ಟ್ರ್ಯಾಕ್ಟರ್‌ಗಳ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಆಲ್ ಇಂಡಿಯಾ ಬಂಜಾರ ಸಂಘಟನೆ ಹುಣಸಗಿ ತಾಲೂಕು ಘಟಕದ ಅಧ್ಯಕ್ಷ ಶೇಖರ ನಾಯ್ಕ.

Udayavani News
0
ನಾರಾಯಣಪುರ: ಏ.15 ರವರೆಗೆ ಎಡ ಹಾಗೂ ಬಲದಂಡೆ ಮುಖ್ಯ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಮಾ.26 ರಂದು ಮಾಜಿ ಸಚಿವ ರಾಜುಗೌಡ ಅವರ ನೇತೃತ್ವದಲ್ಲಿ ಹುಣಸಗಿಯಿಂದ ಬಸವಸಾಗರ ಜಲಾಶಯದವರೆಗೆ ನಡೆಯುವ ಟ್ಯಾಕ್ಟರ್‌ಗಳ ಬೃಹತ್ ಪ್ರತಿಭಟನಾ ರ್ಯಾಲಿಗೆ ಸಂಪೂರ್ಣ ಬೆಂಬಲ ನೀಡಲಾಗುತ್ತದೆ ಎಂದು ಆಲ್ ಇಂಡಿಯಾ ಬಂಜಾರ ಸಂಘಟನೆ ಹುಣಸಗಿ ತಾಲೂಕು ಘಟಕದ ಅಧ್ಯಕ್ಷ ಶೇಖರ ನಾಯ್ಕ ಹೇಳಿದ್ದಾರೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸದ್ಯ ಅಚ್ಚುಕಟ್ಟು ಭಾಗದ ರೈತರೂ ಕಾಲುವೆ ನೀರನ್ನೇ ನಂಬಿ ಸಾವಿರಾರು ರೂ. ಖರ್ಚು ಮಾಡಿ ಶೇಂಗಾ, ಭತ್ತ, ಸಜ್ಜಿ ಸೇರಿ ಇತರೆ ಬೆಳೆಗಳನ್ನು ಬೆಳೆದಿದ್ದಾರೆ. ಕೊನೆ ಹಂತದಲ್ಲಿ ಬೆಳೆದುನಿಂತ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. ಇಲ್ಲದಿದ್ದರೆ ಬೆಳೆಗಳು ಒಣಗಿ ಹೋಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ, ಕಾಲುವೆ ನೀರಿಗಾಗಿ ನಡೆಯುವ ಪ್ರತಿಭಟನೆಯಲ್ಲಿ ರೈತರು, ಸಮುದಾಯದವರು, ಸಂಘಟನೆಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದೆ ಸಂದರ್ಭದಲ್ಲಿ ಶೇಖರ್ ಎಸ್ ನಾಯಕ್,ಜಯರಮ ಜಿ ನಾಯಕ, ತಿರುಪತಿ ಹೆಚ್ ರಾಠೋಡ,  ಸುನಿಲ ಜಾದವ್, ಅಪು ನಾಯಕ, ಲಾಲಾಸಿಂಗ ತಿ ರಾಠೋಡ , ಮಲು ನಾಯಕ, ಪುಂಡಲೀಕ ಹೆಚ್ ಕಾರಬಾರಿ, ರಘು ಬಿ ನಾಯಕ 

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)