ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹುಣಸಗಿ ತಾಲೂಕಿನ ಪದಾಧಿಕಾರಿಗಳ ಆಯ್ಕೆ.

Udayavani News
0
ಹುಣಸಗಿ : ಪ್ರೊ. ಬಿ. ಕೃಷ್ಣಪ್ಪ ನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) 47/74-75 ಜಿಲ್ಲಾ ಸಮಿತಿ ಯಾದಗಿರಿ ವತಿಯಿಂದ ಹುಣಸಗಿ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಕುರಿತು ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಯಿತು

 ಈ ಸಭೆಯ ಅಧ್ಯಕ್ಷತೆಯನ್ನು ನಿಂಗಣ್ಣ ಎಂ ಗೋನಲ್ , ಜಿಲ್ಲಾ ಸಂಚಾಲಕರು ಯಾದಗಿರಿ ಇವರು ವಹಿಸಿಕೊಂಡರು ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘಟನಾ ಸಂಚಾಲಕರಾದ HR ಬಡಿಗೇರ್ ಸರ್ ಹಾಗೂ ಸುರಪುರ ತಾಲೂಕ DSS ಮುಖಂಡರಾದ ಭೀಮಣ್ಣ ಅಡ್ಡಡೊಡಗಿ ಹಾಗೂ ಹನುಮಂತ ದೊಡ್ಡಮನಿ ಇವರು ಈ ಸಭೆಯಲ್ಲಿ ಉಪಸ್ಥಿತರಿದ್ದರು ಹುಣಸಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಕುಂದು ಕೊರತೆಗಳ ಬಗ್ಗೆ ಹಾಗೂ ಪದಾಧಿಕಾರಿಗಳ ಆಯ್ಕೆಯನ್ನು ಜಿಲ್ಲಾ ಸಂಚಾಲಕರ ನೇತೃತ್ವದಲ್ಲಿ ನೆರವೇರಿತು .


 ಹುಣಸಗಿ ತಾಲೂಕಿನ ತಾಲೂಕ ಸಂಚಾಲಕರಾಗಿ ನಿಂಗಣ್ಣ ತಂದೆ ಬಾಗಪ್ಪ ಕಟ್ಟಿಮನಿ ಸಾ : ಕನ್ನಳ್ಳಿ ಇವರು ಆಯ್ಕೆಯಾಗಿದ್ದಾರೆ ಹಾಗೂ ಸಂಘಟನಾ ಸಂಚಾಲಕರಾಗಿ ಸುರೇಶ ತಂದೆ ಪರಮಣ್ಣ ಹಾದಿಮನಿ ಸಾ: ಕನ್ನಳ್ಳಿ , ಶರಣು ತಂದೆ ಮಲ್ಲಪ್ಪ ಕಟ್ಟಿಮನಿ ಸಾ : ಕನ್ನಳ್ಳಿ , ಶಿವಪ್ಪ ತಂದೆ ಬಸಪ್ಪ ಗುಡಿಮನಿ ಸಾ : ಕೂಡಲಗಿ , ಮಹಾಂತೇಶ ತಂದೆ ಶಿವಪ್ಪ ಬೈಚಬಾಳ ಹಾಗೂ , ರವಿ ತಂದೆ ರಾಯಪ್ಪ ಕೋಳಿಹಾಳ, ಶಿವಶರಣಪ್ಪ ತಂದೆ ತಿಪ್ಪಣ್ಣ ಜಾಲಹಳ್ಳಿ , ಹನುಮಂತ್ರಾಯ ದೊಡ್ಮನೆ , ಶೇಖರ್ ಸುರಪುರ , ಜೆಟ್ಟಪ್ಪ ಹಾದಿಮನಿ , ಪರಶುರಾಮ್ ಚಲವಾದಿ, ಪರಶುರಾಮ್ ಸುರಪುರ, ಜೆಟ್ಟಪ್ಪ ಕಚಕನೂರ 

ಹುಣಸಗಿ ತಾಲೂಕಿನ ಪ್ರೊ. ಬಿ.ಕೃಷ್ಣಪ್ಪ ನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಹೊಸದಾಗಿ ಆಯ್ಕೆಯಾದ ತಾಲೂಕ ಪದಾಧಿಕಾರಿಗಳಿಗೆ ಸಂಘಟನೆಯ ಕುರಿತು ಸಂಘಟನೆಯ ಸಿದ್ಧಾಂತಗಳ ಕುರಿತು ಜಿಲ್ಲಾ ಸಂಚಾಲಕರು ಸಹ ವಿಸ್ತಾರವಾಗಿ ತಿಳಿ ಹೇಳಿದೆ.

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)