ಕಾಂಗ್ರೆಸ್ ಸರಕಾರದಲ್ಲಿ ದೇಶಭಕ್ತರಿಗೆ ಪರಿಹಾರ ಇಲ್ಲ- ಸಿ.ಟಿ.ರವಿ.

Udayavani News
0
ಬೆಂಗಳೂರು: ಕಾಂಗ್ರೆಸ್ ಸರಕಾರದಲ್ಲಿ ದೇಶಭಕ್ತರಿಗೆ ಪರಿಹಾರ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಹಿಂದೂ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದ ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಸಚಿವರು ಮೃತರು ರೌಡಿಶೀಟರ್, ಆದ್ದರಿಂದ ಮನೆಗೆ ಹೋಗಿಲ್ಲ ಎಂದಿದ್ದಾರೆ ಎಂದು ಟೀಕಿಸಿದರು. ಎನ್‍ಕೌಂಟರ್‍ನಲ್ಲಿ ದನಗಳ್ಳ ಕಬೀರ್ ಹತ್ಯೆ ಆಗಿದ್ದಾಗ ಕಾಂಗ್ರೆಸ್ ಶಾಸಕರು, ಮಂತ್ರಿಗಳಾದಿಯಾಗಿ ಅವನ ಮನೆಗೆ ಹೋಗಿದ್ದರು ಎಂದು ಗಮನಕ್ಕೆ ತಂದರು.
ನಕ್ಸಲ್ ಚೆಕ್ ಪೋಸ್ಟ್‍ನಲ್ಲಿ ಕಬೀರ್ ಅನುಮಾನಾಸ್ಪದವಾಗಿ ವಾಹನ ನಿಲ್ಲಿಸದೆ ಡಿಕ್ಕಿ ಹೊಡೆದು ವಾಹನ ಒಯ್ದÀ ಘಟನೆ ನಡೆದಿತ್ತು. ಆಗ ಗುಂಡು ಹಾರಿಸಿದ್ದರಿಂದ ಕಬೀರ್ ಮೃತಪಟ್ಟಿದ್ದ. ಕಬೀರ್ ಮೇಲೆ ಹಲವಾರು ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆಗಳಿದ್ದವು ಎಂದು ಗಮನ ಸೆಳೆದರು. ದನಗಳ್ಳನಿಗೆ ಸರಕಾರದ ಕಡೆಯಿಂದ 10 ಲಕ್ಷ ಪರಿಹಾರ ಕೊಡಲಾಗಿತ್ತು ಎಂದು ಗಮನ ಸೆಳೆದರು.
2023ರಲ್ಲಿ ರಾಮನಗರ ಜಿಲ್ಲೆಯಲ್ಲಿ ಇದ್ರಿಸ್ ಪಾಷಾ ಎಂಬ ದನಗಳ್ಳ ಹೃದಯಾಘಾತದಿಂದ ಮೃತಪಟ್ಟಿದ್ದ. ಮರಣೋತ್ತರ ಪರೀಕ್ಷೆ ಕೂಡ ಅದನ್ನೇ ಹೇಳಿದೆ. ಸತ್ತು ಐದಾರು ಗಂಟೆ ಬಳಿಕ ಘಟನೆಗೆ ಪುನೀತ್ ಕೆರೆಹಳ್ಳಿ ತಂಡ ಕಾರಣ ಒಂದು ದೂರು ಕೊಟ್ಟರು. ಪುನೀತ್ ಕೆರೆಹಳ್ಳಿ ಮೇಲೆ ಕೇಸ್ ದಾಖಲಾಗಿತ್ತು. ಅವನಿಗೆ 25 ಲಕ್ಷ ಪರಿಹಾರ ಕೊಟ್ಟಿದ್ದಾರೆ ಎಂದು ಟೀಕಿಸಿದರು.

Post a Comment

0Comments

Post a Comment (0)