ಕಾಲ್ತುಳಿತ ಘಟನೆ : ಮೃತ ಶಿವಲಿಂಗನ‌ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದ ಸಚಿವ ದರ್ಶನಾಪೂರ್

Udayavani News
0
ಬೆಂಗಳೂರಿನ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ್ತಕ್ಕೆ ಬಲಿಯಾದ ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಹೊನಗೇರಾದ ಶಿವಲಿಂಗನ ಕುಟುಂಬಕ್ಕೆ ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು
25 ಲಕ್ಷ ರೂ.ಗಳ ಚೆಕ್ ವಿತರಿಸಿದರು.

ಶಿವಲಿಂಗನ ತಂದೆ ಚಂದಪ್ಪ, ತಾಯಿ ಲಕ್ಷ್ಮಿ, ಅಣ್ಣ ಹೊನ್ನಪ್ಪ ಅವರನ್ನು ಸಚಿವರು ಮಾತಾಡಿ ಘಟನೆ ಬಗ್ಗೆ ವಿಷಾದ ವ್ಯಕ್ತ ಪಡಿಸಿ ಮಗನನ್ನು ತಂದು ಕೊಡಲು ಯಾರಿಂದಲ್ಲೂ ಸಾಧ್ಯವಿಲ್ಲ. ಕಾರಣ ಇನ್ನೊಬ್ಬ ಮಗ ಹೊನ್ನಪ್ಪನಲ್ಲಿಯೇ ಶಿವಲಿಂಗನನ್ನು ಕಾಣುವ ಮೂಲಕ ನೆಮ್ಮದಿ ಜೀವನ ನಡೆಸಿರಿ.
ಹಣದ ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.
ಘಟನೆ ಬಗ್ಗೆ ಮರುಕ ವ್ಯಕ್ತ ಪಡಿಸಿದರು.
ನಡೆಯಬಾರದ್ದು ನಡೆದಿದೆ ವಿಧಿಯಾಟ, ಎದೆಗುಂದದೆ ಬದುಕು ಸಾಗಿಸಿ, ನಿಮ್ಮ ಇನ್ನೊಬ್ಬ ಮಗನಿಗೆ ಇಲ್ಲಿನ‌ ಮೆಡಿಕಲ್ ಕಾಲೇಜಿನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೌಕರಿ ಕೊಡಿಸುವ ಭರವಸೆ ನೀಡಿದರು.

ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ಮಾತನಾಡಿ, ಸರ್ಕಾರದ ಈ ಪರಿಹಾರದ ಹಣ ಪೊಲಾಗಿಸದೆ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿ ಎಂದರು.
ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನುರು, ಜಿಲ್ಲಾಧಿಕಾರಿ ಡಾ.ಸುಶೀಲಾ, ಹೆಚ್ಚುವರಿ ಡಿಸಿ ಶರಣಬಸಪ್ಪ ಕೋಟಪ್ಪಗೋಳ, ಎಸಿ ಡಾ.ಹಂಪಣ್ಣ ಸಜ್ಜನ್ ಸೇರಿದಂತೆಯೇ ಇತರರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರ :  ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)