ಲಿಂಗಸೂಗೂರು,- ತಾಲೂಕಿನ ಗುರುಗುಂಟಿ ಸುಕ್ಷೇತ್ರ ಶ್ರೀ ಅಮರೇಶ್ವರ ಜಾತ್ರೆ ದಿನಾಂಕ 14ರಂದು ಜರಗಲಿದ್ದು ಜಾತ್ರೆಗೆ ಬರುವ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಪ್ರಸ್ತುತ ವರ್ಷ ಬಿಸಿಲು ಜಾಸ್ತಿಯಾಗಿರು ವದ ರಿಂದ ಕುಡಿಯುವ ನೀರಿನ ವ್ಯವಸ್ಥೆ ಯ ಮಾಡಬೇಕು ಎಂದು ಸಹಾ ಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವರಿಗೆ ಒತ್ತಾಯಿಸಿ ವಿಧಾನ ಪರಿಷತ ಸದಸ್ಯ ಶರಣಗೌಡ ಪಾಟೀಲ ಪತ್ರ ಬರೆದಿರು ವರು.
ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಂಥ ದೇವಸ್ಥಾನವಾಗಿದ್ದು ಜಾತ್ರೆಗೆ ಜಿಲ್ಲೆಯ ಹಾಗೂ ಹೊರ ಭಾಗದ ಜನರು ದೇವರ ದರ್ಶನ ಪಡೆದುಕೊಂಡು ಹೋಗು ತ್ತಾರೆ ಹಾಗೂ ಅಮರೇಶ್ವರ ಕ್ರಾಸ್ ನಿಂದ ರಸ್ತೆಯ ಡಾಂಬರಿಕರಣ, ಕುಡಿ ಯುವ ನೀರಿನ ವ್ಯವಸ್ಥೆ, ಜಾತ್ರೆಯ ಸಮಯದಲ್ಲಿ ನಿರಂತರ ವಿದ್ಯುತ, ಪಾಕಿರ್ಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು ವೈದ್ಯಕೀಯ ವ್ಯವಸ್ಥೆ ಹಾಗೂ ಹೆಚ್ಚಿನ ಪೋಲಿಸ್ ಸಿಬ್ಬಂದಿಗಳನ್ನು ನಿಯೋ ಜನೆ ಮಾಡಬೇಕು ಎಂದು ಬಯ್ಯಾ ಪೂರು ತಿಳಿಸಿರುವರು.