆಯ ಎಡಿ, ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಅಧಿಕಾಅಧಿಕಾರಿಗಳು ಗ್ರಾಮದಲ್ಲಿ ಸಭೆ ನಡೆಸಿದರು.


ತಾರತಮ್ಯ ಮಾಡದಂತೆ ತಾಕೀತು: ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಆರೋಪ ಸಂಬಂಧ ಗ್ರಾಮದಲ್ಲಿನ ಕ್ಷೌರದಂಗಡಿ, ಹೋಟೆಲ್‌ ಸೇರಿದಂತೆ ಎಲ್ಲಾ ರೀತಿಯ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ತಾರತಮ್ಯ ಮಾಡದಂತೆ, ನಿಗದಿತ ದರದಂತೆ ಹಣ ನೀಡಿದರೆ ಅವರಿಗೆ ವಸ್ತುಗಳನ್ನು ಮಾರಾಟ ಮಾಡುವಂತೆ, ಸೇವೆ ನೀಡುವಂತೆ ಅಧಿಕಾರಿಗಳ ತಂಡ ತಿಳಿವಳಿಕೆ ಪತ್ರಗಳನ್ನು ನೀಡಿ, ತಾಕೀತು ಮಾಡಿತು.


ಘಟನೆ ಹಿನ್ನೆಲೆ: 2017ರಲ್ಲಿ ಗ್ರಾಮದಲ್ಲಿ ಡಾ.ಬಿ.ಆ‌ರ್.ಅಂಬೇಡ್ಕ‌ರ್ ಭವನ ನಿರ್ಮಾಣಕ್ಕೆ 6 ಗುಂಟೆ ಜಾಗವನ್ನು ಸರಕಾರ ಮಂಜೂರು ಮಾಡಿತ್ತು. ಆದರೆ ಕಾರಣಾಂತರಗಳಿಂದ ಭವನ ಭವನ ಇದುವರೆಗೆ ನಿರ್ಮಾಣ ಮಾಡಿರುವುದಿಲ್ಲ. ಆದರೆ ಕಳೆದ ಒಂದು ವರ್ಷದಿಂದ ಸವರ್ಣೀಯರು, ಭವನಕ್ಕೆ ಮಂಜೂರದ ಜಾಗದಲ್ಲಿ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ಮುಂದಾದ್ದರು. ಇದೇ ಕಾರಣಕ್ಕೆ ಕಳೆದ ನಾಲ್ಕು ದಿನಗಳ ಹಿಂದೆ ಅಂದರೆ ಜೂನ್ 20 ರಂದು ಜೆಸಿಬಿ ಮೂಲಕ ಜಾಗವನ್ನು ಸ್ವಚ್ಚ ಮಾಡಿ ಪಂಚಾಯತ್‌ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸಿದ್ದರಾಗಿದ್ದರು. ಖುದ್ದು ಪಂಚಾಯತಿ

ಪಂಚಾಯತ್‌ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸಿದ್ದರಾಗಿದ್ದರು. ಖುದ್ದು ಪಂಚಾಯತಿ ಅಧ್ಯಕ್ಷರಿಂದ ಹಿಡಿದು ಪಂಚಾಯತಿ ಸದಸ್ಯರು ಮುಂದೆ ನಿಂತು ಜಾಗ ಸ್ವಚ್ಚತೆ ಮಾಡುವುದಕ್ಕೆ ಮುಂದಾಗಿದ್ದರು ಇದಕ್ಕೆ ದಲಿತರ ಸಮುದಾಯದ ಜನ ಅಡ್ಡಪಡಿಸಿದ್ದಾರೆ. ಇದು ಅಂಬೇಡ್ಕ‌ರ್ ಭವನಕ್ಕೆ ಮಂಜೂರಾದ ಜಾಗ ಹೀಗಾಗಿ ಇಲ್ಲಿ ಪಂಚಾಯತಿ ಕಟ್ಟಡ ಬೇಡ ಎಂದು ವಿರೋಧ ಮಾಡಿದ್ದಾರೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸವರ್ಣೀಯರು ದಲಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ದಲಿತ ಮುಖಂಡ ಹುಸೇನಪ್ಪ ಹೇಳಿದ್ದಾರೆ.


ಜಿಲ್ಲಾ ವರದಿಗಾರ :  ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)